ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ 4000 ವಾಹನಗಳ ತ್ರಿಶಂಕು ಸ್ಥಿತಿ

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀನಗರ,ನ.8-ಭಾರೀ ಹಿಮಪಾತ ಮತ್ತು ಪ್ರತಿಕೂಲ ಹವಾಮಾನದ ಕಾಶ್ಮೀರದ ಜಮ್ಮು-ಶ್ರೀನಗರ ಹೆದ್ದಾರಿಯನ್ನು ಸತತ 2ನೇ ದಿನವೂ ಬಂದ್ ಮಾಡಲಾಗಿದೆ.  ಚಳಿಗಾಲಕ್ಕೆ ಪೂರ್ವದಲ್ಲೇ ಭಾರೀ ಹಿಮಪಾತ ಭೂ ಕುಸಿತಗಳಿಂದಾಗಿ ಹೆದ್ದಾರಿಯ ಬಹುತೇಕ ಕಡೆ 4000ಕ್ಕೂ ಹೆಚ್ಚು ವಾಹನಗಳ ಸಂಚಾರ ಅಸ್ತವ್ಯಸ್ತವಾಗಿದೆ.

ತತ್ಪರಿಣಾಮವಾಗಿ ಪೂಂಚ್ ಮತ್ತುರಜೋರಿ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಮುಘಲ್ ರಸ್ತೆಯಲ್ಲಿ ಸಂಚಾರ ರಸ್ತೆ ಅಯೋಮಯವಾಗಿದ್ದು, ವಾಹನ ಸವಾರರು ಮತ್ತು ಸಾರ್ವಜನಿಕರು ಪರದಾಡುವಂತಾಗಿದೆ.  ಪರಿಸ್ಥಿತಿಯನ್ನು ನಿಯಂತ್ರಿಸಲು ಸಂಚಾರಿ ಪೊಲೀಸರು ಹೆಣಗಾಡುತ್ತಿದ್ದಾರೆ. ಸಮ್ರೋಲಿ ಪ್ರದೇಶದಲ್ಲಿ ಮೊನ್ನೆಯಿಂದ ಭಾರೀ ಮಳೆಯೊಂದಗೆ ಹಿಮ ವರ್ಷಧಾರೆಯಿಂದಾಗಿ ಭೂ ಕುಸಿತಗಳು ಸಂಭವಿಸಿವೆ. ಪರಿಣಾಮ ಈ ಹೆದ್ದಾರಿಯನ್ನು ಬಂದ್ ಮಾಡಲಾಗಿತ್ತು.

ಇಂದು ಯಥಾಸ್ಥಿತಿ ಮುಂದುವರೆದಿರುವ ಹಿನ್ನೆಲೆಯಲ್ಲಿ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಹೀಗಾಗಿ ಒಟ್ಟು 4000ಕ್ಕೂ ಹೆಚ್ಚು ವಾಹನಗಳು ವಿವಿಧೆಡೆ ಸ್ಥಗಿತಗೊಂಡು ತ್ರಿಶಂಕು ಸ್ಥಿತಿ ತಲುಪಿವೆ.

Facebook Comments