ಕಿಲ್ಲರ್ ಕೊರೊನಾಗೆ ಒಂದೇ ದಿನ 4,200 ಮಂದಿ ಸಾವು, 1.36 ಲಕ್ಷಕ್ಕೇರಿದ ಮೃತರ ಸಂಖ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷ್ಟಿಂಗ್ಟನ್/ರೋಮ್, ಏ.16- ವಿಶ್ವಾದ್ಯಂತ ಕೊರೊನಾ ರಾಕ್ಷಸಸ್ವರೂಪ ಪಡೆಯುತ್ತಿದ್ದು,ಒಂದು ರೀತಿಯ ವೈರಸ್ ಭಯೋತ್ಪಾದನೆಗೆ ಕಾರಣವಾಗಿದೆ. ಈ ಹೆಮ್ಮಾರಿಯ ದಾಳಿಗೆ 220ಕ್ಕೂ ಹೆಚ್ಚು ದೇಶಗಳು ಕಂಗೆಟ್ಟಿವೆ.ಆಘಾತಕಾರಿ ಸಂಗತಿಎಂದರೆ ನಿನ್ನೆಒಂದೇ ದಿನ 4,200ಕ್ಕೂ ಅಧಿಕ ಸೋಂಕಿರರನ್ನು ಬಲಿತೆಗೆದುಕೊಂಡಿದೆ. 24 ತಾಸುಗಳ ಅವಧಿಯಲ್ಲಿ 38,000ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ.

ಈವರೆಗೆ ಮೃತರ ಸಂಖ್ಯೆ 1.36 ಲಕ್ಷದಾಟಿದೆ. ಅಲ್ಲದೇ ಸೋಂಕಿರ ಸಂಖ್ಯೆ21 ಲಕ್ಷಮೀರಿದ್ದು, ಪರಿಸ್ಥಿತಿಯ ಭೀಕರತೆ ನಿದರ್ಶನವಾಗಿದೆ.ಸೂಪರ್ ಪವರ್ ರಾಷ್ಟ್ರ ಅಮೆರಿಕವೊಂದರಲ್ಲೇ 27,000ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದು ಕೊಂಡಿರುವ ಕಿಲ್ಲರ್ ಕೊರೊನಾ ಯುರೋಪ್ ಖಂಡದಲ್ಲಿಯೂ ರೌದ್ರಾವತಾರ ಮುಂದುವರಿಸಿವೆ.

ಯುರೋಪ್‍ನಲ್ಲಿ 40ಕ್ಕೂ ಹೆಚ್ಚು ರಾಷ್ಟ್ರಗಳು ಕೋವಿಡ್-19 ಹಾವಳಿಯಿಂದ ಬಾಧಿತವಾಗಿದ್ದು, ಸುಮಾರು 50,000 ಮಂದಿ ಬಲಿಯಾಗಿದ್ದು, 10 ಲಕ್ಷಕ್ಕೂಹೆಚ್ಚು ಜನರಿಗೆ ಸೋಂಕು ತಗುಲಿದೆ. ಇಟಲಿಯಲ್ಲಿಯೂ ಸತ್ತವರ ಸಂಖ್ಯೆ 21,600 ದಾಟಿರುವುದು ಆತಂಕದ ಸಂಗತಿಯಾಗಿದೆ.

ಇದರೊಂದಿಗೆಅಮೆರಿಕ ನಂತರಅತಿ ಹೆಚ್ಚು ಕೊರೊನಾ ಸೋಂಕು ಸಂಭವಿಸಿರುವ ದೇಶ ಎಂಬ ಕುಖ್ಯಾತಿಗೆ ಇಟಲಿ ಪಾತ್ರವಾಗಿದೆ. ನಿನ್ನೆ ಒಂದೇ ದಿನ ಇಟಲಿಯಲ್ಲಿ 578 ಮಂದಿಯಲ್ಲಿ ವೈರಸ್ ಆಪೋಶನ ತೆಗೆದುಕೊಂಡಿದ್ದು, 1,65 ಲಕ್ಷಜನರಿಗೆ ಸೋಂಕು ಬಾಧಿಸುತ್ತಿದೆ.

ಯೂರೋಪ್ ಖಂಡದಲ್ಲಿ ಇಟಲಿ ನಂತರ ಸ್ಪೇನ್ ಸಾವು ಮತ್ತು ಸೋಂಕಿನಲ್ಲಿ ಏರಡನೇ ಸ್ಥಾನದಲ್ಲಿದೆ. ಅಲ್ಲಿ ಈವರೆಗೆ 20,000 ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಇಂಗ್ಲೆಂಡ್‍ನಲ್ಲಿಯೂ ಸಾವು ಮತ್ತು ಸೋಂಕು ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದೆ. ಬ್ರಿಟನ್‍ನಲ್ಲಿ ನಿನ್ನೆಒಂದೇ ದಿನ 761 ಮಂದಿ ಅಸುನೀಗಿದ್ದಾರೆಅಲ್ಲಿ ಸತ್ತವರ ಸಂಖ್ಯೆ 13,900 ದಾಟಿದೆ. 96 ಲಕ್ಷಕ್ಕೂಅಧಿಕ ರೋಗಿಗಳು ನರಳುತ್ತಿದ್ದಾರೆ.

ಜರ್ಮನಿ, ನೆದರ್‍ಲೆಂಡ್ ಮತ್ತಿತ್ತರ ದೇಶಗಳಲ್ಲಿಯೂ ಸಾವು ಮತ್ತು ಸೋಂಕಿ ಪ್ರಮಾಣ ಹೆಚ್ಚಾಗುತ್ತಿದೆ. ಬ್ರೆಜಿಲ್, ಮೆಕ್ಸಿಕೋ, ಈಕ್ವೆಡಾರ್, ಸೌದಿ ಅರೇಬಿಯಾ, ಆಫ್ರಿಕಾ ದೇಶಗಳಲ್ಲಿಯೂ ಇದೇ ಪರಿಸ್ಥಿತಿ ಮುಂದುವರಿದೆ.

ಕೊರೊನಾ ವೈರಸ್‍ನ ಕೇಂದ್ರ ಬಿಂದು ಚೀನಾ, ಜಪಾನ್, ಪಾಕಿಸ್ತಾನ, ದಕ್ಷಿಣಕೊರಿಯಾ ದೇಶಗಳಲ್ಲಿಯೂ ಹೊಸ ಹೊಸ ಕೋಂಕು ಪ್ರಕರಣಗಳು ವರದಿಯಾಗುತ್ತಲೇ ಇವೆ. ಕಿಲ್ಲರ್ ಕೊರೊನಾಗೆ ಕಡಿವಾಣ ಹಾಕದಿದ್ದರೆ ಇಡೀ ವಿಶ್ವಕ್ಕೆ ದೊಡ್ಡ ಕಂಟಕವಾಗುವುದರಲ್ಲಿ ಲವಲೇಶ ಅನುಮಾನವಿಲ್ಲ .

Facebook Comments

Sri Raghav

Admin