ಮಹಾಮಾರಿಗೆ 24 ಗಂಟೆಯಲ್ಲಿ 4205 ಮಂದಿ ಬಲಿ, 348421 ಹೊಸ ಕೇಸ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಮೇ.12-ದೇಶದಲ್ಲಿ ಕೊರೊನಾ ಸೋಂಕು ಇಳಿಕೆಯಾಗುತ್ತಿದ್ದರೂ ಸಾವಿನ ಪ್ರಮಾಣ ಮಾತ್ರ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ನಿನ್ನೆಯಿಂದ 4205 ಮಂದಿ ಮಹಾಮಾರಿಗೆ ಪ್ರಾಣ ಕಳೆದುಕೊಂಡಿದ್ದಾರೆ.

ಕಳೆದ 24 ಗಂಟೆಗಳಲ್ಲಿ 3,48,421 ಮಂದಿಗೆ ಸೋಂಕು ತಗುಲಿದೆ. 4000ಕ್ಕೂ ಹೆಚ್ಚು ಮಂದಿ ಸೋಂಕಿಗೆ ಬಲಿಯಾಗುವ ಮೂಲಕ ಮಹಾಮಾರಿಗೆ ಪ್ರಾಣ ಕಳೆದುಕೊಂಡವರ ಒಟ್ಟು ಸಂಖ್ಯೆ 2,54,197ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.

ದಿನೇ ದಿನೇ ಸೋಂಕು ಹೆಚ್ಚುತ್ತಿರುವುದರಿಂದ ದೇಶದ 2,33,40,938 ಮಂದಿ ಕೊರೊನಾ ಸೋಂಕಿತರಾಗಿದ್ದಾರೆ.ಕಳೆದ ಹಲವಾರು ದಿನಗಳ ನಂತರ ಕೊರೊನಾ ಚೇತರಿಕೆ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ.
ಚೇತರಿಕೆ ಪ್ರಮಾಣ ಶೇ.83.04ಕ್ಕೆ ಏರಿಕೆಯಾಗಿರುವುದರಿಂದ ಸಕ್ರಿಯ ಸೋಂಕು ಪ್ರಮಾಣ 37 ಲಕ್ಷದ ಅಸುಪಾಸಿಗೆ ಬಂದು ನಿಂತಿದೆ.

2.33 ಕೋಟಿ ಸೋಂಕಿತರಲ್ಲಿ ಈಗಾಗಲೇ 1,93 ಕೋಟಿ ಮಂದಿ ಚೇತರಿಸಿಕೊಂಡು ಮನೆಗಳಿಗೆ ಮರಳಿದ್ದಾರೆ. ಒಟ್ಟಾರೆ ಸೋಂಕಿನ ಪ್ರಮಾಣ ದಿನೇ ದಿನೇ ಇಳಿಕೆಯತ್ತ ಮುಖ ಮಾಡಿರುವುದರಿಂದ ಜನ ಮತ್ತಷ್ಟು ಜಾಗೃತರಾಗಿ ಮಹಾಮಾರಿಯನ್ನು ಹೊಡೆದೊಡಿಸಲು ಸಹಕರಿಸುವ ಅಗತ್ಯವಿದೆ.

Facebook Comments

Sri Raghav

Admin