ಭಾರತದ ವಿದೇಶಿ ವಿನಿಮಯ ದಾಖಲೆಯತ್ತ, ಫೋರೆಕ್ಸ್ ವಹಿವಾಟು 423 ಶತಕೋಟಿ ಡಾಲರ್‌ಗೆ ಏರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಜೂ.17-ಭಾರತವು ವಿದೇಶಿ ವಿನಿಮಯ(ಫೋರೆಕ್ಸ್) ವಹಿವಾಟಿನಲ್ಲಿ ಸಾರ್ವಕಾಲಿಕ ದಾಖಲೆ ನಿರ್ಮಿಸುವತ್ತ ಸಾಗಿದೆ. ಭಾರತ ಜೂನ್ 7ಕ್ಕೆ ಕೊನೆಗೊಂಡ ವಾರಾಂತ್ಯದ ವಹಿವಾಟಿನಲ್ಲಿ ಫೋರೆಕ್ಸ್ ಮೀಸಲು 1.686 ಶತಕೋಟಿ ಡಾಲರ್‍ಗಳಿಂದ 423.554 ಶತಕೋಟಿ ಡಾಲರ್‍ನ ಐತಿಹಾಸಿಕ ಮಟ್ಟದ ಸನಿಹ ತಲುಪಿದೆ.

ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಶುಕ್ರವಾರ ಬಿಡುಗಡೆ ಮಾಡಿರುವ ಅಂಕಿಅಂಶ ಮಾಹಿತಿಯಿಂದ ಈ ಭಾರತದ ಈ ಮಹತ್ಸಾಧನೆ ವಿವರ ಲಭ್ಯವಾಗಿದೆ.  ಇದಕ್ಕೂ ಹಿಂದಿನ ವಾರದಲ್ಲಿ ವಿದೇಶಿ ವಿನಿಮಯ ಮೀಸಲು 1,875 ಶತಕೋಟಿ ಡಾಲರ್‍ಗಳಿಂದ 421.867 ಶತಕೋಟಿ ಡಾಲರ್ ತಲುಪಿತ್ತು.

ಕಳೆದ ವರ್ಷ ಏಪ್ರಿಲ್‍ನಲ್ಲೂ ದೇಶದ ವಿದೇಶಿ ವಿನಿಮಯ 425.028 ಶತಕೋಟಿ ಡಾಲರ್ ತಲುಪಿ ಸಾರ್ವಕಾಲಿಕ ದಾಖಲೆಯಾಗಿತ್ತು. ಈಗ ಫೋರೆಕ್ಸ್ ಮತ್ತೆ ಆ ಹಂತದ ಸಮೀಪಕ್ಕೆ ಬಂದಿರುವುದು ಗಮನಾರ್ಹ ಸಂಗತಿ.

ಚಿನ್ನ ಮೀಸಲು ವಹಿವಾಟಿನಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಆರ್‍ಬಿಐ ದತ್ತಾಂಶ ಮಾಹಿತಿ ಪ್ರಕಾರ, ವಿದೇಶಿ ಚಿನ್ನ ವಹಿವಾಟು 33.958 ಶತಕೋಟಿ ಡಾಲರ್‍ಗಳಷ್ಟಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ