43 ಭಾರತೀಯ ಮೀನುಗಾರರನ್ನು ಸೆರೆಹಿಡಿದ ಪಾಕಿಸ್ತಾನ
ಇಸ್ಲಾಮಾಬಾದ್, ನ.21-ಅರಬ್ಬಿ ಸಮುದ್ರದಲ್ಲಿ ತನ್ನ ಜಲಗಡಿಯನ್ನು ಪ್ರವೇಶಿಸಿದ ಆರೋಪಕ್ಕಾಗಿ ಭಾರತದ ಕನಿಷ್ಠ 43 ಮೀನುಗಾರರನ್ನು ಪಾಕಿಸ್ತಾನವು ನಿನ್ನೆ ಬಂಧಿಸಿದೆ.
ಸಿಂಧ್ ಪ್ರಾಂತ್ಯದ ಕರಾವಳಿಯಲ್ಲಿ ಪಾಕಿಸ್ತಾನದ ಸಾಗರ ರಕ್ಷಣಾ ಸಿಬ್ಬಂದಿ ಬೆಸ್ತರನ್ನು ಸೆರೆಹಿಡಿದು ಬಂದರು ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ನಂತರ ಬಂಧಿತರನ್ನು ಹೆಚ್ಚಿನ ವಿಚಾರಣೆಗಾಗಿ ಕರಾಚಿಗೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಾಕಿಸ್ತಾನ ನೌಕಾಪಡೆ ಸಿಬ್ಬಂದಿ ಗುಜರಾತ್ನ ಅಹಮದಾಬಾದ್ ಕರಾವಳಿ ಗಡಿ ಬಳಿ ಶನಿವಾರ 8 ಮಂದಿ ಭಾರತೀಯ ಮೀನುಗಾರರನ್ನು ದೋಣಿಗಳ ಸಹಿತ ಬಂಧಿಸಿದ್ದರು.
ಕೊಲಂಬೋ ವರದಿ :
ಜಲಗಡಿ ಪ್ರದೇಶದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ 11 ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಸಿಬ್ಬಂದಿ ನಿನ್ನೆ ಬಂಧಿ ಟ್ರಾಲ್ ಬೋಟ್ಗಳು ಮತ್ತು ಬಲೆಗಳನ್ನು ವಶಪಡಿಸಿಕೊಂಡಿತ್ತು. ತಮಿಳುನಾಡಿನ ರಾಮೇಶ್ವರಂದ ಬೆಸ್ತರು ನೆಡುಂತೀವು ದ್ವೀಪದ ಬಳಿ ಮೀನುಗಾರಿಕೆಯಲ್ಲಿ ತೊಡಗಿದ್ದಾಗ ಅವರನ್ನು ಬಂಧಿಸಲಾಗಿದೆ.
► Follow us on – Facebook / Twitter / Google+