ಉದ್ಯೋಗ ಅರಸಿ ದೆಹಲಿಗೆ ಬಂದು ಬೆಂಕಿಗಾವುತಿಯಾದ ಶ್ರಮಿಕರು..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಡಿ.8-ರಾಷ್ಟ್ರ ರಾಜಧಾನಿಯಲ್ಲಿ ಇಂದು ಮುಂಜಾನೆ ಸಂಭವಿಸಿದ ಭೀಕರಅಗ್ನಿ ಆಕಸ್ಮಿಕದಲ್ಲಿ ಬೆಂಕಿಯ ಕೆನ್ನಾಲಿಗೆ ಆಪೋಶನ ತೆಗೆದುಕೊಂಡ ನತದೃಷ್ಟರಲ್ಲಿ ಬಿಹಾರದ ಬಡಕಾರ್ಮಿಕರೇ ಹೆಚ್ಚಿನವರು. ಬಿಹಾರದಲ್ಲಿ ಜೀವನ ಕಂಡುಕೊಳ್ಳಲಾಗದೇ ಉದ್ಯೋಗ ಅರಸಿ ದೆಹಲಿಗೆ ಬಂದಿದ್ದ ಬಿಹಾರದ ಶ್ರಮಿಕ ವರ್ಗದ ಕುಟುಂಬದ ಬದುಕಿಗೆ ಈ ದುರ್ಘಟನೆ ಕೊಳ್ಳಿ ಇಟ್ಟಾಂತಾಗಿದೆ. ದೆಹಲಿಯ ಫಿಲ್ಮಿಸ್ತಾನ ಪ್ರದೇಶದ ರಾಣಿ ಝಾನ್ಸಿ ರಸ್ತೆಯ ಅನಜ್ ಮಂಡಿ ಬಡ ಕಾರ್ಮಿಕರ ತುತ್ತಿನ ಚೀಲ ತುಂಬುತಿತ್ತು.

ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿಗಾಹುತಿಯಾದ ಕಟ್ಟಡದಲ್ಲಿ ಬ್ಯಾಗುಗಳು, ಬಟ್ಟೆಗಳು ಮತ್ತು ಪ್ಲಾಸ್ಟಿಕ್ ಬಾಟಲ್‍ಗಳನ್ನು ತಯಾರಿ ಸಲಾಗುತಿತ್ತು. ಇಲ್ಲಿ ಬಿಹಾರದ ಕಾರ್ಮಿಕರು ಕಷ್ಟಪಟ್ಟು ಕೆಲಸ ಮಾಡುತ್ತಿದ್ದರು. ತಮ್ಮ ದೈನಂದಿನ ಜೀವನ ಸಾಗಿಸಲು ಬೇಕಾದ ಹಣವನ್ನು ಮಾತ್ರ ಇಟ್ಟುಕೊಂಡು ಉಳಿದಿದ್ದನ್ನು ಬಿಹಾರದಲ್ಲಿ ತನ್ನ ಕುಟುಂಬಗಳಿಗೆ ಕಾರ್ಮಿಕರು ರವಾನಿಸುತ್ತಿದ್ದರು.

ಕಾರ್ಖಾನೆಯಲ್ಲಿಯೇ ಕೆಲಸ ಮಾಡಿ ಮಂಡಿಯ ಪುಟ್ಟ ಹೋಟೆಲ್‍ನಲ್ಲಿ ಊಟ ಮಾಡಿ ರಾತ್ರಿ ಕಟ್ಟಡದಲ್ಲಿ ಮಲಗುತ್ತಿದ್ದರು. ಇಂದು ಬೆಳಗ್ಗೆ ಅಗ್ನಿ ರೂಪದಲ್ಲಿ ವಕ್ಕರಿಸಿದ ಜವರಾಯ ನಿದ್ರೆಯಲ್ಲಿದ್ದ ಅವರನ್ನು ಚಿರನಿದ್ರೆ ರವಾನಿಸಿದ. ಈ ಅಗ್ನಿ ಆಕಸ್ಮಿಕದಲ್ಲಿ ಬಹುಮಹಡಿ ಕಟ್ಟಡ ಆಹುತಿಯಾಗಿದ್ದು, ಕಾರ್ಖಾನೆಯಲ್ಲಿದ್ದ ಯಂತ್ರೋಪ ಕರಣಗಳು, ಬ್ಯಾಗ್, ಬಟ್ಟೆ ಮತ್ತು ಬಾಟಲ್ ದಾಸ್ತಾನುಗಳು ಸುಟ್ಟು ಕರಕಲಾಗಿದ್ದು, ಲಕ್ಷಾಂತರ ರೂ.ಗಳ ನಷ್ಟ ಸಂಭವಿಸಿದೆ. ಬಹುತೇಕ ಕಾರ್ಮಿಕರು ಸುಟ್ಟ ಗಾಯಗಳಿಂದ ಮತ್ತು ದಟ್ಟ ಹೊಗೆಯಿಂದ ಉಸಿರುಗಟ್ಟಿ ಮೃತಪಟ್ಟರು.

ಸುದ್ದಿ ತಿಳಿದ ಕೂಡಲೇದುರಂತ ಸ್ಥಳಕ್ಕೆ ಧಾವಿಸಿದ ಮೃತರು ಮತ್ತು ಗಾಯಾಳುಗಳ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಸಂತ್ರಸ್ತರ ಬಂಧು-ಮಿತ್ರರು ಬಿಹಾರದಿಂದದೆಹಲಿಗೆ ಧಾವಿಸಿ ದುರಂತದ ಬಗ್ಗೆ ಮಮ್ಮಲ ಮರುಗಿದ್ದಾರೆ.

Facebook Comments

Sri Raghav

Admin