44 ಗುಜರಾತ್ ಶಾಸಕರನ್ನು ಅದ್ದೂರಿಯಾಗಿ ಬೀಳ್ಕೊಟ್ಟ ಡಿ.ಕೆ. ಬ್ರದರ್ಸ್

ಈ ಸುದ್ದಿಯನ್ನು ಶೇರ್ ಮಾಡಿ

DK-Brothers

ಬೆಂಗಳೂರು/ಅಹಮದಾಬಾದ್,ಆ.7-ಗುಜರಾತ್‍ನಲ್ಲಿ ಆಪರೇಷನ್ ಕಮಲದ ಭಯದಿಂದ ಕಳೆದ ಒಂದು ವಾರದ ಹಿಂದೆ ಬೆಂಗಳೂರಿಗೆ ಬಂದಿದ್ದ 44 ಮಂದಿ ಕಾಂಗ್ರೆಸ್ ಶಾಸಕರು ಮತ್ತೆ ತವರು ರಾಜ್ಯಕ್ಕೆ ಮರಳಿದ್ದಾರೆ. ಸೋಮವಾರ ಮುಂಜಾನೆ ಬೆಂಗಳೂರಿನಿಂದ ಹೊರಟ ಕಾಂಗ್ರೆಸ್ ಶಾಸಕರು ಇಂದು ಬೆಳಗಿನ ಜಾವ ಅಹಮದಾಬಾದ್‍ಗೆ ತಲುಪಿದ್ದಾರೆ. ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಮಧ್ಯರಾತ್ರಿ 2.30ಕ್ಕೆ ಇಂಡಿಗೋ ವಿಮಾನದಲ್ಲಿ ತೆರಳಿದ್ದ ಶಾಸಕರು ಇಂದು ಬೆಳಗ್ಗೆ 5.30ಕ್ಕೆ ಅಹಮದಾಬಾದ್ ತಲುಪಿದರು.

ತವರಿಗೆ ವಾಪಸ್ ಬಂದ ತಮ್ಮ ಪಕ್ಷದ ಶಾಸಕರನ್ನು ರಾಜ್ಯ ಕಾಂಗ್ರೆಸ್‍ಅಧ್ಯಕ್ಷ ಹಾಗೂ ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಿರುವ ಅಹ್ಮದ್ ಪಟೇಲ್ ಬರಮಾಡಿಕೊಂಡರು. ಗುಜರಾತ್ ಶಾಸಕರು ಬೆಂಗಳೂರಿಂದ ವಾಪಸ್ಸು ತೆರಳುವ ಮುನ್ನ ಗುಜರಾತ್ ಶಾಸಕರಿಗೆ ಮಸಚಿವ ಡಿಕೆ ಶಿವಕುಮಾರ್ ಮತ್ತವರ ಸಹೋದರ, ಸಂಸದ ಡಿಕೆ ಸುರೇಶï ಅವರು ಶಾಸಕರಿಗೆ ಸನ್ಮಾನ ಮಾಡಿ ಬೀಳ್ಕೊಟ್ಟರು. ರಾಜ್ಯಸಭಾ ಚುನಾವಣೆಗಾಗಿ ಬಿಜೆಪಿಯಿಂದ ಶಾಸಕರ ಕುದುರೆ ವ್ಯಾಪಾರವಾಗುವ ಭೀತಿಯಿಂದ ಗುಜರಾತ್‍ನಿಂದ ಬೆಂಗಳೂರಿಗೆ ಆಗಮಿಸಿದ್ದ ಕಾಂಗ್ರೆಸ್ ಶಾಸಕರು ಗುಜರಾತ್‍ಗೆ ನಿರ್ಗಮಿಸಿದ್ದಾರೆ.

ರಾಜ್ಯದಲ್ಲಿ 9 ದಿನಗಳ ಕಾಲ ರೆಸಾರ್ಟ್‍ನಲ್ಲಿ ನೆಲೆಸಿದ್ದ ಶಾಸಕರ ವಾಸ್ತವ್ಯದ ಉಸ್ತುವಾರಿಯನ್ನ ವಹಿಸಿಕೊಂಡಿದ್ದು, ರಾಜ್ಯದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಇದರ ಬೆನ್ನಲ್ಲೇ, ಐಟಿ ದಾಳಿ ಸಚಿವ ಡಿ.ಕೆ.ಶಿವಕುಮಾರ್‍ಗೆ ದೊಡ್ಡ ಶಾಕ್ ನೀಡಿತ್ತು.   ಮೂರು ದಿನಗಳ ಕಾಲ ಸಚಿವರು ಮನೆಯಲ್ಲಿಯೇ ಇರಬೇಕಾಯಿತು. ಆದರೆ, ದಾಳಿಯ ಬಳಿಕ ಮತ್ತೆ ರೆಸಾರ್ಟ ನಲ್ಲಿ ಶಾಸಕರನ್ನ ನೋಡಿಕೊಳ್ಳುವ ಉಸ್ತುವಾರಿಯನ್ನ ವಹಿಸಿಕೊಂಡಿದ್ದರು. ಇದೀಗ, ನಾಳೆ ರಾಜ್ಯಸಭೆ ಚುನಾವಣೆ ಇರುವ ಹಿನ್ನೆಲೆಯಲ್ಲಿ ಎಲ್ಲಾ ಗುಜರಾತ್ ಶಾಸಕರು ಅಹಮದಾಬಾದ್‍ಗೆ ತೆರಳಿದ್ದರು. ಇನ್ನು, ಸಚಿವ ಡಿಕೆಶಿ ಹಾಗೂ ಸಂಸದ ಸುರೇಶï ಗುಜರಾತ್ ಶಾಸಕರನ್ನ ಏರ್ಪೋರ್ಟ್ ವರೆಗೆ ತೆರಳಿ ಬೀಳ್ಕೊಟ್ಟರು.

ಎರಡು ಕೆಎಸ್‍ಆರ್‍ಟಿಸಿ ಬಸ್‍ಗಳಲ್ಲಿ ಈಗಲ್ಟನ್ ರೆಸಾರ್ಟ್‍ನಿಂದ ಬಿಟ್ಟ ಗುಜರಾತ್ ಶಾಸಕರು, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ್ರು. ಗುಜರಾತ್ ಶಾಸಕರ ಬಸ್ಸಿನಲ್ಲೇ ಸಚಿವ ಡಿ.ಕೆ.ಶಿವಕುಮಾರ ಹಾಗೂ ಸಂಸದ ಸುರೇಶ್‍ಕೂಡ ಆಗಮಿಸಿದ್ರು. ತಡರಾತ್ರಿ 2-40ರ ಸುಮಾರಿಗೆ ಗುಜರಾತ್ ನ ಅಹಮದಾಬಾದ್‍ಗೆ ಪ್ರಯಾಣ ಬೆಳೆಸಿದ ಶಾಸಕರು, ಅಲ್ಲಿನ ಖಾಸಗಿ ರೆಸಾರ್ಟ ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಬಳಿಕ ನಾಳೆ ಗಾಂಧಿನಗರಕ್ಕೆ ತೆರಳಿ ಮತ ಚಲಾವಣೆ ಮಾಡಲಿದ್ದಾರೆ. ಈ ವೇಳೆ ಮಾತನಾಡಿದ ಸಂಸದ ಡಿಕೆ ಸುರೇಶ್, ಕಾಂಗ್ರೆಸ್‍ನ ಎಲ್ಲಾ 44 ಶಾಸಕರು ಒಟ್ಟಾಗಿದ್ದು, ಪಕ್ಷದ ಅಭ್ಯರ್ಥಿ ಅಮಹದ್ ಪಟೇಲ್ ಪರ ಮತ ಚಲಾವಣೆ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಶಾಸಕಿ ಕಾನಾಂಬಿಯಾ ರಾಥೋಡ್, ಡಿ.ಕೆ ಶಿವಕುಮಾರ್ ಹಾಗೂ ಡಿ.ಕೆ ಸುರೇಶ್ ಅವರಿಗೆ ರಕ್ಷಾ ಬಂಧನದ ಹಬ್ಬವಾಗಿ ರಾಕಿ ಕಟ್ಟಿದರು.
ಇನ್ನು ಗುಜರಾತ್ ಶಾಸಕರು ಬೆಂಗಳೂರು ಬಿಡುವ ಮುನ್ನ ಸಚಿವ ಡಿಕೆ ಶಿವಕುಮಾರ ಮತ್ತವರ ಸಹೋದರ, ಸಂಸದ ಡಿಕೆ ಸುರೇಶ್ ಅವರು ಶಾಸಕರಿಗೆ ಸನ್ಮಾನ ಮಾಡಿ ಬೀಳ್ಕೊಟ್ಟರು. ಈ ವೇಳೆ ಮಾತನಾಡಿದ ಸಂಸದ ಡಿಕೆ ಸುರೇಶ, ಕಾಂಗ್ರೆಸ್ನ ಎಲ್ಲಾ 44 ಶಾಸಕರು ಒಟ್ಟಾಗಿದ್ದು, ಪಕ್ಷದ ಅಭ್ಯರ್ಥಿ ಅಮಹದ್ ಪಟೇಲ್ ಪರ ಮತ ಚಲಾವಣೆ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಗೆ ನಾಳೆ ಚುನಾವಣೆ ನಡೆಯಲಿದೆ. ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಕಾಂಗ್ರೆಸ್‍ಶಾಸಕರನ್ನು ತನ್ನತ್ತ ಸೆಳೆಯುವ ನಿಟ್ಟಿನಲ್ಲಿ ಆಪರೇಷನ್ ಕಮಲಕ್ಕೆ ಮುಂದಾಗಿದೆ ಎಂದು ಆರೋಪಿಸಿ 44 ಮಂದಿ ಶಾಸಕರು ಜು.29ರಂದು ಗುಜರಾತ್ ತೊರೆದು ಬೆಂಗಳೂರಿಗೆ ಬಂದಿದ್ದರು. 29ರಿಂದ ಬೆಂಗಳೂರು ಹೊರವಲಯದ ಬಿಡದಿ ಸಮೀಪದ ಈಗಲ್ಟನ್‍ರೆಸಾರ್ಟ್‍ನಲ್ಲಿ ತಂಗಿದ್ದರು. ಒಟ್ಟಿನಲ್ಲಿ ತಮ್ಮ ಮೇಲಿನ ಐಟಿ ದಾಳಿಯ ಬಳಿಕವೂ ಎದೆಗುಂದದೇ ಹೈಕಮಾಂಡï ತಮಗೆ ವಹಿಸಿದ್ದ ಕೆಲಸವನ್ನ ಮಾಡಿ ಮುಗಿಸಿದ್ದಾರೆ, ಇನ್ನು, ರಾಜ್ಯ ಸಚಿವ ಸಂಪುಟ ಸಭೆ ಇರುವ ಹಿನ್ನಲೆ ಡಿ.ಕೆ.ಶಿವಕುಮಾರ್ ಗುಜರಾತ್‍ಶಾಸಕರ ಜೊತೆ ಪ್ರಯಾಣ ಬೆಳೆಸಲಿಲ್ಲ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin