46.5 ಡಿಗ್ರಿ ಸೆಲ್ಸಿಯಸ್ ತಲುಪಿದ ಉಷ್ಣಾಂಶ, ದೇಶದ ವಿವಿಧ ರಾಜ್ಯಗಳಲ್ಲಿ ಉಷ್ಣಹವೆಗೆ ತತ್ತರಿಸಿದ ಜನ

ಈ ಸುದ್ದಿಯನ್ನು ಶೇರ್ ಮಾಡಿ

Heat-Wawe

ನವದೆಹಲಿ/ಮುಂಬೈ, ಮಾ.30-ದೇಶದ ವಿವಿಧ ರಾಜ್ಯಗಳಲ್ಲಿ ಉಷ್ಣಹವೆಯಿಂದ ಜನರು ಹೈರಾಣಗಾಗಿದ್ದಾರೆ. ಮಹಾರಾಷ್ಟ್ರದ ರಾಯ್‍ಗಢ್‍ನ ಭೀರಾದಲ್ಲಿ ಹಿಂದೆಂದೂ ಕಂಡು ಕೇಳರಿಯದಂಥ 46.5 ಡಿಗ್ರಿ ಸೆಲ್ಸಿಯಸ್ ಅಸಾಧಾರಣ ಉಷ್ಣಾಂಶದಿಂದ ಸಾರ್ವಜನಿಕರು ಬೆಂದು ಬಸವಳಿದಿದ್ದಾರೆ.  ವಿವಿಧ ರಾಜ್ಯಗಳಲ್ಲಿ ಕಳೆದ ಎರಡು ದಿನಗಳಿಂದ ತಾಪಮಾನದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದ್ದು, ಹಲವೆಡೆ ಬೇಸಿಗೆ ಧಗೆ, ಬಿಸಿಲಿನ ಝಳ, ಮತ್ತು ಉಷ್ಣ ಹವೆಯಿಂದಾಗಿ ಜನರು ಕಂಗಲಾಗಿದ್ದು ತಣ್ಣೀರು, ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ.

ಮಹಾರಾಷ್ಟ್ರದ ರಾಯ್‍ಗಢ್‍ನ ಭೀರಾದಲ್ಲಿ 46.5 ಡಿ.ಸೆ. ತಾಪಮಾನ ದಾಖಲಾಗಿದ್ದು, ದೇಶದಲ್ಲಿ ಇದೇ ಮೊದಲ ಬಾರಿಗೆ ಈ ಮಟ್ಟದ ಉಷ್ಣಾಂಶ ಕಂಡುಬಂದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇಷ್ಟು ಗರಿಷ್ಠ ಮಟ್ಟದ ಅಸಾಮಾನ್ಯ ತಾಪಮಾನ ದಾಖಲಾಗಿದ ಕಾರಣ ಕುರಿತು ಇಲಾಖೆ ಕೂಲಂಕಷ ಪರಾಮರ್ಶೆ ತನಿಖೆ ಕೈಗೊಂಡಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin