ಬೆಂಗಳೂರಲ್ಲಿ ಲಾಕ್‍ಡೌನ್ ನಿಯಮ ಉಲ್ಲಂಘಿಸಿದ 46,488 ವಾಹನಗಳು ವಶಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.10-ಲಾಕ್‍ಡೌನ್ ನಿಯಮಗಳನ್ನು ಉಲ್ಲಂಘಿಸಿ ನಗರದಲ್ಲಿ ಸಂಚರಿಸುತ್ತಿದ್ದ ಒಟ್ಟು 46,488 ವಾಹನಗಳನ್ನು ನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ.ಇದರಲ್ಲಿ 41,376 ದ್ವಿಚಕ್ರ ವಾಹನಗಳು, 2,264 ತ್ರಿಚಕ್ರ ವಾಹನಗಳು, 2,808 ನಾಲ್ಕು ಚಕ್ರದ ವಾಹನಗಳು ಸೇರಿವೆ. 753 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಎನ್‍ಡಿಎಂಎ ಕಾಯ್ದೆ ಪ್ರಕಾರ ನಗರದಲ್ಲಿ 688 ಪ್ರಕರಣಗಳು ದಾಖಲಾಗಿದ್ದು, 440 ಮಂದಿಯನ್ನು ಬಂಧಿಸಲಾಗಿದೆ.

# ಪೊಲೀಸ್ ಸಿಬ್ಬಂದಿ ಗುಣುಮುಖ:
1754 ಮಂದಿ ನಗರ ಪೊಲೀಸ್ ಸಿಬ್ಬಂದಿ ಕೊರೊನಾ ಸೋಂಕು ತಗುಲಿತ್ತು. ಇದರಲ್ಲಿ 1554 ಮಂದಿ ಗುಣಮುಖರಾಗಿದ್ದಾರೆ. 184 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೊನಾ ಸೋಂಕಿನಿಂದ ಇದುವರೆಗೂ 16 ಮಂದಿ ಮೃತಪಟ್ಟಿದ್ದಾರೆ.

Facebook Comments

Sri Raghav

Admin