24 ಗಂಟೆಯಲ್ಲಿ ದೇಶದಾದ್ಯಂತ ಕೊರೋನಾಗೆ 465 ಸಾವು, 16,000 ಮಂದಿಗೆ ಪಾಸಿಟಿವ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ಜೂ. 24-ಕಿಲ್ಲರ್ ಕೊರೊನಾ ವೈರಸ್ ಅಟ್ಟಹಾಸ ದೇಶದಲ್ಲಿ ಮತ್ತಷ್ಟು ತೀವ್ರವಾಗುತ್ತಿದ್ದು, 24 ಗಂಟೆಗಳಲ್ಲಿ ಸುಮಾರು 16,000 ಸೋಂಕು ಪ್ರಕರಣಗಳು ದಾಖಲಾಗಿದೆ. ಇದೇ ಅವಯಲ್ಲಿ 465 ರೋಗಿಗಳು ಅಸುನೀಗಿದ್ದಾರೆ.

ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಉಲ್ಬಣಗೊಂಡ ನಂತರ ಇಷ್ಟು ಸಂಖ್ಯೆಯ ದಾಖಲೆ ಪ್ರಮಾಣದ ಪಾಸಿಟಿವ್ ಪ್ರಕರಣ ದಾಖಲಾಗಿರುವುದು ಈವರೆಗೆ ಭಾರತದಲ್ಲಿ ಸೋಂಕಿತರ ಸಂಖ್ಯೆ 4.56 ಲಕ್ಷ ದಾಟಿದ್ದು, ಒಟ್ಟು 14,476 ಮಂದಿ ಮೃತಪಟ್ಟಿದ್ದಾರೆ.

ಅಲ್ಲದೇ ಸತತ ಮೂರು ವಾರಗಳಿಂದ ಸೋಂಕಿತರ ಸಂಖ್ಯೆ 9,000+ ಹಾಗೂ ನಿರಂತರ 13 ದಿವಸಗಳಿಂದ 10,000+ ಪ್ರಮಾಣದಲ್ಲೇ ಮುಂದುವರಿದಿದೆ. ಅಲ್ಲದೇ 14,000+ ಪಾಸಿಟಿವ್ ಕೇಸ್‍ಗಳು ದಾಖಲಾಗಿರುವುದು ಸತತ ಐದನೇ ದಿನವಾಗಿದೆ.

ನಾಳೆ ವೇಳೆಗೆ ದೇಶದಲ್ಲಿ ಸಾವಿನ ಪ್ರಮಾಣ ಸುಮಾರು 15,100 ಮತ್ತು ಸೋಂಕು ಬಾತರ ಸಂಖ್ಯೆ 4.70 ಲಕ್ಷ ತಲುಪುವ ಆತಂಕವಿದೆ. ನಿನ್ನೆ ಒಂದೇ ದಿನ ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 465 ಮಂದಿ ಸಾವಿಗೀಡಾಗಿದ್ದು, ಒಟ್ಟಾರೆ ಮೃತ ಸಂಖ್ಯೆ 14,011ಕ್ಕೇರಿದೆ ಭಾರತದಲ್ಲಿ. ಸೋಂಕು ಪೀಡಿತರ ಸಂಖ್ಯೆ 4,40,215 ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

# 24 ತಾಸುಗಳಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಸಂಭವಿಸಿದ 312 ಸಾವಿನ ವಿವರ :
ಮಹಾರಾಷ್ಟ್ರ 248, ದೆಹಲಿ 68, ತಮಿಳುನಾಡು 39, ಗುಜರಾತ್ 26, ಉತ್ತರಪ್ರದೇಶ 19, ಪಶ್ಚಿಮ ಬಂಗಾಳ 11, ಹರಿಯಾಣ ಮತ್ತು ರಾಜಸ್ತಾನ ತಲಾ 9, ಆಂಧ್ರಪ್ರದೇಶ ಮತ್ತು ಕರ್ನಾಟಕ ತಲಾ 8, ಪಂಜಾಬ್ ಮತ್ತು ಮಧ್ಯಪ್ರದೇಶ ತಲಾ 4, ತೆಲಂಗಾಣ 3, ಜಮ್ಮು-ಕಾಶ್ಮೀರ, ಒಡಿಶಾ ಮತ್ತು ಉತ್ತರಾಖಂಡ ತಲಾ 2, ಹಾಗೂ ಕೇರಳ, ಬಿಹಾರ ಮತ್ತು ಪುದುಚೇರಿ ಡ್ ರಾಜ್ಯಗಳಲ್ಲಿ ತಲಾ ಒಂದೊಂದು ಸಾವು ಪ್ರಕರಣ ವರದಿಯಾಗಿದೆ.

ಇಂದು ಬೆಳಗ್ಗೆಯಿಂದಲೂ ದೇಶದ ಬಹುತೇಕ ರಾಜ್ಯಗಳಲ್ಲಿ ಹೊಸ ಸೋಂಕು ಮತ್ತು ಸಾವಿನ ಪ್ರಕರಣಗಳು ವರದಿಯಾಗುತ್ತಲೇ ಇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಿಲ್ಲರ್ ಕೊರೊನಾ ನಿಯಂತ್ರಣಕ್ಕಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಹೆಮ್ಮಾರಿ ನಿಯಂತ್ರಣಕ್ಕೆ ಬರುತ್ತಿಲ್ಲ.

ಕೆಲವು ರಾಜ್ಯಗಳಲ್ಲಿ ಮತ್ತೆ ಲಾಕ್‍ಡೌನ್ ಜಾರಿಗೊಳಿಸುವ ಬಗ್ಗೆ ಗಂಭೀರ ಪರಿಶೀಲನೆ ನಡೆಯುತ್ತಿದೆ. ಈ ನಡುವೆ 24 ತಾಸುಗಳಲ್ಲಿ ಚೇತರಿಕೆ ಪ್ರಮಾಣದಲ್ಲಿ ಶೇ.56.71ರಷ್ಟು ಏರಿಕೆ ಕಂಡುಬಂದಿರುವುದು ಸಮಾಧಾನಕಾರ ಸಂಗತಿ

Facebook Comments

Sri Raghav

Admin