ಕರ್ನಾಟಕ ಜಲಪ್ರಳಯಕ್ಕೆ 48 ಮಂದಿ ಬಲಿ..! ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ನಷ್ಟವಾಗಿದೆ ಗೊತ್ತೇ ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.13- ರಾಜ್ಯದ ಉತ್ತರ ಕರ್ನಾಟ, ಕರಾವಳಿ ತೀರಾಪ್ರದೇಶ, ಮಲೆನಾಡು ಹಾಗೂ ಮಧ್ಯಕರ್ನಾಟಕ ಸೇರಿದಂತೆ 16 ಜಿಲ್ಲೆಗಳಲ್ಲಿ ಸಂಭವಿಸಿ ಅತಿವೃಷ್ಟಿಯಿಂದ 48 ಮಂದಿ ಸಾವನ್ನಪ್ಪಿ 4 ಲಕ್ಷಕ್ಕೂ ಅಧಿಕ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬೆಳೆ ನಷ್ಟವಾಗಿದೆ ಎಂದು ಸರ್ಕಾರದ ಅಧಿಕೃತ ಮೂಲಗಳು ತಿಳಿಸಿವೆ.

ಅತಿ ಹೆಚ್ಚು ಮಳೆ ಸುರಿದ ಬೆಳಗಾವಿಯಲ್ಲಿ 13 ಮಂದಿ, ಬಾಗಲಕೋಟೆ 3, ಉತ್ತರಕನ್ನಡ 4, ದಕ್ಷಿಣ ಕನ್ನಡ 2, ಶಿವಮೊಗ್ಗ 3, ಉಡುಪಿ 2, ಕೊಡಗು 8, ಚಿಕ್ಕಮಗಳೂರು 7, ಮೈಸೂರು 2 ಹಾಗೂ ಧಾರವಾಡದಲ್ಲಿ ಮೂವರು ಸೇರಿದಂತೆ 48 ಮಂದಿ ಪ್ರವಾಹಕ್ಕೆ ಸಿಲುಕಿ ಸಾವನ್ನಪ್ಪಿದ್ದು, 16 ಮಂದಿ ಕಣ್ಮರೆಯಾಗಿದ್ದಾರೆ.

ಕಣ್ಮರೆಯಾಗಿರುವವರ ಶೋಧ ಕಾರ್ಯವನ್ನು ಮುಂದುವರೆಸಲಾಗಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ. ಪ್ರವಾಹದಿಂದಾಗಿ ಈ ಬಾರಿ 837 ಪ್ರಾಣಿಗಳು ಸಾವನ್ನಪ್ಪಿವೆ. ಬೆಳಗಾವಿಯಲ್ಲಿ 273, ಬಾಗಲಕೋಟೆ 66, ಧಾರವಾಡದಲ್ಲಿ 187, ಹಾವೇರಿಯಲ್ಲಿ 109, ಉತ್ತರಕನ್ನಡದಲ್ಲಿ 77, ಶಿವಮೊಗ್ಗದಲ್ಲಿ 87, ಗದಗ 25, ಉಡುಪಿ 5 ಸೇರಿದಂತೆ 837 ಜಾನುವಾರುಗಳು ಸಾವನ್ನಪ್ಪಿವೆ.

ರಾಜ್ಯದ ಒಟ್ಟು 86 ತಾಲ್ಲೂಕುಗಳನ್ನು ಪ್ರವಾಹಪೀಡಿತ ತಾಲ್ಲೂಕುಗಳೆಂದು ಸರ್ಕಾರ ಘೋಷಣೆ ಮಾಡಿದೆ. ಬೆಳಗಾವಿಯ 10, ಬಾಗಲಕೋಟೆ 6, ಬಿಜಾಪುರ 4, ರಾಯಚೂರು 3, ಯಾದಗಿರಿ 3, ಉತ್ತರ ಕನ್ನಡ 11, ದಕ್ಷಿಣ ಕನ್ನಡ 5, ಶಿವಮೊಗ್ಗ 7, ಉಡುಪಿ 3, ಕೊಡಗು 3, ಚಿಕ್ಕಮಗಳೂರು 4, ಹಾಸನ 8, ಗದಗ 3, ಮೈಸೂರು 3, ಧಾರವಾಡ 5, ಹಾವೇರಿ 6 ಹಾಗೂ ಕಲಬುರಗಿಯ 2 ತಾಲ್ಲೂಕುಗಳನ್ನು ಪ್ರವಾಹ ಪೀಡಿತ ಎಂದು ಘೋಷಿಸಲಾಗಿದೆ.

ಪ್ರವಾಹದಿಂದಾಗಿ 2217 ಗ್ರಾಮಗಳು ಹಾನಿಗೊಳಗಾಗಿವೆ. ಇದರಲ್ಲಿ ಬೆಳಗಾವಿ 371, ಬಾಗಲಕೋಟೆ 193, ವಿಜಾಪುರ 73, ರಾಯಚೂರು 47, ಯಾದಗಿರಿ 08, ಉತ್ತರ ಕನ್ನಡ 216, ದ.ಕನ್ನಡ 50, ಶಿವಮೊಗ್ಗ 556, ಹಾಸನ 132, ಗದಗ 175, ಮೈಸೂರು 51, ಧಾರವಾಡ 21, ಹಾವೇರಿ 138, ಕಲ್ಬುರ್ಗಿಯಲ್ಲಿ 50 ಗ್ರಾಮಗಳು ಅತಿವೃಷ್ಟಿಯಿಂದ ಹಾನಿಗೊಳಗಾಗಿವೆ.

17 ಜಿಲ್ಲೆಗಳಲ್ಲಿ ಈವರೆಗೂ 6,77,382 ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ಬೆಳಗಾವಿ 4,08,945, ಬಾಗಲಕೋಟೆ 1,25,030 ವಿಜಯಪುರ 8650, ರಾಯಚೂರು 5,800, ಉ.ಕನ್ನಡ 3088, ದ.ಕನ್ನಡ 3516, ಶಿವಮೊಗ್ಗ 6200, ಕೊಡಗು 4600, ಚಿಕ್ಕಮಗಳೂರು 1900, ಹಾಸನ 3200, ಗದಗ 51,171, ಧಾರವಾಡ 35,680, ಹಾವೇರಿ 14,350 ಸೇರಿದಂತೆ ಸಂತ್ರಸ್ತರನ್ನು ಜಿಲ್ಲಾಡಳಿತ ಸುರಕ್ಷಿತ ಸ್ಥಳಗಳಿಗೆ ತೆರವು ಮಾಡಿದೆ.

17 ಜಿಲ್ಲೆಗಳಲ್ಲಿ ವಿವಿಧ ಕಡೆ 1,224 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಬೆಳಗಾವಿ 460, ಬಾಗಲಕೋಟೆ 236, ವಿಜಯಪುರ 7, ರಾಯಚೂರು 22, ಯಾದಗಿರಿ 15, ಉತ್ತರ ಕನ್ನಡ 74, ದ.ಕನ್ನಡ 12, ಶಿವಮೊಗ್ಗ 24, ಕೊಡಗು 44, ಚಿಕ್ಕಮಗಳೂರು 25, ಹಾಸನ 11, ಗದಗ 44, ಮೈಸೂರು 32, ಧಾರವಾಡ 81, ಹಾವೇರಿ 137 ಸೇರಿದಂತೆ ಮತ್ತಿತರ ಕಡೆ ಪರಿಹಾರ ಕೇಂದ್ರಗಳನ್ನು ಆರಂಭಿಸಲಾಗಿದೆ.

51,015 ಪರಿಹಾರ ಕೇಂದ್ರದಲ್ಲಿ ಸಂತ್ರಸ್ತರಿಗೆ ನೆರವು ನೀಡಲಾಗುತ್ತಿದೆ. 50,595 ಪ್ರಾಣಿಗಳನ್ನು ರಕ್ಷಣೆ ಮಾಡಲಾಗಿದ್ದು, 32,305 ಪ್ರಾಣಿಗಳಿಗೆ ಪರಿಹಾರ ಕೇಂದ್ರದಲ್ಲಿ ಅಗತ್ಯ ನೆರವು ನೀಡಲಾಗುತ್ತದೆ. 4,21,514 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ.

ಇದರಲ್ಲಿ ಬೆಳಗಾವಿ ಅತಿ ಹೆಚ್ಚು ಎಂದರೆ 1,57,301 ಹೆಕ್ಟೇರ್, ಬಾಗಲಕೋಟೆ 36,700, ವಿಜಯಪುರ 16,642, ರಾಯಚೂರು 2821, ಯಾದಗಿರಿ 2360, ಉ.ಕನ್ನಡ 12,533, ಶಿವಮೊಗ್ಗ 18,319, ಧಾರವಾಡ 1,07,077, ಹಾವೇರಿ 59,773 ಹೆಕ್ಟೇರ್, ಕಲ್ಬುರ್ಗಿ 5,830 ಸೇರಿದಂತೆ ಒಟ್ಟು 4,30,953 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ.

ಪ್ರವಾಹದಿಂದಾಗಿ ಈವರೆಗೂ 48,915 ಮನೆಗಳು ಹಾನಿಗೊಳಗಾಗಿವೆ. ಬೆಳಗಾವಿ 1,3789, ಬಾಗಲಕೋಟೆ 48, ಉ.ಕನ್ನಡ 2,755, ದ.ಕನ್ನಡ 509, ಶಿವಮೊಗ್ಗ 1,105, ಗದಗ 5,927, ಧಾರವಾಡ 7931, ಹಾವೇರಿ 6566 ಮನೆಗಳು ಹಾನಿಗೀಡಾಗಿವೆ ಎಂದು ಎಂದು ಮುಖ್ಯಮಂತ್ರಿಗಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Facebook Comments

Sri Raghav

Admin