4 ಕಾಡಾನೆ ಪ್ರತ್ಯಕ್ಷ : ರೈತರು, ಗ್ರಾಮಸ್ಥರು ಕಂಗಾಲು

ಈ ಸುದ್ದಿಯನ್ನು ಶೇರ್ ಮಾಡಿ

ಮಳವಳ್ಳಿ, ಜು.6- ಗ್ರಾಮಕ್ಕೆ ಹೊಂದಿಕೊಂಡಂತಿರುವ ಕೆರೆಯಲ್ಲಿ ನಾಲ್ಕು ಕಾಡಾನೆಗಳ ಹಿಂಡು ಬೆಳಗ್ಗೆಯಿಂದಲೇ ಕಾಣಿಸಿಕೊಂಡಿರುವುದು ರೈತರು, ಗ್ರಾಮಸ್ಥರಲ್ಲಿ ಆತಂಕವನ್ನುಂಟು ಮಾಡಿದೆ. ಮಳವಳ್ಳಿ ತಾಲ್ಲೂಕು ವದೇನಕೊಪ್ಪಲು ಗ್ರಾಮಕ್ಕೆ ಹೊಂದಿಕೊಂಡಿರುವ ಕೆರೆಯಲ್ಲಿ ಕಾಡಾನೆ ಹಿಂಡು ಪ್ರತ್ಯಕ್ಷವಾಗಿದೆ.

ನಿನ್ನೆ ಬಿಜೆಪುರ, ಬೆಳಕವಾಡಿ, ಹೊಸಹಳ್ಳಿ ಭಾಗಗಳಲ್ಲಿ ಕಾಡಾನೆಗಳು ಕಾಣಿಸಿಕೊಂಡು ರೈತರು ಸಾಕಷ್ಟು ಫಸಲನ್ನು ಹಾಳು ಮಾಡಿತ್ತು. ಈ ನಡುವೆ ಇಂದು ಕಿರುಗಾವಲು ಹೋಬಳಿಯ ವದೇನಕೊಪ್ಪಲು ಗ್ರಾಮಕ್ಕೆ ಹೊಂದಿಕೊಂಡಿರುವ ಕೆರೆಯಲ್ಲಿ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಭೀತಿ ಉಂಟು ಮಾಡಿದೆ.

ಸುದ್ದಿ ತಿಳಿದ ಪೊಲೀಸರು ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕಾಡಾನೆಗಳನ್ನು ಕಾಡಿನತ್ತ ಓಡಿಸಲು ಶ್ರಮಿಸಿದರು. ಕಳೆದ ನಾಲ್ಕೈದು ದಿನಗಳಿಂದ ಆನೆಗಳು ಗ್ರಾಮಗಳತ್ತ ಬರುತ್ತಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

Facebook Comments