ಮಾರ್ನಸ್ ಆಕರ್ಷಕ ಶತಕ, ಬೃಹತ್ ಮೊತ್ತದತ್ತ ಅಸೀಸ್

ಈ ಸುದ್ದಿಯನ್ನು ಶೇರ್ ಮಾಡಿ

ಬ್ರಿಸ್ಬೇನ್, ಜ.15- ಅನುಭವ ಬೌಲರ್‍ಗಳ ಕೊರತೆ ಹಾಗೂ ಕಳಪೆ ಫೀಲ್ಡಿಂಗ್ನ ಲಾಭ ಪಡೆದ ಆಸೀಸ್ ಆಟಗಾರ ಮಾರ್ನಸ್ ಲ್ಯಾಬುಸ್ಟಾಗ್ನೆ ಅವರು ಆಕರ್ಷಕ ಶತಕ ಗಳಿಸುವ ಮೂಲಕ ಆಸೀಸ್ ತಂಡವನ್ನು ಬೃಹತ್À ಮೊತ್ತದತ್ತ ಕೊಂಡೊಯ್ಯಲು ಸಫಲರಾಗಿದ್ದಾರೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾಕ್ಕೆ ಭಾರತದ ಯುವ ಬೌಲರ್‍ಗಳು ಶಾಕ್ ನೀಡಿದರಾದರೂ ನವದೀಪ್À ಶೈನಿ ಗಾಯಗೊಂಡಿದ್ದು , ನಾಯಕ ಅಜೆಂಕ್ಯಾರಹಾನೆ ಸೇರಿದಂತೆ ಕೆಲವು ಆಟಗಾರರ ಕಳಪೆ ಫೀಲ್ಟಿಂಗ್‍ನಿಂದಾಗಿ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 5 ವಿಕೆಟ್‍ಗಳನ್ನು 274 ರನ್‍ಗಳನ್ನು ಕಲೆಹಾಕಿದೆ.

#ವಾರ್ನರ್ ಫ್ಲಾಪ್:
ಸಿಡ್ನಿ ಟೆಸ್ಟ್‍ನಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಆಸ್ಟ್ರೇಲಿಯಾದ ಸ್ಫೋಟಕ ಆಟಗಾರ ಡೇವಿಡ್ ವಾರ್ನರ್ ಅವರು ಗಬ್ಬಾದಲ್ಲೂ ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ಎಡವಿದರು.
4 ಎಸೆತಗಳನ್ನು ಎದುರಿಸಿ 1 ರನ್ ಗಳಿಸಿದ್ದಾಗ ಭಾರತದ ವೇಗಿ ಮೊಹಮ್ಮದ್ ಸಿರಾಜ್‍ರ ಬೌಲಿಂಗ್‍ನಲ್ಲಿ ಎರಡನೇ ಸ್ಲೀಪ್‍ನಲ್ಲಿದ್ದ ಉಪನಾಯಕ ರೋಹಿತ್ ಶರ್ಮಾ ಹಿಡಿದ ಅದ್ಭುತ ಕ್ಯಾಚಿಗೆ ಬಲಿಯಾದರು. ತದ ನಂತರ ಮತ್ತೊಬ್ಬ ಆರಂಭಿಕ ಆಟಗಾರ ಮಾಕ್ರ್ಯೂಸ್ ಹ್ಯಾರೀಸ್ 5 ರನ್ ಗಳಿಸಿ ಶಾರ್ದೂಲ್ ಠಾಕೂರ್ ಅವರು ಎಸೆದ ಮೊದಲ ಬಾಲ್‍ನಲ್ಲಿ ವಾಷಿಂಗ್ಟನ್ ಸುಂದರ್‍ಗೆ ಕ್ಯಾಚ್ ನೀಡಿ ಮೈದಾನ ತೊರೆದರು.

#ಮಾರ್ಸಸ್- ಸ್ಟೀವ್ ಆಸರೆ:
ಆಸೀಸ್‍ನ ಆರಂಭಿಕ ಆಟಗಾರರಿಬ್ಬರೂ 17 ರನ್‍ಗಳಾಗುವಷ್ಟರಲ್ಲಿ ಮೈದಾನ ತೊರೆದರೂ ಕೂಡ 3ನೆ ವಿಕೆಟ್‍ಗೆ ಜೊತೆಗೂಡಿದ ಸಿಡ್ನಿ ಟೆಸ್ಟ್‍ನಲ್ಲಿ ರಕ್ಷ್ಮತ್ಮಾಕ ಆಟವಾಡಿದ್ದ ಮಾರ್ಸನ್ ಲ್ಯಾಬುಸ್ಟೆಂಗ್ನೆ ಹಾಗೂ ಸ್ಟೀವನ್ ಸ್ಮಿತ್ ಅವರು ಇನ್ನಿಂಗ್ಸ್ ಕಟ್ಟುವ ಜವಾಬ್ರಾಯನ್ನು ಹೊತ್ತರು.
ಈ ಜೋಡಿಯೂ 3ನೇ ವಿಕೆಟ್‍ಗೆ 70 ರನ್‍ಗಳ ಜೊತೆಯಾಟ ನೀಡಿ ಅಪಾಯಕಾರಿ ಆಗುತ್ತಿದ್ದಂತೆ ವಾಷಿಂಗ್ಟನ್ ಸುಂದರ್ ಬೌಲಿಂಗ್‍ನಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿದ ಸ್ಮಿತ್, ರೋಹಿತ್ ಶರ್ಮಾಗೆ ಕ್ಯಾಚ್ ನೀಡಿ ಹೊರ ನಡೆದರು.

#ಶತಕ ಜೊತೆಯಾಟ:
ಸ್ಮಿತ್ ಔಟಾದ ನಂತರ ಕ್ರೀಸ್‍ಗೆ ಬಂದ ವೇಡ್ ಅವರು ಕೂಡ ತಾಳ್ಮೆಯುತ ಆಟಕ್ಕೆ ಮುಂದಾದರೂ, ಈ ಜೋಡಿಯು 37.5 ಓವರ್‍ಗಳಲ್ಲಿ ತಂಡ ಮೊತ್ತವನ್ನು 100ರ ಗಡಿ ಮುಟ್ಟಿಸಿದರು. ಈ ನಡುವೆ ಮಾರ್ನಸ್ ಅವರು ತಮ್ಮ ಜೀವಮಾನದ 5ನೆ ಶತಕ ಗಳಿಸಿದರು. ಈ ಜೋಡಿಯು ತಂಡದ ಮೊತ್ತವನ್ನು 200ರ ಗಡಿ ಮುಟ್ಟಿಸಿದ್ದಾಗ ವೇಗಿ ನಟರಾಜನ್‍ರ ಬೌಲಿಂಗ್‍ನಲ್ಲಿ ವೇಡ್ (45ರನ್, 6 ಬೌಂಡರಿ) ಶಾರ್ದೂಲ್ ಠಾಕೂರ್‍ಗೆ ಕ್ಯಾಚ್ ನೀಡುವ ಮೂಲಕ ಅರ್ಧಶತಕ ವಂಚಿತರಾದರು.

ನಂತರ ಮಾರ್ನಸ್ ಕೂಡ 108 ರನ್ ಗಳಿಸಿ ನಟರಾಜನ್ ಬೌಲಿಂಗ್‍ನಲ್ಲಿ ವಿಕೆಟ್ ಕೀಪರ್‍ಗೆ ಕ್ಯಾಚ್ ನೀಡಿ ಮೈದಾನ ತೊರೆದರು. ಮಾರ್ನಸ್ ಔಟಾದ ನಂತರ ರನ್ ಹಿಗ್ಗಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ಕ್ಯಾಮರೂನ್ ಗ್ರೀನ್ (28ರನ್, 3 ಬೌಂಡರಿ) ಹಾಗೂ ನಾಯಕ ಟೀಮ್ ಪೇನ್ 38ರನ್, 5 ಬೌಂಡರಿ) ಗಳಿಸಿದ್ದು ದಿನದಾಟಕ್ಕೆ 5 ವಿಕೆಟ್ ಕಳೆದುಕೊಂಡಿರುವ ಆಸ್ಟ್ರೇಲಿಯಾ 274 ರನ್ ಗಳಿಸಿತ್ತು.

#ನಟರಾಜನ್, ಸುಂದರ್ ಪಾದಾರ್ಪಣೆ:
ಟೀಂ ಇಂಡಿಯಾದ ಅನುಭವಿ ಬೌಲರ್‍ಗಳ ಅನುಪಸ್ಥಿತಿಯಲ್ಲಿ ನಟರಾಜನ್ ಹಾಗೂ ವಾಷಿಂಗ್ಟನ್ ಸುಂದರ್À ಅವರು 300 ಹಾಗೂ 301ನೆ ಆಟಗಾರರಾಗಿ ಪಾದಾರ್ಪಣೆ ಮಾಡಿದ್ದಾರೆ.
ಮೊದಲ ಪಂದ್ಯದಲ್ಲೇ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿರುವ ನಟರಾಜನ್ ಅವರು ಲಾಬುಸ್ಟಂಗ್ನೆ ಹಾಗೂ ಮ್ಯಾಥ್ಯೂ ವೇಡ್‍ರ ವಿಕೆಟ್‍ಗಳನ್ನು ಕಬಳಿಸಿದರೆ, ವಾಷಿಂಗ್ಟನ್ ಸುಂದರ್ ಅವರು ಸ್ಟೀವನ್ ಸ್ಮಿತ್ ಅವರ ವಿಕೆಟ್ ಕೆಡವುವ ಮೂಲಕ ಶುಭಾರಂಭ ಮಾಡಿದ್ದಾರೆ.

Facebook Comments