ಬ್ರಿಸ್ಬೆನ್ ಟೆಸ್ಟ್ : ಭಾರತಕ್ಕೆ 328 ರನ್ ಗುರಿ

ಈ ಸುದ್ದಿಯನ್ನು ಶೇರ್ ಮಾಡಿ

ಬ್ರಿಸ್ಬೇನ್, ಜ.18- ಇಲ್ಲಿನ ಗಾಬಾದಲ್ಲಿ ನಡೆಯುತ್ತಿರುವ ಬಾರ್ಡರ್- ಗವಾಸ್ಕರ್ ಟ್ರೋಫಿ ಅಂತಿಮ ಕ್ರಿಕೆಟ್ ಟೆಸ್ಟ್‍ನ ನಾಲ್ಕನೇ ದಿನದ ಆಟ ಮುಕ್ತಾಯದ ವೇಳೆ ಪ್ರವಾಸಿ ಭಾರತ ತಂಡ ವಿಕೆಟ್ ನಷ್ಟವಿಲ್ಲದೆ 4ರನ್ ಗಳಿಸಿದೆ. ಭಾರತದ ಬೌಲರುಗಳಾದ ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ಆಸ್ಟ್ರೇಲಿಯಾ ತಂಡವನ್ನು 2ನೇ ಇನ್ನಿಂಗ್ಸ್‍ನಲ್ಲಿ 294 ರನ್‍ಗಳಿಗೆ ಕಟ್ಟಿಹಾಕಿದ್ದಾರೆ. 328 ರನ್‍ಗಳ ಗುರಿ ಮುಟ್ಟಲು ಎಲ್ಲ ಸಾಧ್ಯತೆಗಳು ಹಾಗೂ ಶಕ್ತಿ ಭಾರತೀಯ ತಂಡಕ್ಕೆ ಇದೆ ಎನ್ನುವ ಕಾರಣದಿಂದ ಅಸ್ಟ್ರೇಲಿಯ ತಂಡ ಗೊಂದಲದಲ್ಲಿ ಮುಳುಗಿದೆ.

ಇದೊಂದು ಕ್ಲಿಷ್ಟಕರ ಸ್ಥಿತಿಯಾಗಿ ಅಸ್ಟ್ರೇಲಿಯ ತಂಡಕ್ಕೆ ಪರಿಣಮಿಸಿದ್ದರೆ, ಅಜಿಂಕ್ಯ ರಹಾನೆ ನೇತೃತ್ವದ ಭಾರತದ ತಂಡಕ್ಕೆ ಸವಾಲಾಗಿರುವುದಂತೂ ನಿಜ. ಎರಡನೇ ಇನ್ನಿಂಗ್ಸ್‍ನಲ್ಲಿ 294 ರನ್ ಗಳಿಗೆ ತನ್ನೆಲ್ಲ ವಿಕೆಟ್‍ಗಳನ್ನು ಕಳೆದುಕೊಂಡ ಆಸ್ಟ್ರೇಲಿಯ ತಂಡಕ್ಕೆ ಸಿರಾಜ್ ಮತ್ತು ಠಾಕೂರ್ ಅವರ ಮಾರಕ ಬೌಲಿಂಗ್ ಜಂಟಿಯಾಗಿ 9 ವಿಕೆಟ್ ಪಡೆದಿದ್ದು ಆಘಾತ ತಂದಿದೆ.

ಸಿರಾಜ್ 29.5 ಓವರುಗಲ್ಲಿ ಐದು ಮೆಡಿನ್ ಮಾಡಿ 73 ರನ್ ನೀಡಿ 5 ವಿಕೆಟ್ ಪಡೆದರೆ, ಠಾಕೂರ್ 61 ರನ್ ನೀಡಿ 4 ವಿಕೆಟ್ ಪಡೆದು, ಟೆಸ್ಟ್ ಕ್ರಿಕೆಟ್‍ನಲ್ಲಿ ಪಾದಾರ್ಪಣೆ ಮಾಡಿದ ಪ್ರಥಮ ಟೆಸ್ಟ್‍ನಲ್ಲಿ ಎರಡೂ ಇನ್ನಿಂಗ್ಸ್‍ನಿಂದ ಏಳು ವಿಕೆಟ್ ಪಡೆದು ತೃಪ್ತಿ ಗಳಿಸಿದ್ದಾರೆ. 3ನೇ ದಿನದ ಆಟ ಮುಕ್ತಾಯ ಸಂದರ್ಭದಲ್ಲಿ ಭಾರತ ಇನ್ನಿಂಗ್ಸ್ ಆರಂಭಿಸಿ ರೋಹಿತ್ ಶರ್ಮ ಮತ್ತು ಶುಭ್‍ಮನ್ ಗಿಲ್ ಔಟಾಗದೆ 4 ರನ್ ಗಳಿಸಿದ್ದರು. ಬ್ರಿಸ್ಬೇನ್‍ನಲ್ಲಿ 2ನೇ ಇನ್ನಿಂಗ್ಸ್‍ನ ಗೆಲ್ಲಲು ಅತಿ ಹೆಚ್ಚು ಸ್ಕೋರು 236 ನೀಡಲಾಗಿತ್ತು.

ಸ್ಕೋರ್ ವಿವರ:
ಆಸ್ಟ್ರೇಲಿಯ: ಮೊದಲ ಇನ್ನಿಂಗ್ಸ್: 369 ಮತ್ತು 2ನೇ ಇನ್ನಿಂಗ್ಸ್ 294
ಭಾರತ: ಮೊದಲ ಇನ್ನಿಂಗ್ಸ್ 336 ಮತ್ತು 2ನೇ ಇನ್ನಿಂಗ್ಸ್ 4-0
ಶುಭ್‍ಮನ್ ಗಿಲ್: 0 ನಾಟೌಟ್
ರೋಹಿತ್ ಶರ್ಮ: 4 ನಾಟೌಟ್

Facebook Comments