ಬ್ರಿಸ್ಬೇನ್ ಟೆಸ್ಟ್ ಗೆ ಆಸೀಸ್ ತಂಡ ಪ್ರಕಟ

ಈ ಸುದ್ದಿಯನ್ನು ಶೇರ್ ಮಾಡಿ

ಬ್ರಿಸ್ಬೇನ್, ಜ.14- ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯ ಅಂತಿಮ ಪಂದ್ಯಕ್ಕೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯು ತಂಡವನ್ನು ಪ್ರಕಟಿಸಿದೆ. ಸಿಡ್ನಿ ಟೆಸ್ಟ್‍ನಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಆಸೀಸ್‍ನ ಆರಂಭಿಕ ಆಟಗಾರ ವಿಲ್ ಪುಕೋವ್ಸ್ಕಿ ಭುಜದ ನೋವಿನಿಂದ ಬಳಲುತ್ತಿರುವುದರಿಂದ ಅವರನ್ನು ಬ್ರಿಸ್ಬೇನ್ ಟೆಸ್ಟ್‍ನಿಂದ ಹೊರಗಿಟ್ಟು ಅವರ ಬದಲಿಗೆ ಮಾರ್ಕಸ್ ಹ್ಯಾರಿಸ್ 11ರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ.

ಹ್ಯಾರಿಸ್ 2019ರ ಇಂಗ್ಲೆಂಡ್, ಆಸ್ಟ್ರೇಲಿಯಾ ನಡುವಿನ ಆ್ಯಶಿಸ್ ಸರಣಿಯ ನಂತರ ಮೈದಾನಕ್ಕಿಳಿಯ ದಿದ್ದರೂ ಕೂಡ ಉತ್ತಮ ಹೋರಾಟ ನಡೆಸಲಿದ್ದಾರೆ ಎಂದು ಆಸೀಸ್ ನಾಯಕ ಟೀಮ್ ಪೈನ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಆಸ್ಟ್ರೇಲಿಯಾದ ಸ್ಫೋಟಕ ಆಟಗಾರ ಡೇವಿಡ್ ವಾರ್ನರ್‍ರೊಂದಿಗೆ ಹ್ಯಾರಿಸ್ ಇನ್ನಿಂಗ್ಸ್ ಕಟ್ಟುವ ಜವಾಬ್ದಾರಿಯನ್ನು ಹೊತ್ತಿದ್ದಾರೆ.

#ತಂಡದ ವಿವರ
ಡೇವಿಡ್ ವಾರ್ನರ್, ಮಾರ್ಕಸ್ ಹ್ಯಾರಿಸ್, ಮಾರ್ನಸ್ ಲಾಬುಶೇನ್, ಸ್ಟೀವ್ ಸ್ಮಿತ್, ಮ್ಯಾಥ್ಯೂ ವೇಡ್, ಕ್ಯಾಮೆರಾನ್ ಗ್ರೀನ್, ಟಿಮ್ ಪೈನ್ (ನಾಯಕ/ ವಿಕೆಟ್ ಕೀರ್ಪ), ಮಿಚೆಲ್ ಸ್ಟಾರ್ಕ್, ಪ್ಯಾಟ್, ಜೋಶ್ ಹ್ಯಾಜಲ್‍ವುಡ್, ನಥನ್ ಲಿಯಾನ್.

Facebook Comments