5ಕೋಟಿ ರೂ. ಬಂಡವಾಳದೊಂದಿಗೆ ನವೋದ್ಯಮ ಸ್ಥಾಪಿಸುವವರಿಗೆ ರಿಯಾಯ್ತಿ ದರದಲ್ಲಿ 1 ಎಕರೆ ಭೂಮಿ

ಈ ಸುದ್ದಿಯನ್ನು ಶೇರ್ ಮಾಡಿ

Make-In-Karnataka--01

ಬೆಂಗಳೂರು, ಫೆ.13– ಕರ್ನಾಟಕದಲ್ಲಿ 5ಕೋಟಿ ರೂ. ಬಂಡವಾಳದೊಂದಿಗೆ ನವೋದ್ಯಮ ಸ್ಥಾಪಿಸಲು ಮುಂದಾಗುವವರಿಗೆ ಕೈಗಾರಿಕಾ ಪ್ರದೇಶದಲ್ಲಿ ರಿಯಾಯ್ತಿ ದರದಲ್ಲಿ ಒಂದು ಎಕರೆ ಭೂಮಿ ಒದಗಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.  ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆದ ಮೇಕ್ ಇನ್ ಕರ್ನಾಟಕ ಎರಡು ದಿನಗಳ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೈಗಾರಿಕೆಯನ್ನು ಪೋತ್ಸಾಹಿಸಲು ಉತ್ಪಾದನಾ, ಕೈಗಾರಿಕಾ ಸಂಸ್ಥೆಗಳಿಗೆ ಒಂದು ಲಕ್ಷ ರೂ. ನಗದು ಬಹುಮಾನವಿರುವ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗುವುದು. ಮುಂದಿನ ವರ್ಷದಿಂದ ಈ ಯೋಜನೆ ಜಾರಿಗೆ ಬರಲಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಕರ್ನಾಟಕ ಅಭಿವೃದ್ಧಿಯಲ್ಲಿ ಮುಂಚೂಣಿ ರಾಜ್ಯವಾಗಿದೆ. ಬಂಡವಾಳ ಹೂಡಿಕೆಯಲ್ಲಿ ಅತ್ಯಾಕರ್ಷಕ ರಾಜ್ಯವಾಗಿದೆ. 2025ರ ವೇಳೆಗೆ ದೇಶದ ಆರ್ಥಿಕ ಕ್ಷೇತ್ರಕ್ಕೆ ಉತ್ಪಾದನಾ ವಲಯದ ಕೊಡುಗೆ ಶೇ.25ರಷ್ಟಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿಶೇಷ ಆರ್ಥಿಕ ವಲಯಗಳಿಗೆ ನೀಡುವ ಸವಲತ್ತನ್ನು 2025ರವರೆಗೂ ವಿಸ್ತರಿಸಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.  ನಮ್ಮ ಸರ್ಕಾರ ಕೈಗಾರಿಕೆಗಳಿಗೆ ಎಲ್ಲಾ ರೀತಿಯ ನೆರವು ನೀಡಲು ಸಿದ್ದವಿದ್ದು, ಕೈಗಾರಿಕಾಗೋದ್ಯಮಿಗಳ ಜತೆ ನಿರಂತರ ಸಂಪರ್ಕ ಹೊಂದಿದೆ. ಇಲ್ಲಿ ನಮ್ಮ ಸರ್ಕಾರ ತೆಗೆದುಕೊಂಡಿರುವ ಕ್ರಮಗಳು ವಿಶ್ವ ಮಾನ್ಯತೆ ಪಡೆದಿದೆ ಎಂದು ಮಾಹಿತಿ ನೀಡಿದರು.

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಕೇಂದ್ರ ರಸಗೊಬ್ಬರ ಸಚಿವ ಅನಂತಕುಮಾರ್, ನಗರಾಭಿವೃದ್ಧಿ ಸಚಿವ ಎಂ.ವೆಂಕಯ್ಯನಾಯ್ಡು, ರಾಜ್ಯ ಸಚಿವರಾದ ಸಚಿವ ಆರ್.ವಿ.ದೇಶಪಾಂಡೆ. ಡಿ.ಕೆ.ಶಿವಕುಮಾರ್, ರಮೇಶ್‍ಕುಮಾರ್, ಪ್ರಿಯಾಂಕ್‍ಖರ್ಗೆ, ಸಂಸದರಾದ ಪಿ.ಸಿ.ಮೋಹನ್, ರಾಜುಗೌಡ, ಕೈಗಾರಿಕೋದ್ಯಮಿಗಳಾದ ಚಂದ್ರಜಿತ್ ಬ್ಯಾನರ್ಜಿ, ಕಿರಣ್ ಮಜುಂದಾರ್ ಷಾ, ಶೋಭನಾ ಕಮಿನೇನಿ, ರಮೇಶ್ ಅಭಿಷೇಕ್, ಅಮಿತಾಬ್‍ಕಾಂತ್ ಮತ್ತಿತರರು ಮಾತನಾಡಿ, ಕರ್ನಾಟಕದಲ್ಲಿ ಕೈಗಾರಿಕೆಗೆ ಇರುವ ವಾತಾವರಣವನ್ನು ಕೊಂಡಾಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin