5 ಕೋಟಿಗೂ ಹೆಚ್ಚು ಮಂದಿ ಭಾರತೀಯರನ್ನು ಕಾಡುತ್ತಿದೆ ಖಿನ್ನತೆ..!

ಈ ಸುದ್ದಿಯನ್ನು ಶೇರ್ ಮಾಡಿ

Dipression--01

ನವದೆಹಲಿ, ಫೆ.24-ಪರಿಸರ ಮಾಲಿನ್ಯ, ಅಪಘಾತ, ಅಪರಾಧ, ಅತ್ಮಹತ್ಯೆ ಹೆಚ್ಚಳದಂಥ ಗಂಭೀರ ಸಮಸ್ಯೆಗಳಿಗೆ ಲೋಕ ಕುಖ್ಯಾತಿ ಪಡೆದಿರುವ ಭಾರತದಲ್ಲೀಗ ಖಿನ್ನತೆ ಪ್ರಕರಣಗಳೂ ಗಣನೀಯ ಪ್ರಮಾಣದಲ್ಲಿ ಏರತೊಡಗಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ) ಪ್ರಕಾರ ಭಾರತದಲ್ಲಿ 5 ಕೋಟಿಗೂ ಹೆಚ್ಚು ಮಂದಿ ಖಿನ್ನತೆ, ಹತಾಶೆ ಮತ್ತು ಮಾನಸಿಕ ಕ್ಷೋಭೆಯಿಂದ ನರಳುತ್ತಿದ್ದಾರೆ. ಇದೊಂದು ಅನಾರೋಗ್ಯ ವಿಪ್ಲವ ಎಂದು ಎಚ್ಚರಿಕೆ ನೀಡಲಾಗಿದೆ.   ಚೀನಾ ಸೇರಿದಂತೆ ಆಗ್ನೇಯ ಏಷ್ಯಾ ಮತ್ತು ಪಶ್ಚಿಮ ಪೆಸಿಫಿಕ್ ಪ್ರಾಂತ್ಯಗಳಿಗಿಂತ ಹೆಚ್ಚು ಮಂದಿ ಭಾರತದಲ್ಲಿ ಖಿನ್ನತೆ ಸಮಸ್ಯೆಗೆ ಒಳಗಾಗಿರುವುದು ಮತ್ತು ದಿನೆ ದಿನೆ ಈ ಪ್ರಮಾಣ ಗಣನೀಯವಾಗಿ ಏರುಮುಖವಾಗಿ ಸಾಗಿರುವುದು ಆತಂಕಕಾರಿ ಸಂಗತಿಯಾಗಿದೆ.
ಭಾರತದೊಂದಿಗೆ ಚೀನಾ ಸಹ ಈ ಸಮಸ್ಯೆಯನ್ನು ಎದುರಿಸುತ್ತಿದೆ. ವಿಶ್ವದಲ್ಲಿ ಖಿನ್ನತೆಯಲ್ಲಿ ಬಳಲುತ್ತಿರುವ ಒಟ್ಟು 322 ದಶಲಕ್ಷ ಜನರಲ್ಲಿ ಅರ್ಧದಷ್ಟು (ಶೇ.50) ಮಂದಿ ಭಾರತದಲ್ಲೇ ಇದ್ದಾರೆ ಎಂದು ಡಬ್ಲ್ಯುಎಚ್‍ಒ ತಿಳಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin