5 ತಿಂಗಳ ಗರ್ಭಿಣಿ ಹೆಚ್1ಎನ್1ಗೆ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

h1n1
ನಂಜನಗೂಡು, ಮಾ.2- ತಾಲ್ಲೂಕಿನ ತೊರೆವಲ್ಲಿ ಗ್ರಾಮದ ರೂಪದೇವಿ(33) ಎಂಬ 5 ತಿಂಗಳ ಗರ್ಭಿಣಿ ಹೆಚ್ 1 ಎನ್1(ಹಂದಿ ಜ್ವರ)ಗೆ ಬಲಿಯಾಗಿದ್ದು ಇನ್ನೂ ಮೂವರು ಈ ಜ್ವರದಿಂದ ಬಳಲುತ್ತಿದ್ದಾರೆ.ತೊರೆವಲ್ಲಿ ಗ್ರಾಮದ ಗಜೇಂದ್ರರವರ ಪತ್ನಿ ರೂಪದೇವಿ ಹೆಚ್1ಎನ್1 ಜ್ವರಕ್ಕೆ ಬಲಿಯಾಗಿದ್ದು ನಂಜನಗೂಡಿನ ಕೆಹೆಚ್‍ಬಿ ಕಾಲೋನಿಯ ಹೆಚ್.ಬಿ.ಶ್ರೀಕಾಂತ್(50) ಟಿವಿಎಸ್ ನಗರದ ಪೂರ್ಣಿಮಾ(46) ತಗಡೂರಿನ ಟಿ.ವಿ,ಮಾದಪ್ಪ(85) ಎಂಬುವವರಿಗೆ ಹೆಚ್ 1 ಎನ್ 1 ಕಾಣಿಸಿಕೊಂಡಿದ್ದು ಮೈಸೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಕಲಾವತಿ ಮಾತನಾಡಿ, ನಂಜನಗೂಡು ತಾಲ್ಲೂಕಿನಲ್ಲಿ ಹೆಚ್ 1 ಎನ್ 1ಜ್ವರ ಕಾಣಿಸಿಕೊಂಡಿರುವುದು ನಿಜ. ತೀವ್ರ ಸ್ವರೂಪದ ಗಂಟಲು ನೋವು, ನೆಗಡಿ,ಮತ್ತು ಕೆಮ್ಮು ವಾಂತಿ ಅತಿ ಭೇದಿ ಉಸಿರಾಟದ ತೊಂದರೆ ಮೈ ಕೈ ನೋವಿನಿಂದ ಬಳಲುತ್ತಿರುವರು ತಕ್ಷಣ ತಪಾಸಣೆಗೆ ಒಳಪಡಬೇಕು ಔಷಧಿಗಳ ದಾಸ್ತಾನು ಇದ್ದು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಕೋರಿದ್ದಾರೆ. ಈ ಸಂಬಂಧ ಆಶಾ ಕಾರ್ಯಕರ್ತರು ಜನರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆಂದು ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin