5 ದಿನಗಳಲ್ಲೇ 169 ಕೋಟಿ ರೂ. ಹಳೆ ನೋಟು ಠೇವಣಿ

ಈ ಸುದ್ದಿಯನ್ನು ಶೇರ್ ಮಾಡಿ

Old-Notes

ಮಲಪ್ಪುರಂ, ಡಿ.23– ಕೇರಳದ ಮಲಪ್ಪುರಂನ ಮಲಬಾರ್ ಜಿಲ್ಲಾ ಸಹಕಾರಿ ಬ್ಯಾಂಕ್‍ಗಳ (ಎಂಡಿಸಿಬಿ) ಮೇಲೆ ಹಠಾತ್ ದಾಳಿ ನಡೆಸಿದ ಕೇಂದ್ರೀಯ ತನಿಖಾ ದಳ (ಸಿಬಿಐ) ಅಧಿಕಾರಿಗಳಿಗೆ ಅಚ್ಚರಿ ಕಾದಿತ್ತು. ನೋಟು ರದ್ದತಿ ಜಾರಿಗೊಳಿಸಿದ ನ.8ರ ನಂತರ ಮೊದಲ ಐದು ದಿನಗಳ ಅವಧಿಯಲ್ಲೇ ಈ ಬ್ಯಾಂಕ್‍ನಲ್ಲಿ 169 ಕೋಟಿ ರೂ. ಹಳೆ ನೋಟುಗಳು ಠೇವಣಿ ಇಟ್ಟಿರುವ ಸಂಗತಿ ಪತ್ತೆಯಾಗಿದೆ.  ನ.10 ಮತ್ತು 14ರ ನಡುವೆ ರಾಜ್ಯದಲ್ಲಿರುವ 54 ಶಾಖೆಗಳಲ್ಲಿ ಈ ಮೊತ್ತದ ಹಣ ಪತ್ತೆಯಾಗಿದೆ. ಈ ಠೇವಣಿಗಳಿಗೆ ಸೂಕ್ತ ದಾಖಲೆಗಳು ಇಲ್ಲದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಠೇವಣಿದಾರರಿಗೆ ಸಂಬಂಧಪಟ್ಟ ಎಲ್ಲ ದಾಖಲೆಪತ್ರಗಳನ್ನು ನೀಡುವಂತೆ ಸಿಬಿಐ ಅಧಿಕಾರಿಗಳು ಬ್ಯಾಂಕ್‍ಗೆ ಸೂಚನೆ ನೀಡಿದ್ದು, ತನಿಖೆ ತೀವ್ರಗೊಳಿಸಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin