5 ಪೈಸೆಗೆ 1 ಕೆಜಿ ಈರುಳ್ಳಿ : ತಿಪ್ಪೆ ಪಾಲಾದ 13 ಕ್ವಿಂಟಾಲ್ ಈರುಳ್ಳಿ

ಈ ಸುದ್ದಿಯನ್ನು ಶೇರ್ ಮಾಡಿ

Green-Tead

ನಾಸಿಕ್, ಆ.26- ಕೆಲವು ತಿಂಗಳ ಹಿಂದೆ ಈರುಳ್ಳಿ ಬೆಲೆ ಗಗನಕ್ಕೇರಿ ಗ್ರಾಹಕರು ತಬ್ಬಿಬ್ಬಾಗಿದ್ದರು, ಈಗ ಅದೇ ಈರುಳ್ಳಿ ಮೌಲ್ಯ ಕೇವಲ 5 ಪೈಸೆ..! ಉಳ್ಳಾಗಡ್ಡೆ ಧಾರಣೆ ಪಾತಾಳಕ್ಕೆ ಕುಸಿದಿದ್ದರಿಂದ ಬೇಸತ್ತ ರೈತನೊಬ್ಬ ತಾನು ಬೆವರು ಹರಿಸಿ ಬೆಳೆದ 13 ಕ್ವಿಂಟಾಲ್ ಈರುಳ್ಳಿಯನ್ನು ತಿಪ್ಪೆಗೆ ಸುರಿದ ಪ್ರಸಂಗ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಕರಂಜ್ಗಾಂವ್ನಲ್ಲಿ ನಿನ್ನೆ ನಡೆದಿದೆ.
ನಾಸಿಕ್ ಜಿಲ್ಲೆಯ ಸಿಫಾದ್ ತಾಲೂಕಿನ ರೈತ ಸುಧಾಕರ್ ದರದೆ ತಾನು ಬೆಳೆದ 13 ಕ್ವಿಂಟಾಲ್ (1300ಕೆಜಿ) ಈರುಳ್ಳಿಯನ್ನು ಮಾರಾಟ ಮಾಡಲು ಸಾಯ್ಖೇಡಾ ಉಪ-ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ (ಎಪಿಎಂಸಿ) ತಂದಾಗ ಆತನಿಗೆ ಆಘಾತ ಕಾದಿತ್ತು.

ಎಪಿಎಂಸಿ ವರ್ತಕರು 1ಕೆಜಿ ಈರುಳ್ಳಿಗೆ 5 ನಯಾಪೈಸೆ ನೀಡುವುದಾಗಿ ಹೇಳಿದಾಗ ಬೆಳೆಗಾರ ಸುಧಾಕರ್ ಕಂಗಾಲಾದ. ಅಂದರೆ ಈತ ಬೆಳೆದ ಒಟ್ಟು 13 ಕ್ವಿಂಟಾಲ್ ಬೆಲೆಗೆ ದಕ್ಕಲಿದ್ದ ಮೌಲ್ಯ ಕೇವಲ 65 ಪೈಸೆಗಳು..!ವಾಸ್ತವ ಸಂಗತಿ ಎಂದರೆ ಈತ ಈರುಳ್ಳಿ ಬೇಸಾಯ ಮಾಡಲು ಒಂದು ಎಕರೆಗೆ 700ರೂ.ಗಳಿಗೂ ಅಧಿಕ ಹಣ ಖರ್ಚು ಮಾಡಿದ್ದ. ತನ್ನ ಉತ್ಪನ್ನವನ್ನು ಎಪಿಎಂಸಿಗೆ ವಾಹನದಲ್ಲಿ ತರಲು 780ರೂ. ವ್ಯಯಿಸಿದ್ದ. ಎಪಿಎಂಸಿ ನಿಗದಿಗೊಳಿಸಿದ ನಿಕೃಷ್ಟ ಬೆಲೆಯಿಂದ ಕಂಗಾಲಾಗಿ ರೋಸಿಹೋದ ಸುಧಾಕರ್ 13 ಕ್ವಿಂಟಾಲ್ ಈರುಳ್ಳಿಯನ್ನು ತಿಪ್ಪೆಗೆ ಸುರಿದು ತನ್ನ ಆಕ್ರೋಶ ವ್ಯಕ್ತಪಡಿಸಿದ್ದಾನೆ.

► Follow us on –  Facebook / Twitter  / Google+

Facebook Comments

Sri Raghav

Admin