5 ರಾಜ್ಯಗಳಲ್ಲಿ ಚುನಾವಣೆ ಹಿನ್ನೆಲೆ : 56 ಕೋಟಿ ರೂ. ನಗದು, 8 ಕೋಟಿ ಮದ್ಯ, ಡ್ರಗ್ಸ್ ವಶ

ಈ ಸುದ್ದಿಯನ್ನು ಶೇರ್ ಮಾಡಿ

Black-Mani-01

ನವದೆಹಲಿ, ಜ.18– ವಿಧಾನಸಭೆ ಚುನಾವಣೆಗಳು ಘೋಷಣೆ ಯಾಗಿರುವ ಉತ್ತರಪ್ರದೇಶ ಮತ್ತು ಪಂಜಾಬ್ ಸೇರಿದಂತೆ ಐದು ರಾಜ್ಯಗಳಲ್ಲಿ ಭಾರೀ ಅಕ್ರಮ ಗಳು ಬೆಳಕಿಗೆ ಬರುತ್ತಿವೆ. ಉತ್ತರ ಪ್ರದೇಶದಲ್ಲಿ 56.04 ಕೋಟಿ ರೂ. ನಗದು ಮತ್ತು ಭಾರೀ ಪ್ರಮಾಣದ ಮದ್ಯವನ್ನು ವಿಶೇಷ ತಂಡಗಳ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಪಂಜಾಬ್‍ನಲ್ಲಿ 8 ಕೋಟಿ ರೂ. ಮËಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.  ಚುನಾವಣಾ ಅಕ್ರಮಗಳು ಮತ್ತು ವೆಚ್ಚಗಳ ಮೇಲೆ ನಿಗಾವಹಿಸಲು ಚುನಾವಣಾ ಆಯೋಗದಿಂದ ನೇಮಿಸಲ್ಪಟ್ಟ ವಿಶೇಷ ತಂಡಗಳು ಮತದಾನದ ಹೊಸ್ತಿಲಿನಲ್ಲಿರುವ ಐದು ರಾಜಗಳಲ್ಲಿ ನಡೆಸುತ್ತಿರುವ ಕಾರ್ಯಾಚರಣೆಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ಪತ್ತೆ ಯಾಗುತ್ತಿವೆ.

ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಪಂಜಾಬ್‍ನಲ್ಲಿ 1.78 ಕೋಟಿ ರೂ. ಮೌಲ್ಯದ ಹೆರಾಯಿನ್ ಮತ್ತು ಅಪೀಮು ವಶಪಡಿಸಿಕೊಳ್ಳಲಾಗಿದೆ.  ಗೋವಾದಲ್ಲಿ 16.72 ಲಕ್ಷ ರೂ. ಮೊತ್ತ ಹಾಗೂ ಮಣಿಪುರದಲ್ಲಿ 7 ಲಕ್ಷ ರೂ. ಬೆಲೆಬಾಳುವ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.  ಚುನಾವಣೆಯಲ್ಲಿ ಮತದಾರ ರನ್ನು ಸೆಳೆಯುವುದಕ್ಕಾಗಿ ಬಳಸಲು ಉದ್ದೇಶಿಸಿದ್ದ 6.06 ಕೋಟಿ ರೂ. ಮೌಲ್ಯದ 1.98 ಲಕ್ಷ ಲೀಟರ್ ಮವ್ಯವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಪಂಜಾಬ್‍ನಲ್ಲಿ 17.54 ಲಕ್ಷ ರೂ ಮೌಲ್ಯದ 10,646 ಲೀಟರ್ ಮದ್ಯಸಾರವನ್ನು ಜಪ್ತಿ ಮಾಡಲಾಗಿದೆ.

ಉತ್ತರಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ್ ಮತ್ತು ಮಣಿಪುರ ರಾಜ್ಯಗಳಲ್ಲಿ ಒಟ್ಟು 64.38 ಕೋಟಿ ರೂ. ನಗದು, 6.23 ಕೋಟಿ ರೂ. ಮೌಲ್ಯದ ಮದ್ಯ ಹಾಗೂ ಎರಡು ಕೋಟಿ ರೂ. ಬೆಲೆಬಾಳುವ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin