5 ವರ್ಷದ ಮಗುವನ್ನು ಬಾವಿಗೆಸೆದ ಮಲ ತಾಯಿ

ಈ ಸುದ್ದಿಯನ್ನು ಶೇರ್ ಮಾಡಿ

well

ಕಲ್ಬುರ್ಗಿ,ಆ.19- ಮಲತಾಯಿಯೊಬ್ಬಳು ಐದು ವರ್ಷದ ಬಾಲಕನ ಕೈಕಾಲು ಕಟ್ಟಿ ಬಾವಿಗೆಸೆದು ಕೊಲೆ ಮಾಡಿರುವ ಅಮಾನವೀಯ ಘಟನೆ ಸೇಡಂ ತಾಲ್ಲೂಕಿನ ಕೋಡ್ಲಾ ಗ್ರಾಮದಲ್ಲಿ ನಡೆದಿದೆ.   ಮೃತ ಬಾಲಕನನ್ನು ಮಲ್ಲು ಎಂದು ಹೇಳಲಾಗಿದೆ. ಮೃತ ಬಾಲಕನ ತಾಯಿ ಗೌರಮ್ಮ ಕಳೆದ ಒಂದು ವರ್ಷದ ಹಿಂದೆ ಮೃತಪಟ್ಟಿದ್ದರು. ನಂತರ ಮಲ್ಲುನ ತಂದೆ ಮುಗ್ಗಮ್ಮ ಎಂಬುವರನ್ನು ಮದುವೆಯಾಗಿದ್ದರು. ಆರಂಭದಿಂದಲೂ ಮಲ್ಲುಗೆ ಹಿಂಸೆ ನೀಡುತ್ತಿದ್ದ ಈಕೆ ಕಳೆದ ನಾಲ್ಕು ದಿನಗಳ ಹಿಂದೆಯೇ ಈ ಹೀನಾಯ ಕೃತ್ಯ ನಡೆಸಿದ್ದಾಳೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.  ಬಾಲಕ ಕಾಣೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ಆದರೆ ಇಂದು ಬೆಳಗ್ಗೆ ಬಾವಿಯಲ್ಲಿ ಶವ ತೇಲುತ್ತಿದ್ದನ್ನು ನೋಡಿ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ನಂತರ ಆರೋಪಿ ದುಗ್ಗಮ್ಮನನ್ನು ಬಾವಿ ಬಳಿ ಕರೆತಂದು ವಿಚಾರಿಸಿದಾಗ ತಾನೇ ಈ ಕೃತ್ಯ ನಡೆಸಿದ್ದು ಎಂದು ಹೇಳಿದ್ದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಆಕೆಯನ್ನು ಮನಬಂದಂತೆ ಥಳಿಸಿದ್ದಾರೆ.
ಸೇಡಂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin