ಜಗತ್ತನ್ನು ಕಾಡಿದ 5 ಭಯಾನಕ ರೋಗಗಳಿವು…!

ಈ ಸುದ್ದಿಯನ್ನು ಶೇರ್ ಮಾಡಿ

ಕೊರೋನ ವೈರಸ್, ಈ ಹೆಸರನ್ನು ಕೇಳಿದರೆ ಸಾಕು ಜಗತ್ತು ಬೆಚ್ಚಿ ಬೀಳುತ್ತಿದ್ದೆ. ಚೀನಾದ ತಪ್ಪಿನಿಂದ ಹುಟ್ಟಿಕೊಂಡ ಈ ವೈರಸ್ ಜಗತ್ತಿನ್ನೆಲ್ಲೆಡೆ ನಿಧಾನವಾಗಿ ಹಬ್ಬುತ್ತಿದೆ. ಚೀನಾದಲ್ಲಿ ಈಗಾಗಲೇ ಈ ವೈರಸ್ ನಿಂದ 1,26,754 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದು ಅನೇಕ ಜನರು ಈ ರೋಗಕ್ಕೆ ತುತ್ತಾಗಿ ಒದ್ದಾಡುತ್ತಿದ್ದಾರೆ.

ಚೀನಾ ಮಾತ್ರವಲ್ಲದೇ ಇಟಲಿ, ಅಮೇರಿಕಾ, ಭಾರತ ಸೇರಿದಂತೆ ಇಡೀ ವಿಶ್ವವನ್ನೇ ಕೊರೊನಾ ವೈರಸ್ ಇನ್ನಿಲ್ಲದಂತೆ ಕಾಡುತ್ತಿದೆ. ಮುಂಬರುವ ದಿನಗಳಲ್ಲಿ ಈ ಡೆಡ್ಲಿ ವೈರಸ್ ನಿಂದಾಗಿ ಇನ್ನು ಅನೇಕ ಜನರು ಪ್ರಪಂಚದೆಲ್ಲೆಡೆ ಸಾಯುವರು ಎಂದು ವಿಶ್ವ ಆರೋಗ್ಯ ಸಂಸ್ಥೆಯು ಕೂಡ ಎಚ್ಚರಿಕೆ ನೀಡಿದೆ. ಆದರೆ ವೀಕ್ಷಕರೇ ನಿಮಗೇ ನೆನಪಿರಲಿ ಈ ರೀತಿಯ ರೋಗಗಳು ಜಗತ್ತನ್ನು ಕಾಡಿದ್ದು ಇದೇ ಮೊದಲೇನಲ್ಲ.

ಈ ಹಿಂದೆ ಇಂತಹ ಅನೇಕ ಭಯಾನಕ ರೋಗಗಳನ್ನು ಜಗತ್ತು ಕಂಡಿದೆ., ರೋಗಕ್ಕೆ ತುತ್ತಾಗಿ ಲಕ್ಷಾಂತರ ಜನರ ಪ್ರಾಣ ಕಳೆದುಕೊಂಡಿರುವುದು ಇತಿಹಾಸ ಪುಟಗಳಲ್ಲಿ ಅಚ್ಚಳಿಯದೆ ಉಳಿದು ಬೆಚ್ಚಿ ಬೀಳುಸುತ್ತಿದೆ. ಇಂದು ನಿಮಗೆ ಕೊರೋನ ವೈರಸ್ ತರಹ ಜಗತ್ತನ್ನು ಕಾಡಿದ 5 ಡೆಡ್ಲಿ ರೋಗಗಳ ಕುರಿತು ತಿಳಿಸಿಕೊಡುತ್ತೇವೆ.

# 1. ಬ್ಯೂಬಾನಿಕ್ ಪ್ಲೇಗ್ :
“ಎರ್ಸೀನಿಯ ಪೆಸ್ಟಿಸ್” ಎನ್ನುವ ಬ್ಯಾಕ್ಟೀರಿಯದಿಂದ ಹರಡುವ ಈ ರೋಗವು 1346 ರಿಂದ 1353 ರ ಮಧ್ಯೆ ಮಾನವ ಇತಿಹಾಸ ಕಂಡ ಅತ್ಯಂತ ಭಯಾನಕ ರೋಗ. ಈ ರೋಗದಿಂದ ಯುರೋಪ್ ಖಂಡದ ಶೇಖಡ 30 ರಿಂದ 60 ರಷ್ಟು ಜನಸಂಖ್ಯೆ ಸತ್ತು ಮಣ್ಣಲ್ಲಿ ಮಣ್ಣಾಗಿ ಹೋಗಿತ್ತು. ಇಷ್ಟಕ್ಕೂ ಈ ರೋಗ ಜನ್ಮತಾಳಿದ್ದಾದ್ರೂ ಹೇಗೆ ಎಂದು ಸಂಶೋಧನೆಗಿಳಿದವರುಗೆ ಸಿಕ್ಕಿದ್ದು ಬೆಚ್ಚಿ ಬೀಳಿಸುವ ಸತ್ಯ ಸಂಗತಿ.

ಹೌದು ಸತ್ತಿರುವ ಇಲಿಗಳ ಮೇಲೆ ಕೂಡುವ ನೊಣಗಳು ಆಹಾರದ ಮೇಲೆ ಕುಳಿತು ಆ ಆಹಾರವನ್ನು ಸೇವಿಸುವುದರಿಂದ ಈ ರೋಗ ಹರಡುತ್ತದೆ. ಅಂದು ಜಗತ್ತು ಕಂಡ ಅತ್ಯಂತ ಭಯಾನಕ ರೋಗವಾದ ಪ್ಲೇಗ್ ನಿಂದ ಪ್ರಪಂಚದೆಲ್ಲೆಡೆ ಬರೋಬ್ಬರಿ 8 ಕೋಟಿ ಜನರು ಸತ್ತಿದ್ದರು. ಇದನ್ನು ಇತಿಹಾಸದಲ್ಲಿ “ಬ್ಲ್ಯಾಕ್ ಡೆತ್” ಎಂದು ವರ್ಣಿಸಲಾಗಿದೆ.

# 2 ಇನ್ಫ್ಲೂಎಂಜ ಪ್ಯಾಂಡೆಮಿಕ್ :
“ಇನ್ಫ್ಲೂಎಂಜಾ” ಎನ್ನುವ ವೈರಾಣುವಿನಿಂದ ಕಳೆದ 300 ವರ್ಷಗಳಲ್ಲಿ 9 ವಿವಿಧ ಡೆಡ್ಲಿ ರೋಗಗಳು ಜನಿಸಿದ್ದು ಸಂಪೂರ್ಣ ಮನುಷ್ಯಕುಲವನ್ನು ಕಾಡಿವೆ. ಅವುಗಳಲ್ಲಿ 1918 ರ ಇನ್ಫ್ಲೂಎಂಜ ಪ್ಯಾಂಡೆಮಿಕ್ ಕೂಡ ಒಂದು. ಈ ರೋಗವನ್ನು “ಸ್ಪ್ಯಾನಿಶ್ ಫ್ಲೂ” ಎಂದು ಕೂಡ ಕರೆಯಲಾಗುತ್ತದೆ. ಈ ರೋಗದಿಂದ ಅಂದು ಬರೋಬ್ಬರಿ 10 ಕೋಟಿ ಜನರು ಪ್ರಾಣ ಕಳೆದುಕೊಂಡಿದ್ದರು. ಇನ್ನು ಇದೇ ವೈರಾಣುವಿನಿಂದ 2009 ರಲ್ಲಿ ಪ್ರಪಂಚದೆಲ್ಲೆಡೆ “ಹಂದಿ ಜ್ವರ” ಎನ್ನುವ ರೋಗವು ಜನಿಸಿತ್ತು. ಇದರಿಂದ 4 ಲಕ್ಷ ಜನರು ಪ್ರಪಂಚದೆಲ್ಲೆಡೆ ಸತ್ತಿದ್ದರು.

# 3. ಏಷ್ಯನ್ ಫ್ಲೂ :
ವೀಕ್ಷಕರೇ…, ಇಂದು ಪ್ರಪಂಚದೆಲ್ಲೆಡೆ ನಿಧಾನವಾಗಿ ಎಲ್ಲೆಡೆ ಹಬ್ಬುತ್ತಿರುವ ಕೋರೋನ ವೈರಸ್ ಗೆ ಮೂಲ ಕಾರಣವಾದ ದೇಶ ಚೀನ ಎಂದು ಎಲ್ಲರಿಗು ಗೊತ್ತು, ಇದೇ ರೀತಿ 1956-58 ರಲ್ಲಿ ಪ್ರಪಂಚದೆಲ್ಲೆಡೆ ಅನೇಕ ಜನರ ಪ್ರಾಣ ತೆಗೆದುಕೊಂಡ “ಏಷ್ಯನ್ ಫ್ಲೂ” ರೋಗಕ್ಕೂ ಕೂಡ ಚೀನಾ ದೇಶವೇ ಮೂಲ ಕಾರಣ ಎಂಬುದು ನಿಮಗೆ ಗೊತ್ತಿರಲಿ..! ಭಾತುಕೋಳಿಗಳ ಮೇಲೆ ಚೀನಾದ ವಿಜ್ಞಾನಿಗಳು ನಡೆಸಿದ ಆನುವಂಶಿಕ ರೂಪಾಂತರ ಅಂದ್ರೆ ಜೆನಿಟಿಕ್ ಮ್ಯೂಟೇಶನ್ ದಿಂದ ಈ ರೋಗವು ಜನಿಸಿತು. ಈ ರೋಗವು ಚೀನಾದಿಂದ ನಿಧಾನವಾಗಿ ಸಿಂಗಾಪುರ್, ಹಾಂಗ್ ಕಾಂಗ್, ಅಮೆರಿಕ ಹೀಗೆ ಪ್ರಪಂಚದೆಲ್ಲೆಡೆ ಹರಡಿ ಕೇವಲ 2 ವರ್ಷದಲ್ಲಿ 20 ಲಕ್ಷ ಜನರ ಪ್ರಾಣ ತೆಗೆದುಕೊಂಡಿತ್ತು.

# 4. ಕಾಲರ ಪ್ಯಾಂಡೆಮಿಕ್ :
ವೀಕ್ಷಕರೇ ನಮ್ಮ ಜನರು ಇವತ್ತಿಗೂ ಕೂಡ ಈ ರೋಗದ ಹೆಸರನ್ನು ಕೇಳಿದ್ರೆ ಬೆಚ್ಚಿ ಬೀಳ್ತಾರೆ. ಅದುವೇ ಕಾಲರಾ..! 1899 ರಿಂದ 1923 ರ ಮಧ್ಯೆ ಹುಟ್ಟಿಕೊಂಡ ಈ ರೋಗವು ಜನಿಸಿದ್ದು ಭಾರತದಲ್ಲಿ. ಈ ರೋಗದಿಂದ ಸಂಪೂರ್ಣ ದೇಶದಲ್ಲಿ 8 ಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದರು. ನಂತರ ನಿಧಾನವಾಗಿ ಈ ರೋಗವು ಪ್ರಪಂಚದೆಲ್ಲೆಡೆ ಹಬ್ಬಿತು.

ಕಲುಷಿತ ನೀರಿನಲ್ಲಿ ಈ ವೈರಾಣು ಇದ್ದು ಆ ನೀರನ್ನು ಸೇವಿಸುವುದರಿಂದ ದೇಹದ ಒಳಗೆ ಪ್ರವೇಶಿಸಿ ಸಂಪೂರ್ಣ ದೇಹವನ್ನು ದುರ್ಭಲವನ್ನಾಗಿ ಮಾಡುತ್ತದೆ. ಈ ರೋಗದಿಂದ ಪ್ರಪಂಚದೆಲ್ಲೆಡೆ ಎಷ್ಟು ಜನರು ನಿಖರವಾಗಿ ಸತ್ತಿದ್ದಾರೆ ಎಂದು ಅಂದಾಜಿಸಲು ಸಾಧ್ಯಾವಾಗಲಿಲ್ಲ. ಅಷ್ಟರ ಮಟ್ಟಿಗೆ ಈ ಪ್ಲೇಗ್ ಮನುಕುಲವನ್ನು ಮಣ್ಣಲ್ಲಿ ಮಣ್ಣಾಗಿಸಿತ್ತು ಎನ್ನುತ್ತಾರೆ ತಜ್ಞರು..! ಆದರೆ ಬ್ಯಾಂಕಾಕ್ ನಲ್ಲಿ 30ಸಾವಿರ ಜನರು ಇದರಿಂದ ಸತ್ತಿದ್ದರು ಎಂಬುದು ದಾಖಲಾಗಿದೆ.

# 5. 1968 ಫ್ಲೂ ಪ್ಯಾಂಡೆಮಿಕ್ :
“ಇನ್ಫ್ಲೂಎಂಜ ಎ” ವೈರಾಣುವಿನಿಂದ ಜನಿಸಿದ ಈ ರೋಗವು ಜುಲೈ 13 1968 ರಂದು ಹಾಂಗ್ ಕಾಂಗ್ ದೇಶದಲ್ಲಿ ಮೊದಲು ಕಾಣಿಸಿಕೊಂಡಿದ್ದು.ನಂತರ ಸೆಪ್ಟೆಂಬರ್ ತಿಂಗಳು ತಲುಪುವಷ್ಟರಲ್ಲಿ ಭಾರತ, ಫಿಲಿಪೈನ್ಸ್, ಆಸ್ಟ್ರೇಲಿಯಾ ಮತ್ತು ಯುರೋಪ್ ಅನ್ನು ಪ್ರವೇಶಿಸಿತ್ತು. ಹೀಗೆ ನೋಡ ನೋಡುತ್ತಿದ್ದಂತೆ ಪ್ರಪಂಚದೆಲ್ಲೆಡೆ ಹಬ್ಬಿ ಬರೋಬ್ಬರಿ 10 ಲಕ್ಷ ಜನರ ಪ್ರಾಣವನ್ನು ಈ ರೋಗ ತೆಗೆದುಕೊಂಡಿತ್ತು.

ನೋಡಿದಿರಲ್ಲ ವೀಕ್ಷಕರೆ, ಜಗತ್ತನ್ನು ಕಾಡಿದ 5 ಭಯಾನಕ ರೋಗಗಳು ಲಕ್ಷಾಂತರ ಜನರ ಪ್ರಾಣವನ್ನು ಹೇಗೆ ಬಲಿ ತೆಗೆದುಕೊಂಡಿತ್ತು ಎಂಬುದನ್ನು. ಮನುಷ್ಯ ಪ್ರಕೃತಿಯ ವಿರುದ್ಧ ಹೊದಾಗಲೆಲ್ಲಾ. ಪ್ರಕೃತಿ ಮುನಿದು ಹೇಗೆ ತನ್ನ ಮೃತ್ಯುಕೂಪಕ್ಕೆ ಆಹ್ವಾನಿಸಿ ಬಿಡುತ್ತೆ ನೋಡಿ.
ಮತ್ತೊಂದು ಇಂಟ್ರೆಸ್ಟಿಂಗ್ ಸಂಗತಿ ಅಂದ್ರೆ ಹಿಂದು ಧರ್ಮದ ನಂಬಿಕೆ ಪ್ರಕಾರ ಕಲಿಗಾಲದಲ್ಲಿ ಅನ್ಯಾಯ, ಅಕ್ರಮ, ಅರ್ಧರ್ಮ ಹೆಚ್ಚಾದಗಲೆಲ್ಲಾ ಕಲ್ಕಿಯು ಹೀಗೇ ತನ್ನ ಉಗ್ರಾವತಾರವೆತ್ತೆ ಬಂದು ಮಾನುಕುಲವನ್ನು ಹುಟ್ಟಡಗಿಸುತ್ತಾನೆ ಎಂಬ ಮಾತುಗಳನ್ನು ಜ್ಞಾನಿಗಳು ಹೇಳುತ್ತಾರೆ. ಇನ್ನಾದರೂ ಹೆಚ್ಚಿತ್ತುಕೊಳ್ಳೋಣ, ಮನೆಯಲ್ಲೇ ಇದ್ದೂ ಕೊರೊನಾ ವಿರುದ್ಧ ಹೋರಾಡೋಣ, ಸನ್ಮಾರ್ಗದಲ್ಲಿ ಸಾಗೋಣ ಏನಂತೀರೀ..!?

Facebook Comments

Sri Raghav

Admin