ಆರ್ಥಿಕ ಪ್ರಗತಿಯಲ್ಲಿ ಹೊಸ ಭರವಸೆ, ಭಾರತ ಪ್ರಜ್ವಲಿಸುತ್ತಿದೆ : ಆರ್‌ಬಿಐ ಗೌವರ್ನರ್ ಶಕ್ತಿಕಾಂತ್ ದಾಸ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜು.27-ಡೆಡ್ಲಿ ಕೊರೊನಾ ವೈರಸ್ ಹಾವಳಿ ಮತ್ತು ಜಾಗತಿಕ ಹಿನ್ನಡೆ ನಡುವೆಯೂ ಭಾರತದ ಆರ್ಥಿಕ ಪ್ರಗತಿಯಲ್ಲಿ ಹೊಸ ಭರವಸೆಯ ಆಶಾಕಿರಣ ಮೂಡಿದ್ದು, ಅಭಿವೃದ್ಧಿ ಪಥದತ್ತ ದೇಶ ಸಾಗುತ್ತಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಗೌವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

ಭಾರತದ ಆರ್ಥಿಕ ಪ್ರಗತಿ ಸುಸ್ಥಿತಿಯತ್ತ ಮರಳುತ್ತಿದೆ. ಇತ್ತೀಚಿನ ದಿನಗಳಲ್ಲಿ ಕೃಷಿ, ಕೈಗಾರಿಕೆ ಸೇರಿದಂತೆ ವಿವಿಧ ಪ್ರಮುಖ ವಲಯಗಳಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದ್ದು, ದೇಶದತ್ತ ಅದೃಷ್ಟ ಒಲಿಯುತ್ತಿದೆ ಎಂದು ಅವರು ಸಂತಸದಿಂದ ಹೇಳಿದ್ದಾರೆ.

ರಾಜಧಾನಿ ನವದೆಹಲಿಯಲ್ಲಿ ಇಂದು ಭಾರತೀಯ ಕೈಗಾರಿಕೆಗಳ ಮಹಾ ಒಕ್ಕೂಟ (ಸಿಐಐ) ಆಯೋಜಿಸಿದ್ದ ಇಂಡಿಯಾ ಇಂಕ್ ಸಮಾವೇಶದಲ್ಲಿ ಮಾತನಾಡಿದ ಶಕ್ತಿಕಾಂತ್ ದಾಸ್, ಕೊರೊನಾ ದಾಳಿಯಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಆರ್ಥಿಕತೆಯನ್ನು ಸುಸ್ಥಿತಿಗೆ ತರಲು ಮೂಲಸೌಕರ್ಯಾಭಿವೃದ್ಧಿ ಕ್ಷೇತ್ರದಲ್ಲಿ ಬಂಡವಾಳಗಳ ಹೂಡಿಕೆಗಳಿಗೆ ಮತ್ತಷ್ಟು ಉತ್ತೇಜನ ನೀಡುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಭಾರೀ ಬಂಡವಾಳ ಅಗತ್ಯವಿರುವ ಮೂಲಸೌಕರ್ಯಾಭಿವೃದ್ದಿ ವಲಯದ ಪ್ರಗತಿಗಾಗಿ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳು ಬಹು ಮುಖ್ಯಪಾತ್ರ ವಹಿಸಬೇಕು ಎಂದು ಆರ್‍ಬಿಐ ಗೌರ್ನರ್ ಸಲಹೆ ಮಾಡಿದರು.

ಪ್ರಸ್ತುತ ಸನ್ನಿವೇಶದಲ್ಲಿ ಕೃಷಿ ಆದಾಯವನ್ನು ಹೆಚ್ಚಿಸುವ ಅಗತ್ಯವಿದೆ. ಇದಕ್ಕಾಗಿ ಕೇಂದ್ರ ಸರ್ಕಾರಗಳು ಮತ್ತಷ್ಟು ಉತ್ತಮ ನೀತಿಗಳನ್ನು ರೂಪಿಸಬೇಕೆಂದು ಅವರು ಅಭಿಪ್ರಾಯಪಟ್ಟರು.

ಕಳೆದ ಏಳು ತಿಂಗಳಿನಿಂದಲೂ ಭಾರತ ಸೇರಿದಂತೆ ವಿಶ್ವಾದ್ಯಂತ ಕೊರೊನಾ ಪಿಡುಗು ತೀವ್ರವಾಗಿದೆ. ಆದಾಗ್ಯೂ ಭಾರತ ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಸುಧಾರಣೆ ಸಾಧಿಸುತ್ತಿದೆ. ಇದು ಆರ್ಥಿಕ ಬೆಳವಣಿಗೆ ನಿಟ್ಟಿನಲ್ಲಿ ಆಶಾದಾಯಕ ಬೆಳವಣಿಗೆ ಎಂದರು.

ಕೊರೊನಾದಿಂದ ಭಾರತದ ಆರ್ಥಿಕತೆಗೆ ಭಾರೀ ಹಿನ್ನಡೆಯಾಗಿದ್ದರೂ ಹಂತ ಹಂತವಾಗಿ ಚೇತರಿಸಿಕೊಂಡು ಪ್ರಗತಿ ಹಾದಿಯತ್ತ ಮರಳುತ್ತಿದೆ. ಇತ್ತೀಚೆಗೆ ವಿವಿಧ ಕ್ಷೇತ್ರಗಳಲ್ಲಿ ಭಾರೀ ಪ್ರಮಾಣದ ವಿದೇಶಿ ಬಂಡವಾಳ ಹೂಡಿಕೆ ಹೆಚ್ಚಾಗುತ್ತಿರುವುದು ಈ ಆಶಾದಾಯಕ ಬೆಳವಣಿಗೆಗೆ ಪುಷ್ಟಿ ನೀಡಿದೆ ಎಂದು ಶಕ್ತಿಕಾಂತ್ ದಾಸ್ ತಿಳಿಸಿದರು.

ಭಾರತದ ಆರ್ಥಿಕತೆಯ ಬೆನ್ನಲುಬಾದ ಕೃಷಿ ಮತ್ತು ಕೈಗಾರಿಕಾ ಕ್ಷೇತ್ರಗಳಿಗೆ ಕೇಂದ್ರ ಸರ್ಕಾರ ನೀಡಿರುವ ಆದ್ಯತೆ ಮತ್ತು ಇತ್ತೀಚೆಗೆ ಕೈಗೊಂಡ ಅತ್ಯಂತ ಪರಿಣಾಮಕಾರಿ ಕ್ರಮಗಳಿಂದಾಗಿ ಹೊಸ ಹೊಸ ಅವಕಾಶಗಳು ತೆರೆದುಕೊಂಡಿವೆ. ಇವು ದೇಶದ ಆರ್ಥಿಕ ಪ್ರಗತಿ ವೃದಿಯಾಗಲು ನೆರವಾಗಿದೆ ಎಂದು ಅವರು ತಿಳಿಸಿದ್ದಾರೆ.

ವಿಶ್ವಬ್ಯಾಂಕ್ 2020ರ ವರದಿ ಪ್ರಕಾರ ಜಾಗತಿಕ ಮೌಲ್ಯ ಸರಪಳಿ(ಗ್ಲೋಬಲ್ ವ್ಯಾಲ್ಯೂ ಚೈನ್-ಜಿವಿಸಿ) ಶೇ.1ರಷ್ಟು ಹೆಚ್ಚಾಗಿದ್ದು, ಇದು ಭಾರತದ ಆರ್ಥಿಕತೆಗೆ ದೊಡ್ಡ ಮಟ್ಟದಲ್ಲಿ ಪುಷ್ಟಿ ನೀಡಲಿದೆ ಎಂದು ಶಕ್ತಿಕಾಂv? ದಾ¸? ಉಲ್ಲೇಖಿಸಿದರು.

ಕೇಂದ್ರ ಸರ್ಕಾರವು ವಿವಿಧ ಕೈಗೊಂಡಿರುವ ಹಲವಾರು ಮಹತ್ವದ ಸುಧಾರಣೆಗಳ ಕ್ರಮದಿಂದಾಗಿ ಭಾರತ ಆರ್ಥಿಕ ಪ್ರಗತಿಯತ್ತ ದಾಪುಗಾಲು ಹಾಕುತ್ತಿದೆ. ಇದೇ ವೇಳೆ ಮತ್ತಷ್ಟು ಅಭಿವೃದಿ?ಗೆ ಹೊಸ ಹೊಸ ಅವಕಾಶಗಳು ತೆರೆದುಕೊಂಡಿವೆ. ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಭಾರತದ ಆರ್ಥಿಕ ಸುಸ್ಥಿರತೆ ಸದೃಢ ಸ್ಥಿತಿಯಲ್ಲಿದೆ ಎಂದು ತಿಳಿಸಿದರು.

ಕೃಷಿ ಮತ್ತು ಇತರ ಕ್ಷೇತ್ರಗಳ ನಿರಂತರ ಸುಸ್ಥಿರ ಬೆಳವಣಿಗೆಗೆ ಮತ್ತಷ್ಟು ಪರಿಣಾಮಕಾರಿ ಸುಧಾರಣೆಗಳನ್ನು ಕೈಗೊಳ್ಳುವ ಅಗತ್ಯವಿದೆ. ಇದರಿಂದ ಪ್ರಸ್ತುತ ಸನ್ನಿವೇಶದಲ್ಲಿ ಭಾರತ ಆರ್ಥಿಕ ಬೆಳವಣಿಗೆಯಲ್ಲಿ ಇನ್ನಷ್ಟು ಮೇಲೇರಲು ಸಾಧ್ಯವಾಗಲಿದೆ ಎಂದು ದಾಸ್ ವಿಶ್ಲೇಷಿಸಿದರು.

Facebook Comments

Sri Raghav

Admin