ಭಾರಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದ 5 ಹಿಜ್‍ಬುಲ್ ಉಗ್ರರ ಸೆರೆ..!

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀನಗರ, ಜೂ.20-ಕಣಿವೆ ರಾಜ್ಯ ಕಾಶ್ಮೀರದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ಶೋಪಿಯಾನ್‍ನಲ್ಲಿ ನಿಷೇದಿತ ಹಿಜ್‍ಬುಲ್ ಮುಜಾಹಿದ್ದೀನ್(ಎಚ್‍ಎಂ) ಉಗ್ರಗಾಮಿ ಸಂಘಟನೆಯ ಐವರು ಉಗ್ರಗಾಮಿಗಳನ್ನು ಬಂಧಿಸಿದ್ದಾರೆ.

ಇದರೊಂದಿಗೆ ಮುಂದೆ ನಡೆಯಬಹುದಾಗಿದ್ದ ಭಾರೀ ವಿಧ್ವಂಸಕ ಕೃತ್ಯವೊಂದು ತಪ್ಪಿದಂತಾಗಿದೆ.  ಖಚಿತ ಮಾಹಿತಿ ಮೇರೆಗೆ ನಡೆದ ಈ ಕಾರ್ಯಾಚರಣೆಯಲ್ಲಿ ಅಖಿಬ್ ನಜೀರ್ ರಥಾರ್, ಅಮೀರ್ ಮಜೀದ್ ವನಿ, ಸಮೀರ್ ಅಹಮದ್ ಭಟ್, ಫೈಸಲ್ ಫಾರೂಕ್ ಅಹಂಗೆರ್ ಹಾಗೂ ರಿಯೀಸ್ ಅಹಮದ್ ಗನೈ-ಈ ಎಚ್‍ಎಂ ಭಯೋತ್ಪಾದಕರನ್ನುಬಂಧಿಸಲಾಗಿದೆ.

ಬಂಧಿತ ಉಗ್ರರಿಂದ  ಸ್ಪೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶೋಪಿಯನ್‍ನಲ್ಲಿ ಸುಧಾರಿತ ಸ್ಫೋಟಕ (ಐಇಡಿ)ಮೂಲಕ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಈ ಉಗ್ರರು ಸಂಚು ರೂಪಿಸಿದ್ದರು.

ಪಾಕಿಸ್ತಾನದ ನಿಷೇದಿತ ಉಗ್ರಗಾಮಿ ಸಂಘಟನೆಗಳಾದ ಲಷ್ಕರ್-ಎ-ತೈಬಾ(ಎಲ್‍ಇಟಿ) ಮತ್ತು ಜೈಷ್-ಎ-ಮಹಮದ್(ಜೆಇಎಂ) ಭಯೋತ್ಪಾದಕರು ದಕ್ಷಿಣ ಮತ್ತು ಉತ್ತರ ಕಾಶ್ಮೀರದಲ್ಲಿ ಸೇನಾ ಪಡೆಗಳ ಶಿಬಿರಗಳು ಮತ್ತು ವಾಹನಗಳ ಮೇಲೆ ದಾಳಿ ನಡೆಸಲು ಸಜ್ಜಾಗಿದ್ದಾರೆ ಎಂಬ ಗುಪ್ತಚರ ಮಾಹಿತಿ ಬೆನ್ನಲ್ಲೇ ಈ ಕಾರ್ಯಾಚರಣೆ ನಡೆದಿದೆ. ಕಾಮಿಡಿ ಮಾಡ್ತಾರೆ ನೋಡಿ ಜಗ್ಗೇಶ್

Facebook Comments

Sri Raghav

Admin