ಅಪಹರಿಸಿದ್ದ ಐವರು ಭಾರತೀಯರನ್ನು ಬಿಡುಗಡೆ ಮಾಡಿದ ಚೀನಾ ಸೇನೆ

ಈ ಸುದ್ದಿಯನ್ನು ಶೇರ್ ಮಾಡಿ

ವಾಚಾ (ಅರುಣಾಚಲ ಪ್ರದೇಶ), ಸೆ.12- ಇಂಡೋ-ಚೀನಾ ಗಡಿ ಸಂಘರ್ಷದ ನಡುವೆ ಕೆಲವು ದಿನಗಳ ಹಿಂದೆ ಅರುಣಾಚಲ ಪ್ರದೇಶ ಗಡಿಯಿಂದ ಅಪಹರಿಸಲ್ಪಟ್ಟಿದ್ದ ಐವರು ಗ್ರಾಮಸ್ಥರನ್ನು ಚೀನಾ ಸೇನಾ ಪಡೆ ಇಂದು ಬೆಳಗ್ಗೆ ಬಿಡುಗಡೆ ಮಾಡಿದೆ.

ಅರುಣಾಚಲ ಪ್ರದೇಶದ ಭಾರತ – ಚೀನಾ ಗಡಿ ಭಾಗದಲ್ಲಿ ಇಂದು ಬೆಳಗ್ಗೆ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‍ಎ) ಸೇನಾ ಪಡೆ ಅರುಣಾಚಲ ಪ್ರದೇಶದ ಕುಗ್ರಾಮದ ಐವರು ಗ್ರಾಮಸ್ಥರನ್ನು ಭಾರತೀಯ ಸೇನೆಗೆ ಒಪ್ಪಿಸಿತು.

ನಂತರ ಐವರು ಗ್ರಾಮಸ್ಥರನ್ನು ಕಸ್ಟಡಿಗೆ ಭಾರತೀಯ ಯೋಧರು ಸುರಕ್ಷಿತ ಕ್ರಮವಾಗಿ ಈ ಐವರನ್ನು 14 ದಿನಗಳ ಕ್ವಾರಂಟೈನ್‍ಗೆ ಒಳಪಡಿಸಿದೆ. ಈ ಅವಧಿ ಮುಗಿದ ನಂತರ ಇವರನ್ನು ಅವರವರ ಕುಟುಂಬ ವರ್ಗಗಳಿಗೆ ಸೇರ್ಪಡೆ ಮಾಡಲಾಗುತ್ತದೆ.

ಅರುಣಾಚಲ ಪ್ರದೇಶದಲ್ಲಿ ಇಂದು ಬೆಳಗ್ಗೆ ನಡೆದ ಔಪಚಾರಿಕ ಪ್ರಕ್ರಿಯೆಯಲ್ಲಿ ಈ ಐವರನ್ನು ಪಿಎಲ್‍ಎ ಯೋಧರು ಭಾರತದ ಬಿಎಸ್‍ಎಫ್ ಸೈನಿಕರಿಗೆ ಹಸ್ತಾಂತರಿ ಸಿದರು. ಉಭಯ ದೇಶಗಳ ನಡುವೆ ಗಡಿ ಸಂಘರ್ಷದ ವೇಳೆ ಅರುಣಾ ಚಲ ಪ್ರದೇಶದ ಗಡಿ ಭಾಗದಿಂದ ಈ ಐವರನ್ನು ಚೀನಿ ಯೋಧರು ಅಪಹರಿಸಿದ್ದರು.

ಇವರ ಸುರಕ್ಷಿತ ಬಿಡುಗಡೆಗಾಗಿ ಮಿಲಿಟರಿ ಮತ್ತು ರಾಜ ತಾಂತ್ರಿಕ ಯತ್ನಗಳು ಮುಂದುವರೆದಿತ್ತು.  ಮೊನ್ನೆ ರಾತ್ರಿ ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಭಾರತ ವಿದೇಶಾಂಗ ವ್ಯವಹಾರಗಳ ಸಚಿವ ಜೈ ಶಂಕರ್ ಚೀನಾದ ವಿದೇಶಾಂಗ ಮಂತ್ರಿ ವಾಂಗ್-ಇ ಅವರ ನಡುವೆ ನಡೆದ ಮಾತುಕತೆ ನಂತರ ಗಡಿ ಸಂಘರ್ಷ ಶಮನಕ್ಕೆ ಐದು ಅಂಶಗಳ ಸೂತ್ರಕ್ಕೆ ಸಹಮತ ವ್ಯಕ್ತವಾದ ಬೆನ್ನಲ್ಲೇ ಐವರು ಅಪಹೃತ ಭಾರತೀಯರನ್ನು ಚೀನಾ ಬಿಡುಗಡೆಗೊಳಿಸಿದೆ.

ಈ ಬೆಳವಣಿಗೆಯು ಉಭಯ ದೇಶಗಳ ನಡುವಣ ಗಡಿ ಬಿಕ್ಕಟ್ಟಿನ ಸಂದರ್ಭದಲ್ಲಿ ಸದ್ಭಾವದ ಸಂಗತಿಯಾಗಿದೆ ಎಂದು ಭಾರತೀಯ ಸೇನಾ ಪಡೆಯ ಉನ್ನತಾಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

Facebook Comments