ಕಾಶ್ಮೀರದಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಹುತಾತ್ಮರಾದ ನಾಲ್ವರು ಯೋಧರು

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀನಗರ, ಆ.18-ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾಪಡೆಗಳ ಕ್ಷಿಪ್ರ ಕಾರ್ಯಾಚರಣೆ ನಡುವೆಯೂ ಉಗ್ರಗಾಮಿಗಳ ಅಟ್ಟಹಾಸ ಹೆಚ್ಚಾಗುತ್ತಿದೆ. ಬಾರಾಮುಲ್ಲಾ ಜಿಲ್ಲೆಯಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಈ ಆಕ್ರಮಣದಲ್ಲಿ ಕೆಲವು ಸೈನಿಕರಿಗೂ ಗಾಯಗಳಾಗಿವೆ.

ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ಮೂವರು ಲಷ್ಕರ್-ಎ.-ತೈಬಾ (ಎಲ್‍ಇಟಿ) ಉಗ್ರಗಾಮಿಗಳನ್ನು ಹೊಡೆದುರುಳಿಸಲಾಗಿದೆ. ಹತರಾದ ಉಗ್ರರಲ್ಲಿ ಎಲ್‍ಇಟಿ ಟಾಪ್ ಕಮಾಂಡರ್ ಸಜದ್ ಅಲಿಯಾಸ್ ಹೈದರ್ ಅಲಿಯಾಸ್ ರಾಜಾ ಸಹ ಸೇರಿದ್ದಾನೆ.

ಹಲವಾರು ಭಯೋತ್ಪಾದನೆ ಕೃತ್ಯಗಳಲ್ಲಿ ಶಾಮೀಲಾಗಿದ್ದ ಈತ ಕಾಶ್ಮೀರದ ಯುವಕರನ್ನು ಉಗ್ರಗಾಮಿ ಸಂಘಟನೆಗೆ ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾ ನಿರ್ದೇಶಕ ದಿಲ್‍ಭಾಗ್ ಸಿಂಗ್ ತಿಳಿಸಿದ್ದಾರೆ.

ಸಜದ್ ಕಾಶ್ಮೀರದಲ್ಲಿ ಪೊಲೀಸರಿಗೆ ಅಗತ್ಯವಾಗಿ ಬೇಕಾಗಿದ್ದ ಕುಖ್ಯಾತ ಉಗ್ರಗಾಮಿ ನಾಯಕರಾಗಿದ್ದ. 2016ರಲ್ಲಿ ಎಲ್‍ಇಟಿ ಉಗ್ರಗಾಮಿ ಸಂಘಟನೆಗೆ ಸೇರಿದ್ದ ಈತ ಹತನಾದ ಹಿಜ್‍ಬುಲ್ ಮುಜಾಹಿದ್ಧೀನ್ (ಎಚ್‍ಎಂ) ಭಯೋತ್ಪಾದನೆ ಗುಂಪಿನ ಅಗ್ರ ನಾಯಕ ಬುಹ್ರನ್ ವನಿಗೆ ಆಪ್ತನಾಗಿದ್ದು, ಅತ್ಯಂತ ಪ್ರಭಾವಿ ಕಮಾಂಡರ್ ಆಗಿದ್ದ ಎಂದು ಡಿಜಪಿ ತಿಳಿಸಿದ್ದಾರೆ.

ಕಾಶ್ಮೀರದ ನಿರುದ್ಯೋಗಿ ಯುವಕರನ್ನು ಪುಸಲಾಯಿಸಿ ಅವರಿಗೆ ಸಾಕಷ್ಟು ಹಣ ನೀಡಿ ಉಗ್ರಗಾಮಿ ಸಂಘಟನೆ ಸೇರಿಸಿಕೊಳ್ಳುವ ಕಾರ್ಯದಲ್ಲಿ ಈತ ಅತ್ಯಂತ ಕುತಂತ್ರಿಯಾಗಿದ್ದ ಎಂದು ಅವರು ಹೇಳಿದ್ದಾರೆ.

ಈತನ ಸಹಚರರಾದ ಆನಾಯತುಲ್ಲಾ ಮತ್ತು ಉಸ್ಮಾನ್ ಅವರನ್ನು ಸಹ ಯೋಧರು ಹೊಡೆದುರುಳಿಸಿದ್ದಾರೆ. ಹತರಾದ ಭಯೋತ್ಪಾದಕರಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದಕ್ಕೂ ಮುನ್ನ ಈ ಉಗ್ರರು ಬಾರಾಮುಲ್ಲಾ ಜಿಲ್ಲೆಯ ಕ್ರೀರಿ ಪ್ರದೇಶದ ನಾಕಾ ಎಂಬಲ್ಲಿ ನಡೆಸಿದ ದಾಳಿಯಲ್ಲಿ ಸಿಆರ್‍ಪಿಎಫ್‍ನ ಮೂವರು ಯೋಧರು ಮತ್ತು ಕಾಶ್ಮೀರದ ವಿಶೇಷ ಪೊಲೀಸ್ ಅಕಾರಿ (ಎಸ್‍ಪಿಒ) ಹುತಾತ್ಮರಾದರು.
ಈ ದಾಳಿಯಲ್ಲಿ ಕೆಲವು ಯೋಧರಿಗೆ ಗಾಯಗಳಾಗಿವೆ.

# ಪುಲ್ವಾಮ ಘಟನೆ :
ಪುಲ್ವಾಮಾ ಕಮ್ರಾಜಿಪೆÇರಾ ಪ್ರದೇಶದಲ್ಲಿ ಭದ್ರತಾಪಡೆಗಳ ಜೊತೆ ನಡೆದ ಗುಂಡಿನ ಕಾಳಗದಲ್ಲಿ ಭಯೋತ್ಪಾದಕನೊಬ್ಬ ಹತನಾಗಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಯೋಧರೊಬ್ಬರು ಹುತಾತ್ಮರಾಗಿದ್ದಾರೆ ಎಂದು ಹಿರಿಯ ಸೇನಾಕಾರಿಯೊಬ್ಬರು ತಿಳಿಸಿದ್ದಾರೆ.

ಹತ ಭಯೋತ್ಪಾದಕನ ಬಳಿ ಇದ್ದ ಎಕೆ-47 ರೈಫಲ್, ಸ್ಪೋಟಕ, ಪಿಸ್ತೂಲ್ ಮತ್ತು ಬುಲೆಟ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರದೇಶದಲ್ಲಿ ಅವಿತಿಟ್ಟುಕೊಂಡಿರಬಹುದಾದ ಉಗ್ರರ ನಿಗ್ರಹ ಕಾರ್ಯಾಚರಣೆ ಮುಂದುವರಿದಿದೆ.

# ಸಿಆರ್‍ಪಿಎಫ್ ಶಿಬಿರದ ಮೇಲೆ ದಾಳಿ :
ಈ ಮಧ್ಯೆ ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯ ನೆಹಾಮಾ ಪ್ರದೇಶದಲ್ಲಿ ಸಿಆರ್‍ಪಿಎಫ್ ಶಿಬಿರದ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಅಕಾರಿ ಸೇರಿದಂತೆ ಕೆಲವು ಯೋಧರಿಗೆ ಗಾಯಗಳಾಗಿವೆ.  ಅತ್ತ ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ಕಾರ್ಯಾಚರಣೆಯೊಂದರಲ್ಲಿ ಪೊಲೀಸರು ಉಗ್ರಗಾಮಿಯೊಬ್ಬನನ್ನು ಬಂಸಿ ರೈಫಲ್ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ಧಾರೆ.

ಜಮ್ಮು ಮತ್ತು ಕಾಶ್ಮೀರ ಪುಲ್ವಾಮ ಜಿಲ್ಲೆಯಲ್ಲಿ ಸೇತುವೆಯೊಂದನ್ನು ಸೋಟಿಸಿ ಭಾರೀ ವಿಧ್ವಂಸಕ ಕೃತ್ಯ ನಡೆಸುವ ಪಾಕಿಸ್ತಾನ ಬೆಂಬಲಿತ ಉಗ್ರಗಾಮಿಗಳ ಕೃತ್ಯವನ್ನು ಭದ್ರತಾಪಡೆಗಳು ವಿಫಲಗೊಳಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

ಪುಲ್ವಾಮ ಜಿಲ್ಲೆಯ ತುಜಾನ್ ಗ್ರಾಮದ ಬಳಿ ಸೇತುವೆಯ ಕೆಳಗೆ ಭಯೋತ್ಪಾದಕರು ಅಡಗಿಸಿಟ್ಟಿದ್ದ ಸುಧಾರಿತ ಸ್ಪೋಟಕವನ್ನು(ಐಇಡಿ) ಭದ್ರತಾಪಡೆಗಳು ನಿನ್ನೆ ತಡರಾತ್ರಿ ಪತ್ತೆ ಮಾಡಿ, ಸಂಭವಿಸಬಹುದಾದ ಭೀಕರ ದುಷ್ಕøತ್ಯವನ್ನು ತಪ್ಪಿಸಿವೆ.

Facebook Comments

Sri Raghav

Admin