ವಾರ್ಡನ್ ಸೇರಿ ಇಬ್ಬರನ್ನು ಕೊಂದು ಐವರು ಬಾಲಾಪರಾಧಿಗಳು ಎಸ್ಕೇಪ್..!

ಈ ಸುದ್ದಿಯನ್ನು ಶೇರ್ ಮಾಡಿ

2-Kiled--01

ಪಾಟ್ನಾ, ಸೆ.20- ಬಿಹಾರದ ಪೂರ್ನಿಯಾ ಪಟ್ಟಣದ ಬಾಲಾಪರಾಧಿಗಳ ಮಂದಿರದಲ್ಲಿದ್ದ ಐವರು ವಾರ್ಡನ್ ಹಾಗೂ ಇನ್ನೊಬ್ಬ 17 ವರ್ಷದ ಬಾಲಾಪರಾಧಿಗೆ ಗುಂಡಿಟ್ಟು ಹತ್ಯೆಗೈದು ಪರಾರಿಯಾಗಿದ್ದಾರೆ. ಆ ಐವರು ಬಾಲಾಪರಾಧಿಗಳಲ್ಲಿ ಓರ್ವ ಸ್ಥಳೀಯ ಜೆಡಿಯು ಮುಖಂಡನ ಮಗ. ಮತ್ತೊಬ್ಬ ಈಗಾಗಲೇ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾದವನಾಗಿದ್ದು, ಅವನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಇವರಿಗೆ ಗನ್ ಹೇಗೆ ಸಿಕ್ಕಿತು ಎಂಬುದನ್ನು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

ಈ ಐವರು ಕೆಮ್ಮಿನ ಔಷಧವನ್ನು ಮಾದಕ ದ್ರವ್ಯದಂತೆ ಸೇವಿಸುತ್ತಿದ್ದರು. ಹಾಗೆ ಸೇವಿಸುತ್ತಿದ್ದಾಗಲೇ ಪರಿಶೀಲನೆಗೆ ಬಂದ ವಾರ್ಡನ್ ಬಳಿ ಸಿಕ್ಕಿಬಿದ್ದಿದ್ದರು. ಅದಾದ ಬಳಿಕ ವಾರ್ಡನ್ ಬಿಜೇಂದ್ರ ಕುಮಾರ್ ವಿರುದ್ಧ ತಿರುಗಿಬಿದ್ದಿದ್ದರು. ಬಿಜೇಂದ್ರ ಕುಮಾರ್ ಬಾಲಾಪರಾಧಿಗಳ ಮಾದಕ ದ್ರವ್ಯ ಸೇವನೆಯ ವಿಷಯವನ್ನು ಸ್ಥಳೀಯ ಬಾಲಾಪರಾಧಿಗಳ ನ್ಯಾಯ ಮಂಡಳಿಗೆ ತಿಳಿಸಿದ್ದರು. ಹಾಗೇ ಈ ಐವರನ್ನೂ ಬೇರೆ ಕಡೆಗೆ ಸ್ಥಳಾಂತರಿಸುವಂತೆ ಮನವಿ ಮಾಡಿದ್ದರು. ಹಾಗೇ ನಿನ್ನೆ ನ್ಯಾಯ ಮಂಡಳಿ ಇದಕ್ಕೆ ಸಮ್ಮತಿಸಿತ್ತು.

ಅದನ್ನು ಕೇಳಿದ ಐವರು ಅಪರಾಧಿಗಳು ವಾರ್ಡನ್‍ನನ್ನು ಕೊಂದಿದ್ದಾರೆ. ಅಲ್ಲದೆ, ಅವರು ಮಾದಕ ದ್ರವ್ಯವನ್ನು ಬಚ್ಚಿಟ್ಟ ವಿಷಯ, ಅದನ್ನು ಸೇವಿಸುತ್ತಿದ್ದ ಬಗ್ಗೆ ತಿಳಿದಿದ್ದ ಇನ್ನೊಬ್ಬ 17 ವರ್ಷದ ಅಪರಾಧಿಯನ್ನೂ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಈ ಬಾಲಾಪರಾಧಿಗಳ ಕೇಂದ್ರದಿಂದ ಸುಮಾರು 325 ಕಿಮೀ ದೂರದಲ್ಲಿದೆ. ಬಾಲಾಪರಾಧಿಗಳು ಅಲ್ಲಿಂದ ಪರಾರಿಯಾಗುವಾಗ ಸೆಕ್ಯೂರಿಟಿ ಗಾರ್ಡ್‍ಅನ್ನು ಬೆದರಿಸಿ ಗೇಟ್ ಕೀ ತೆಗೆಸಿಕೊಂಡು ಹೋಗಿದ್ದಾರೆ. ಎಫ್‍ಐಆರ್ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin