50ಕ್ಕೂ ಹೆಚ್ಚು ಗ್ಯಾಂಗ್ರೇಪ್ ಮಾಡಿರುವುದಾಗಿ ತಪ್ಪೊಪ್ಪಿಕೊಂಡ ಆರೋಪಿಗಳು..!

ಈ ಸುದ್ದಿಯನ್ನು ಶೇರ್ ಮಾಡಿ

Gang-Rape

ಬುಲಂದ್ಷಹರ್ (ಉ.ಪ್ರ.), ಆ.19- ಸಾಮೂಹಿಕ ಅತ್ಯಾಚಾರ ಪ್ರಕರಣವೊಂದರಲ್ಲಿ ಇತ್ತೀಚೆಗೆ ಬಂಧಿತರಾದ ಆರು ಮಂದಿ ಭಯಾನಕ ಕ್ರಿಮಿನಲ್ಗಳು ಬೆಚ್ಚಿಬೀಳಿಸುವ ಹೀನಾಯ ಕೃತ್ಯಗಳನ್ನು ಬಹಿರಂಗಗೊಳಿಸಿದ್ದಾರೆ.  50ಕ್ಕೂ ಹೆಚ್ಚು ಗ್ಯಾಂಗ್ರೇಪ್ಗಳು ಮತ್ತು ಕೊಲೆ ಹಾಗೂ ಡಕಾಯಿತಿ ಪ್ರಕರಣಗಳನ್ನು ತಾವು ನಡೆಸಿದ್ದಾಗಿ ಆರೋಪಿಗಳು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ.
ಈ ಭಯಾನಕ ಗ್ಯಾಂಗ್ ಉತ್ತರ ಪ್ರದೇಶ, ಛತ್ತೀಸ್ಗಢ, ರಾಜಸ್ತಾನ, ಬಿಹಾರ ಮತ್ತು ಉತ್ತರಾಖಂಡ್ ರಾಜ್ಯಗಳಲ್ಲೂ ಇದೇ ರೀತಿಯ ಬರ್ಬರ ಕೃತ್ಯಗಳನ್ನು ಎಸಗಿದ್ದರು.
ರಾಜಸ್ತಾನದ ಹನುಮಗಿರಿಯಲ್ಲಿ ಕುಟುಂಬವೊಂದರ ಮೇಲೆ ದಾಳಿ ನಡೆಸಿ ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಂದಿದ್ದಾಗಿ ಈ ಗ್ಯಾಂಗ್ನ ಮುಖ್ಯಸ್ಥ ಸಲೀಂ ಜವಾರಿಯಾ ಒಪ್ಪಿಕೊಂಡಿದ್ದಾನೆ.

ರಾಷ್ಟ್ರೀಯ ಹೆದ್ದಾರಿ-91ರಲ್ಲಿ ನಡೆದ ಡಕಾಯಿತಿ ಕೃತ್ಯಗಳು ಮತ್ತು ಗ್ಯಾಂಗ್ರೇಪ್ ಪ್ರಕರಣಗಳಲ್ಲಿ ಶಾಮೀಲಾಗಿದ್ದ ಈ ಗ್ಯಾಂಗ್ನ ಜುಲೈ 29ರಂದು ನಡೆಸಿದ ಘೋರ ಕೃತ್ಯ ದೇಶವನ್ನು ಬೆಚ್ಚಿಬೀಳಿಸಿತು.  ಎನ್ಎಚ್-91 ಬುಲಂದ್ಷಹರ್ನಲ್ಲಿ ಕಾರೊಂದನ್ನು ಅಡ್ಡಗಟ್ಟಿ ಈ ಗ್ಯಾಂಗ್ ಅದರಲ್ಲಿ ಪ್ರಯಾಣಿಕರನ್ನು ಗನ್ ತೋರಿಸಿ ಬೆದರಿಸಿ ಮಹಿಳೆ ಮತ್ತು ಆಕೆಯ 13 ವರ್ಷದ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿತ್ತು. ಈ ಪ್ರಕರಣದ ಸಂಬಂಧ ಸಲೀಂ ಸೇರಿದಂತೆ ಆರು ಮಂದಿಯನ್ನು ಬಂಧಿಸಲಾಗಿತ್ತು. ಈ ಭಯಾನಕ ದುಷ್ಕರ್ಮಿಗಳು ಬುಲಂದ್ಷಹರ್ ಅಲ್ಲದೆ ಭಾಗ್ಪತ್, ನೈನಿತಾಲ್, ಶಮ್ಲಿ, ರಾಂಚಿ, ಬಿಹಾರ್ ಶರೀಫ್, ಪಾಟ್ನಾ ಮತ್ತು ಅಸನೊಲ್ ನಗರಗಳಲ್ಲೂ ಕುಟುಂಬಗಳನ್ನು ಗುರಿಯಾಗಿರಿಸಿಕೊಂಡು ಗ್ಯಾಂಗ್ರೇಪ್ ಮತ್ತು ಡಕಾಯಿತಿ ನಡೆಸಿದ ಪ್ರಕರಣಗಳು ಬೆಳಕಿಗೆ ಬಂದಿವೆ.

► Follow us on –  Facebook / Twitter  / Google+

Facebook Comments

Sri Raghav

Admin

Comments are closed.