50ದಿನದ ಸಂಭ್ರಮದಲ್ಲಿ ‘ಮಫ್ತಿ’

ಈ ಸುದ್ದಿಯನ್ನು ಶೇರ್ ಮಾಡಿ

mafti-1

ನರ್ತನ್ ನಿರ್ದೇಶನದ ಪ್ರಥಮ ಚಿತ್ರ ಮಫ್ತಿ 50 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಹಾಗೂ ಉಗ್ರಂ ಖ್ಯಾತಿಯ ಶ್ರೀಮುರಳಿ ಒಟ್ಟಿಗೇ ಅಭಿನಯಿಸಿದ್ದ ಮಫ್ತಿ ಚಿತ್ರ ಬಿಡುಗಡೆಯ ಹಂತದಲ್ಲಿ ಚಿತ್ರರಂಗದಲ್ಲಿ ಭಾರೀ ಸದ್ದು ಮಾಡಿತ್ತು. ಆ ಚಿತ್ರ ಈಗ ರಾಜ್ಯಾದ್ಯಂತ ಯಶಸ್ವಿಯಾಗಿ ಐವತ್ತು ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಈ ಸಂಭ್ರಮದ ಕ್ಷಣಗಳನ್ನು ಶಿವರಾಜ್‍ಕುಮಾರ್ ಅವರ ಮನೆಯಲ್ಲಿಯೇ ಶಿವಣ್ಣ ಅಭಿಮಾನಿಗಳೆಲ್ಲರೂ ಸೇರಿ ಆಚರಿಸಿದ್ದಾರೆ.

ಅಖಿಲ ಕರ್ನಾಟಕ ಡಾ.ಶಿವರಾಜ್‍ಕುಮಾರ್ ಸೇನಾ ಸಮಿತಿ ಮತ್ತು ಗಂಡುಗಲಿ ಡಾ.ಶಿವರಾಜಕುಮಾರ್ ಅಭಿಮಾನಿಗಳ ಸಂಘದ ಎಲ್ಲಾ ಪದಾಧಿಕಾರಿಗಳು ಸೇರಿ ಜಂಟಿಯಾಗಿ ಅಯೋಜಿಸಿದ್ದ ಈ ಕಾರ್ಯಕ್ರಮ ದಲ್ಲಿ ನಟ ಶಿವರಾಜ್ ಕುಮಾರ್, ಶ್ರೀಮುರಳಿ, ನಿರ್ಮಾಪಕರಾದ ಜಯಣ್ಣ, ಭೋಗೇಂದ್ರ, ನಿರ್ದೇಶಕ ನರ್ತನ್, ಸಾಹಸ ನಿರ್ದೇಶಕ ರವಿವರ್ಮ ಹಾಗೂ ಬಾಲ ನಟಿ ನೈನಾ ಸೇರಿದಂತೆ ಇಡೀ ಮಫ್ತಿ ಚಿತ್ರತಂಡ ಹಾಜರಿದ್ದು ಅಭಿಮಾನಿಗಳಿಂದ ಸ್ಮರಣ ಫಲಕವನ್ನು ಸ್ವೀಕರಿಸಿದರು. ನಂತರ ಚಿತ್ರದ ಬಗ್ಗೆ ಮಾತನಾಡಿದ ಶಿವಣ್ಣ ಈ ಚಿತ್ರವನ್ನು ನೋಡಿ ಗೆಲ್ಲಿಸಿದ ರಾಜ್ಯದ ಜನತೆಗೆ ನನ್ನ ಕೃತಜ್ಞತೆಗಳು. ಒಬ್ಬ ಕಲಾವಿದನಾಗಿ ನಮ್ಮ ಜವಾಬ್ದಾರಿ ಎನ್ನೂ ಹೆಚ್ಚಾಗಿದೆ. ಈ ಚಿತ್ರದ ಯಶಸ್ಸಿನ ಹಿಂದೆ ಹಲವಾರು ಜನರಿದ್ದಾರೆ. ಎಲ್ಲದಕ್ಕೂ ಹೆಚ್ಚಾಗಿ, ಇಡೀ ಚಿತ್ರತಂಡ ತುಂಬಾ ಶ್ರಮ ಪಟ್ಟು ಚಿತ್ರಕ್ಕಾಗಿ ಕೆಲಸ ಮಾಡಿದೆ. ಒಳ್ಳೆಯ ಚಿತ್ರಕ್ಕೆ ನಮ್ಮ ಜನ ಖಂಡಿತಾ ಬೆಂಬಲಿಸುತ್ತಾರೆ ಎನ್ನುವುದಕ್ಕೆ ಮಫ್ತಿ ಚಿತ್ರದ ಯಶಸ್ಸೇ ಸಾಕ್ಷಿ ಎಂದರು.

Facebook Comments

Sri Raghav

Admin