50 ನಕ್ಸಲರ ಕೊಂದು ಸುಕ್ಮಾ ಹತ್ಯಾಕಾಂಡಕ್ಕೆ ಪ್ರತೀಕಾರ : ಸಿಆರ್‍ಪಿಎಫ್ ಯೋಧ ಶಪಥ

ಈ ಸುದ್ದಿಯನ್ನು ಶೇರ್ ಮಾಡಿ

CRPF--01

ರಾಯಪುರ್, ಏ.26-ಇಪ್ಪತ್ತೈದು ಸಿಆರ್‍ಪಿಎಫ್ ಯೋಧರನ್ನು ಬಲಿ ತೆಗೆದುಕೊಂಡ ಸುಕ್ಮಾ ಹತ್ಯಾಕಾಂಡಕ್ಕೆ ಪ್ರತಿಯಾಗಿ 50 ನಕ್ಸಲರನ್ನು ಕೊಂದು ಸೇಡು ತೀರಿಸಿಕೊಳ್ಳುತ್ತೇನೆ-ಇದು ಮಾವೋವಾದಿಗಳ ದಾಳಿಯಿಂದ ಬದುಳಿದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿಆರ್‍ಪಿಎಫ್ ಯೋಧ ಮಹೇಂದ್ರ ಕುಮಾರ್ ಮಾಡಿರುವ ಶಪಥ.  ಛತ್ತೀಸ್‍ಗಢದ ಬಸ್ತರ್ ಪ್ರಾಂತ್ಯದ ಸುಕ್ಮಾ ಜಿಲ್ಲೆ ಕಾಲಾಪತ್ಥರ್ ಪ್ರದೇಶದಲ್ಲಿ ರಸ್ತೆ ನಿರ್ಮಿಸುವ ಕಾರ್ಮಿಕರ ರಕ್ಷಣೆಗೆ ನಿಯೋಜಿತರಾಗಿದ್ದ ಸಿಆರ್‍ಪಿಎಫ್ ಯೋಧರು ಊಟ ಮಾಡುತ್ತಿದ್ದ ವೇಳೆ ಮಾವೋವಾದಿ ನಕ್ಸಲೀಯರು ಹಠಾತ್ ದಾಳಿ ನಡೆಸಿ 25 ಜನರ ಮಾರಣಹೋಮ ನಡೆಸಿದ್ದರು.



ತಲೆಗೆ ತೀವ್ರ ಪೆಟ್ಟಾಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹೇಂದ್ರ ಕುಮಾರ್, ತಮ್ಮ ಶೋಚನೀಯ ಸ್ಥಿತಿಯಲ್ಲಿಯೂ ನಕ್ಸಲರ ವಿರುದ್ಧ ಸೇಡು ತೀರಿಸಿಕೊಳ್ಳುವುದಾಗಿ ಸಾರಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin