50 ವರ್ಷದೊಳಗಿನ ಭಾರತೀಯ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಕಾಟ..!

ಈ ಸುದ್ದಿಯನ್ನು ಶೇರ್ ಮಾಡಿ

breast-cancer

ಭಾರತೀಯ ಮಹಿಳೆಯರಿಗೆ ಆಘಾತಕಾರಿಯಾದ ಸುದ್ದಿಯೊಂದು ಹೊರಬಿದ್ದಿದೆ. 50 ವರ್ಷದೊಳಿಗಿನ ಶೇ.46ರಷ್ಟು ಮಹಿಳೆಯರು ಕ್ಯಾನ್ಸರ್ ರೋಗದಿಂದ ಬಳತ್ತಿದ್ದಾರೆ ಎಂಬ ಮಾಹಿತಿಯನ್ನು ಭಾರತೀಯ ವೈದ್ಯರು ಹೊರಹಾಕಿದ್ದಾರೆ. ತಡವಾಗಿ ವಿವಾಹವಾಗುವುದು, ನಿಗದಿತ ವಯಸ್ಸಿಗೆ ಮೀರಿದ ನಂತರದಲ್ಲಿ ಮಕ್ಕಳನ್ನು ಹೇರುವುದು, ಬಹುಸಂಖ್ಯಾತರೊಡನೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದರ ಪ್ರತಿಫಲವಾಗಿ ಸ್ತನ ಮತ್ತು ಕುತ್ತಿಗೆ ಕ್ಯಾನ್ಸರ್ಗಳಿಗೆ ಮಹಿಳೆಯರು ತುತ್ತಾಗುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

20-30ರ ಹರೆಯದ ಶೇ. 20ರಷ್ಟು, 30-40ರ ವಯಸ್ಸಿನ ಶೇ. 16ರಷ್ಟು ಮತ್ತು 40-50ರ ವಯಸ್ಸಿನ ಶೇ.28ರಷ್ಟು ಭಾರತೀಯ ಮಹಿಳೆಯರು ಕ್ಯಾನ್ಸರ್ಗೆ ಗುರಿಯಾಗುತ್ತಿದ್ದಾರೆ. ಈ ಮೂಲಕ 50ನೇ ವಯೋಮಾನದೊಳಗಿನ ಒಟ್ಟಾರೆ ಶೇ.46ರಷ್ಟು ಮಹಿಳೆಯರು ಈ ಮಾರಾಕ ರೋಗದಿಂದ ಬಳಲುತ್ತಿರುವುದಾಗಿ ಅಧ್ಯಯನವೊಂದರಲ್ಲಿ ತಿಳಿದುಬಂದಿದೆ. 25-40ರ ವಯಸ್ಸಿನ ಮಹಿಳೆಯರೇ ಹೆಚ್ಚಾಗಿ ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿರುವುದರ ಜೊತೆಗೆ ಇತ್ತೀಚಿನ ದಿನಗಳಲ್ಲಿ ವಯಸ್ಸಾದ ಮಹಿಳೆಯರಿಗಿಂತ ಹೆಚ್ಚಾಗಿ ತರುಣಿಯರೇ ಹೆಚ್ಚಾಗಿ ಕ್ಯಾನ್ಸರ್ಗೆ ಗುರಿಯಾತ್ತಿದ್ದಾರೆ ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಕ್ಯಾನ್ರ್ಸ ತಡೆಗಟ್ಟುವಿಕೆ ಮತ್ತು ರಿಸರ್ಚ್ ಅಂಕಿ ಅಂಶದ ಪ್ರಕಾರ, ಕುತ್ತಿಗೆ ಕ್ಯಾನ್ಸರ್ ನಿಂದಾಗಿ ಭಾರತದಲ್ಲಿ ಪ್ರತಿ ಎಂಟು ನಿಮಿಷಕ್ಕೆ ಒಬ್ಬ ಮಹಿಳೆ ಸಾವನ್ನಪ್ಪುತ್ತಿದ್ದಾರೆ ಎನ್ನಲಾಗಿದೆ. ಇದಲ್ಲದೆ ಪ್ರತಿ ಇಬ್ಬರು ಭಾರತೀಯ ಮಹಿಳೆಯರ ಪೈಕಿ ಒಬ್ಬರಲ್ಲಿ ಸ್ತನ ಕ್ಯಾನ್ಸರ್ ಪತ್ತೆಯಾಗುತ್ತಿದೆ ಎಂದು ಹೇಳಲಾಗಿದೆ. ಇದಲ್ಲದೆ ಪ್ರತಿದಿನ 2500 ಮಂದಿ ತಂಬಾಕು ಸಂಬಂಧಿತ ಕಾಯಿಲೆಯಿಂದ ಮೃತಪಡುತ್ತಿದ್ದಾರೆ ಎಂದೂ ಅಂಕಿಸಂಖ್ಯೆ ತಿಳಿಸುತ್ತಿದೆ.

Brest-Cancer--01

ಬದಲಾದ ಲೈಫ್ ಸ್ಟೈಲ್ ನಿಂದಾಗಿ ಮುಂದಿನ ದಿನಗಳಲ್ಲೂ ಮಹಿಳೆಯರು ಕ್ಯಾನ್ಸರ್ನಿಂದ ಬಳಲುವ ಸಾಧ್ಯತೆ ದಟ್ಟವಾಗಿದೆ ಎಂದು ವೈದ್ಯರು ಇದೇ ವೇಳೆ ಭವಿಷ್ಯವನ್ನು ನುಡಿದಿರುವುದು ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾದ ಅಗತ್ಯವಿದೆ. ಸಾಧ್ಯವಾದಷ್ಟು ಕಾಲಕಾಲಕ್ಕೆ ವೈದ್ಯರನ್ನು ಭೇಟಿ ಮಾಡಿ ಸಲಹೆ ಮತ್ತು ಸೂಚನೆಗಳನ್ನು ಪಡೆದುಕೊಳ್ಳುವುದು ಉತ್ತಮ.

# ಭಾರತದಲ್ಲಿ 2020ರ ವೇಳೆಗೆ ಕ್ಯಾನ್ಸರ್‍ಗೆ ಬಲಿಯಾಗಲಿದ್ದಾರಂತೆ 8.8 ಲಕ್ಷ ಮಂದಿ..!

ಮುಂದಿನ 20 ವರ್ಷಗಳಲ್ಲಿ ಮಹಿಳೆಯರು ಮಾರಕ ಕ್ಯಾನ್ಸರ್‍ಗೆ ಒಳಗಾಗುವ ಗಂಡಾಂತರ ಆರು ಪಟ್ಟು ಹೆಚ್ಚಾಗಲಿದೆ ಎಂಬ ಆತಂಕಕಾರಿ ಸಂಗತಿಯನ್ನು ಬ್ರಿಟನ್ ಕ್ಯಾನ್ಸರ್ ಸಂಶೋಧನಾ ಸಂಸ್ಥೆ ಬಹಿರಂಗಗೊಳಿಸಿದೆ.  ಭಾರತದಲ್ಲಿ 2020ರ ವೇಳೆ 17.3 ಲಕ್ಷ ಮಂದಿ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗುತ್ತಾರೆ ಹಾಗೂ 8.8 ಲಕ್ಷ ಮಂದಿ ಕ್ಯಾನ್ಸರ್‍ನಿಂದ ಸಾವಿಗೀಡಾಗುವ ಸಾಧ್ಯತೆ ಇದೆ.  ಬೊಜ್ಜು ಮತ್ತು ಸ್ಥೂಲಕಾಯವೇ ಇದಕ್ಕೆ ಮುಖ್ಯ ಕಾರಣ. ಬಹಳಷ್ಟು ಮಹಿಳೆಯರು ಬೊಜ್ಜು ಸಂಬಂಧಿ ಕ್ಯಾನ್ಸರ್‍ಗಳಿಗೆ ತುತ್ತಾಗುತ್ತಿದ್ದಾರೆ. ಈ ಪ್ರಮಾಣ ಮುಂದಿನ ಎರಡು ದಶಕಗಳಲ್ಲಿ ಆರು ಪಟ್ಟು ಹೆಚ್ಚಾಗಲಿದೆ. ಧೂಮಪಾನ ಮಾಡುವ ಮಹಿಳೆಯರಲ್ಲೂ ಕ್ಯಾನ್ಸರ್ ಸಾಧ್ಯತೆ ತೀವ್ರ ಪ್ರಮಾಣದಲ್ಲಿ ವೃದ್ದಿಯಾಗಲಿದೆ ಎಂದು ಅಧ್ಯಯನ ಹೇಳಿದೆ.

ಸ್ತನ ಕ್ಯಾನ್ಸರ್ ಜೊತೆಗೆ, ಅಂಡಾಶಯ, ಗರ್ಭಕೊರಳು, ಮತ್ತು ಬಾಯಿ ಕ್ಯಾನ್ಸರ್‍ನಂಥವು ಅತ್ಯಧಿಕವಾಗುವ ಸಾಧ್ಯತೆ ಇದೆ ಎಂಬ ವಿಶ್ವ ಆರೋಗ್ಯ ಸಂಸ್ಥೆಯ ವರದಿಯನ್ನು ಉಲ್ಲೇಖಿಸಿ ವಿವರಿಸಲಾಗಿದೆ.   ಸಾವಿಗೆ ಐದು ಪ್ರಮುಖ ಕಾರಣಗಳಲ್ಲಿ ಕ್ಯಾನ್ಸರ್ ಕೂಡ ಒಂದು. ಜೀವನಶೈಲಿ ಮತ್ತು ಆಹಾರ ಪದ್ದತಿ, ಮಿತಿ ಮೀರಿದ ದೇಹ ತೂಕ, ಹಣ್ಣು ಮತ್ತು ತರಕಾರಿಗಳ ಕಡಿಮೆ ಸೇವನೆ, ವ್ಯಾಯಾಮ ಕೊರತೆ, ಧೂಮಪಾನ ಮತ್ತು ಮದ್ಯಪಾನ ಸೇವನೆ ಇದಕ್ಕೆ ಮುಖ್ಯ ಕಾರಣ ಎಂದು ತಿಳಿಸಲಾಗಿದೆ.

 

Facebook Comments

Sri Raghav

Admin