50-100 ರೂ. ನೋಟುಗಳಿಗೂ ಕಾದಿದೆ ಕುತ್ತು..! ಹೊಸ ನೋಟುಗಳಿಗೆ ಸದ್ದಿಲ್ಲದೇ ಕೇಂದ್ರ ತಯಾರಿ

ಈ ಸುದ್ದಿಯನ್ನು ಶೇರ್ ಮಾಡಿ

100-and-50-Note

ನವದೆಹಲಿ, ನ.11- ಐನೂರು, ಸಾವಿರ ರೂಪಾಯಿ ನೋಟುಗಳನ್ನ ಹಿಂಪಡೆದಿದ್ದು ಆಯ್ತು. ಈಗ ಹೊಸ ಸುದ್ದಿ ಕೇಳಿ. ಈಗ ನಿಮ್ಮ ಕೈಯಲ್ಲಿರುವ 50 ರೂಪಾಯಿ ಮತ್ತು ನೂರು ರೂಪಾಯಿ ನೋಟುಗಳಿಗೂ ಬದಲಾವಣೆಯ ಕಾಲ ಹತ್ತಿರವಾಗಿದೆ. ಈ ಎರಡೂ ನೋಟುಗಳನ್ನು ಹೊಸ ರೂಪದಲ್ಲಿ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. 1000 ರೂ ನೋಟಿನ ಜೊತೆಗೆ 50 ಹಾಗೂ 100 ರೂ. ನೋಟುಗಳನ್ನೂ ಕೂಡ ಹೊಸ ರೂಪದಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಕೇಂದ್ರ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
ಹಾಗಂತ ಹಳೇ 50 ಹಾಗೂ 100 ರೂ. ನೋಟುಗಳ ಚಲಾವಣೆಯನ್ನ ರದ್ದು ಮಾಡುವುದಿಲ್ಲ. ಹೊಸ ನೋಟುಗಳ ಜೊತೆ ಹಳೆಯ ನೋಟುಗಳ ಚಲಾವಣೆ ಕೂಡ ಮುಂದುವರೆಯುತ್ತದೆ ಎಂದು ತಿಳಿಸಿದ್ದಾರೆ.

1000 ಈಗ ಚಲಾವಣೆಯಿಂದ ಹಿಂಪಡೆಯಲಾಗಿರುವ 1000 ರೂ. ನೋಟನ್ನು ಮುಂದಿನ 3-4 ತಿಂಗಳೊಳಗೆ ಹೊಸ ಬಣ್ಣ, ಹೊಸ ವಿನ್ಯಾಸ ಮತ್ತು ಹೊಸ ಸುರಕ್ಷತಾ ಸ್ವರೂಪಗಳೊಂದಿಗೆ ಪರಿಚಯಿಸಲಾಗುತ್ತದೆ. ಇತ್ತ, ಕೇಂದ್ರ ಸರ್ಕಾರಿ ಮತ್ತು ರಾಜ್ಯ ಸರ್ಕಾರಿ ಇಲಾಖೆಗಳಿಗೆ ಮಾಡಲಾಗುವ ಹಣ ಪಾವತಿಯನ್ನು ನಗದು ರಹಿತ ಪಾವತಿಯನ್ನಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಅಡಿಯಿಟ್ಟಿದೆ. ಮುಂದಿನ ತಿಂಗಳು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಏಕಗವಾಕ್ಷಿ ಪಾವತಿ ವ್ಯವಸ್ಥೆಯನ್ನು ಸೃಷ್ಟಿಸುವ ಸಲುವಾಗಿ ಟೆಂಡರï ಕರೆಯಲಿದೆ ಎಂದು ಮೂಲಗಳು ತಿಳಿಸಿವೆ.

500 ಹಾಗೂ 1000 ರೂ. ನೋಟು ನಿಷೇಧಿಸಿದ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ದಿಟ್ಟ ಕ್ರಮದಿಂದ ತೆರಿಗೆ ವಂಚಿಸಿ ದೇಶದೊಳಗೆ ಕೂಡಿಡಲಾಗಿರುವ 3 ಲಕ್ಷ ಕೋಟಿ ರೂಪಾಯಿಯಷ್ಟು ದುಡ್ಡು ಹಣದ ಮಾರುಕಟ್ಟೆಗೆ ಬರಲಿದೆ ಅಂತಾ ಅಂದಾಜಿಸಲಾಗಿದೆ.  ಐಸಿಐಸಿಐ ಸಂಸ್ಥೆಯ ಲೆಕ್ಕಾಚಾರದ ಪ್ರಕಾರ ನಾಲ್ಕೂವರೆ ಲಕ್ಷ ಕೋಟಿ ರೂಪಾಯಿ ಕಪ್ಪು ಹಣ ಬಯಲಾಗಲಿದೆ. ಇದರ ಜೊತೆಗೆ ಇನ್ನು ಮೂರು ಅಥವಾ ಆರು ತಿಂಗಳಲ್ಲಿ ಸಾಲದ ಮೇಲಿನ ಬ್ಯಾಂಕ್ ಬಡ್ಡಿದರಗಳಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಲಿದೆ ಎಂದು ವಿವಿಧ ಸಮೀಕ್ಷಾ ಸಂಸ್ಥೆಗಳು ಅಂದಾಜಿಸಿವೆ.
ವಿಚಿತ್ರ ಅಂದರೆ ಮಂಗಳವಾರದ ಘೋಷಣೆ ಬಳಿಕ ಗೂಗಲ್  ನಲ್ಲಿ ಕಪ್ಪು ಹಣವನ್ನು ಬಿಳಿ ಮಾಡೋದು ಹೇಗೆ ಅಂತಾ ಅತೀ ಹೆಚ್ಚು ಬಾರಿ ಸರ್ಚ್ ಮಾಡಲಾಗಿದೆಯಂತೆ.

► Follow us on –  Facebook / Twitter  / Google+

Facebook Comments

Sri Raghav

Admin