500 ಅಣುಬಾಂಬ್ ಗಳನ್ನು ತಯಾರಿಸುವಷ್ಟು ಸಾಮರ್ಥ್ಯ ಭಾರತಕ್ಕಿದೆ..!

ಈ ಸುದ್ದಿಯನ್ನು ಶೇರ್ ಮಾಡಿ

atomic-bomb

ಇಸ್ಲಾಮಾಬಾದ್, ಅ.26-ಅಣ್ವಸ್ತ್ರ ಶಕ್ತಿಶಾಲಿ ರಾಷ್ಟ್ರಗಳಾದ ಭಾರತ ಮತ್ತು ಪಾಕಿಸ್ತಾನದ ನಡುವೆ ತ್ವೇಷಮಯ ವಾತಾವರಣ ಬಿಗಡಾಯಿಸಿರುವಾಗಲೇ, ಇಸ್ಲಾಮಾಬಾದ್ ಭಾರತದ ಅಣುಬಾಂಬ್ ಸಾಮಥ್ರ್ಯವನ್ನು ಬಹಿರಂಗಗೊಳಿಸುವ ವರದಿಯೊಂದನ್ನು ನೀಡಿದೆ. ಸುಮಾರು 500 ಅಣು ಬಾಂಬ್‍ಗಳನ್ನು ತಯಾರಿಸಲು ಅಗತ್ಯವಾದ ಸಾಮಗ್ರಿಗಳು ಮತ್ತು ತಾಂತ್ರಿಕ ಸಾಮಥ್ರ್ಯವನ್ನು ಭಾರತ ಹೊಂದಿದೆ ಎಂದು ಪಾಕಿಸ್ತಾನಿ ಅಣ್ವಸ್ತ್ರ ಪರಿಣಿತರು ಸ್ಫೋಟಕ ಮಾಹಿತಿ ನೀಡಿದ್ದಾರೆ. ಇದರೊಂದಿಗೆ ಹಿಂದೂಸ್ತಾನದ ಅಣ್ವಸ್ತ್ರ ಶಕ್ತಿ-ಸಾಮಥ್ರ್ಯದ ಬಗ್ಗೆ ಪಾಕಿಸ್ತಾನಕ್ಕೆ ಪರೋಕ್ಷ ಎಚ್ಚರಿಕೆ ನೀಡಿದಂತಾಗಿದೆ.

ಭಾರತವು 356 ರಿಂದ 492 ನ್ಯೂಕ್ಲಿಯರ್ ಬಾಂಬ್‍ಗಳನ್ನು ಉತ್ಪಾದಿಸಲು ಸಾಕಷ್ಟು ಸಾಮಗ್ರಿಗಳು ಮತ್ತು ತಾಂತ್ರಿಕ ಸಾಮಥ್ರ್ಯ ಹೊಂದಿವೆ ಎಂದು ಪಾಕಿಸ್ತಾನದ ಥಿಂಕ್ ಟ್ಯಾಂಕ್ (ಚಿಂತಕರ ಚಾವಡಿ) ಸಂಶೋಧನೆಯೊಂದು ತಿಳಿಸಿದೆ.  ಪಾಕ್‍ನ ನಾಲ್ವರು ಪರಮಾಣು ಪರಿಣಿತರಾದ ಅದೀಲಾ ಅಜಂ, ಅಹಮದ್ ಖಾನ್, ಮಹಮದ್ ಅಲಿ ಮತ್ತು ಸಮೀರ್ ಖಾನ್ ಅವರು ನಡೆಸಿರುವ ಇಂಡಿಯನ್ ಅನ್‍ಸೆಫ್‍ಗಾರ್ಡೆಡ್ ನ್ಯೂಕ್ಲಿಯರ್ ಪ್ರೊಗ್ರಾಂ ಶೀರ್ಷಿಕೆಯ ಅಧ್ಯಯನದಲ್ಲಿ ಈ ವಿಷಯವನ್ನು ತಿಳಿಸಲಾಗಿದೆ. ಇದನ್ನು ಇನ್ಸ್‍ಸ್ಟಿಟ್ಯೂಟ್ ಆಫ್ ಸ್ಟ್ರಾಟಿಜಿಕ್ ಸ್ಟಡೀಸ್ ಇಸ್ಲಾಮಾಬಾದ್ (ಐಎಸ್‍ಎಸ್‍ಐ) ಪ್ರಕಟಿಸಿದೆ.

ನಿರೀಕ್ಷೆಗೂ ಮೀರಿದ ಅಣುಬಾಂಬ್‍ಗಳನ್ನು ಉತ್ಪಾದಿಸಲು ಭಾರತ ಶಕ್ತವಾಗಿದ್ದು, ಅದಕ್ಕೆ ಬೇಕಾದ ಮೂಲಸೌಕರ್ಯಗಳು, ವಸ್ತುಗಳು ಮತ್ತು ತಂತ್ರಜ್ಞಾನಗಳನ್ನು ಸಾಕಷ್ಟು ಹೊಂದಿದೆ ಎಂದು ಅಧ್ಯಯನ ಸಂಶೋಧನೆಯಲ್ಲಿ ತಿಳಿಸುವ ಮೂಲಕ ಪಾಕಿಸ್ತಾನದ ಅಣ್ವಸ್ತ್ರ ಸಾಮಥ್ರ್ಯವನ್ನು ತುಲನೆ ಮಾಡುವ ಪ್ರಯತ್ನವೂ ನಡೆದಿದೆ.  ಭಾರತೀಯ ಅಣುಬಾಂಬ್ ಸಾಮಥ್ರ್ಯ ಕುರಿತು ಈ ಹಿಂದೆ ಹಲವಾರು ಅಧ್ಯಯನಗಳನ್ನು ನಡೆಸಲಾಗಿದೆ. ಆದರೆ ಇತ್ತೀಚಿನ ಸಂಶೋಧನೆಯಿಂದ ಹೊಸ ಸಂಗತಿ ಬಯಲಾಗಿದೆ ಎಂದು ಐಎಸ್‍ಎಸ್‍ಐ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಅತಂತ್ಯ ಗೋಪ್ಯವಾಗಿಟ್ಟಿರುವ ಭಾರತದ ಅಣ್ವಸ್ತ್ರ ಕಾರ್ಯಕ್ರಮದ ವಾಸ್ತವ ಹಿನ್ನೆಲೆ, ಗಾತ್ರ, ಸಾಮರ್ಥ, ವಿಸ್ತರಣೆ ಮತ್ತು ಪ್ರಬಲತೆಗಳನ್ನು ತಿಳಿದುಕೊಳ್ಳುವ ಉದ್ದೇಶದಿಂದ ಈ ಅಧ್ಯಯನವನ್ನು ನಡೆಸಲಾಗಿದೆ.

ಈ ಅಧ್ಯಯನ ವರದಿಯ ಲೇಖಕರ ಪ್ರಕಾರ, ಭಾರತವು ಬೃಹತ್ ಹಾಗೂ ಹಳೆ-ಹೊಸ ಮಾದರಿಯ ಅಸುರಕ್ಷಿತ ಅಣ್ವಸ್ತ್ರಗಳನ್ನು ಹೊಂದಿರುವುದಕ್ಕೆ ಪುರಾವೆ ಇದೆ.  ಈ ಅಧ್ಯಯನವು ಭಾರತದ ಅಣ್ವಸ್ತ್ರ ತಯಾರಿಕೆ ಸಾಮಥ್ರ್ಯದ ಬಗ್ಗೆ ಅಳವಾದ ಅಧ್ಯಯನ ನಡೆಸಲು ಸೇನೆ, ಅಧಿಕಾರಿಗಳು, ಸಂಶೋಧಕರಿಗೆ ನೆರವಾಗಲಿದೆ ಎಂದು ಪಾಕಿಸ್ತಾನ ಅಣುಶಕ್ತಿ ಆಯೋಗದ ಮಾಜಿ ಅಧ್ಯಕ್ಷ ಅನ್ಸರ್ ಪರ್ವೇಜ್ ಹೇಳಿದ್ದಾರೆ.

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin