500-1000 ಮುಖಬೆಲೆಯ ನೋಟು ಬ್ಯಾನ್ ಸ್ವಾಗತಾರ್ಹ

ಈ ಸುದ್ದಿಯನ್ನು ಶೇರ್ ಮಾಡಿ

BAN

ಚನ್ನಪಟ್ಟಣ, ನ.11- ಕಪ್ಪುಹಣ ಮತ್ತು ಭ್ರಷ್ಟಾಚಾರ ನಿಯಂತ್ರಿಸುವ ಸಲುವಾಗಿ 500 ಮತ್ತು 1000 ರೂ.ಗಳ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿರುವ ಯೋಜನೆ ಸ್ವಾಗತಾರ್ಹ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ಯೋಗೀಶ್‍ಗೌಡ ತಿಳಿಸಿದ್ದಾರೆ. ವ್ಯವಹಾರದ ಕೇಂದ್ರಬಿಂದುವಾಗಿರುವಂತಹ ಸರ್ಕಾರಿ ಬ್ಯಾಂಕ್‍ಗಳು ಹಾಗೂ ಸರ್ಕಾರೇತರ ಬ್ಯಾಂಕ್‍ಗಳಲ್ಲಿ ವ್ಯವಹರಿಸುವಂತಹ ಜನರು ಕನ್ನಡಿಗರೇ ಆಗಿರುವುದರಿಂದ ಬ್ಯಾಂಕ್‍ನ ಚಲನ್, ಅರ್ಜಿಗಳನ್ನು ಕನ್ನಡದಲ್ಲೇ ಮುದ್ರಿಸುವಂತೆ, ಜತೆಗೆ ಅರ್ಜಿಗಳನ್ನು ಕನ್ನಡದಲ್ಲೇ ತುಂಬುವಂತೆ, ಕನ್ನಡದಲ್ಲೇ ಸಹಿಗಳನ್ನು ಮಾಡುವ ಯೋಜನೆಗಳನ್ನು ಬ್ಯಾಂಕ್‍ನ ಆಡಳಿತವರ್ಗ ಮಾಡಬೇಕಿದೆ ಎಂದರು.ಬ್ಯಾಂಕ್‍ನ ಆಡಳಿತ ವರ್ಗದವರು ಇನ್ನು ಎರಡು ದಿನಗಳಲ್ಲಿ ಅರ್ಜಿಗಳನ್ನು ಕನ್ನಡದಲ್ಲಿ ಮುದ್ರಿಸಿ ಜನರಿಗೆ ಅನುಕೂಲ ಮಾಡದಿದ್ದರೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್‍ಗೌಡರ ನೇತೃತ್ವದಲ್ಲಿ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin