ಮಹಿಳೆಯ ಹೊಟ್ಟೆಯಲ್ಲಿದ್ದ 50 ಕೆಜಿ ತೂಕದ ಗಡ್ಡೆ ಹೊರತೆಗೆದ ವೈದ್ಯರು..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಆ.23- ದೆಹಲಿಯ ಖಾಸಗಿ ಆಸ್ಪತ್ರೆಯ ವೈದ್ಯರು ಯಾವುದೇ ಅತ್ಯಾಧುನಿಕ ಉಪಕರಣಗಳಿಲ್ಲದೆ ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆ ಮೂಲಕ 52 ವರ್ಷದ ಮಹಿಳೆಯ ಹೊಟ್ಟೆಯಲ್ಲಿದ್ದ 50 ಕೆಜಿ ತೂಕದ ಗೆಡ್ಡೆಯನ್ನು ತೆಗೆದುಹಾಕಿದ್ದಾರೆ.

ಸಿರಾಟದ ತೊಂದರೆ, ಹೊಟ್ಟೆಯ ಕೆಳಭಾಗದಲ್ಲಿ ತೀವ್ರವಾದ ನೋವು ಮತ್ತು ಪರಿಣಾಮವಾಗಿ ನಡೆಯಲು ಮತ್ತು ಮಲಗಲು ತೊಂದರೆ ಅನುಭವಿಸುತ್ತಿದ್ದ ಸ್ಥಳೀಯ ಮಹಿಳೆ ಲಕ್ಷ್ಮಿ(ಹೆಸರು ಬದಲಾಯಿಸಲಾಗಿದೆ) ಎಂಬುವರು ಇಂದ್ರಪ್ರಸ್ಥ ಅಪೆÇಲೊ ಆಸ್ಪತ್ರೆಗೆ ಬಂದಿದ್ದರು.

ಮಹಿಳೆಯ ಅಂಡಾಶಯದಲ್ಲಿ ದೊಡ್ಡದಾದ ಹಂತಹಂತವಾಗಿ ವಿಸ್ತರಿಸುತ್ತಿರುವ ಗೆಡ್ಡೆ ಇರುವುದು ಕಂಡುಬಂದಿತ್ತು. ಇದು ಆಕೆ ಕರುಳಿನ ಮೇಲೆ ಒತ್ತಡ ಉಂಟು ಮಾಡುತ್ತಿದ್ದರಿಂದ ತೀವ್ರ ಹೊಟ್ಟೆ ನೋವು ಮತ್ತು ಜೀರ್ಣಕ್ರಿಯೆಗೆ ತೊಂದರೆಯಾಗಿತ್ತು.

ಅಲ್ಲದೆ ಗೆಡ್ಡಿ ದಿನೇ ದಿನೇ ಹರಡುತ್ತಿದ್ದರಿಂದ ಉಸಿರಾಟದ, ರಕ್ತದ ಹೀನತೆಯಿಂದ ಬಳಲುತ್ತಿದ್ದರು. ಆಸ್ಪತ್ರೆಗೆ ಮಹಿಳೆ ಬಂದಿದ್ದಾಗ 106 ತೂಕ ಇದ್ದರು. ಸುಮಾರು 50 ಕೆಜಿ ಗಾತ್ರದ ಗೆಡ್ಡೆಯೇ ದೇಹದ ಅರ್ಧದಷ್ಟಿತ್ತು.

ನನ್ನ 30 ವರ್ಷಗಳ ಅವಯಲ್ಲಿಯೇ ಇದು ಅತ್ಯಂತ ಅಪರೂಪದ ಪ್ರಕರಣವಾಗಿದೆ ಎಂದು ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿ ಮತ್ತು ಬಾರಿಯಾಟ್ರಿಕ್ ಸರ್ಜರಿಯ ಹಿರಿಯ ಸಲಹೆಗಾರ ಡಾ.ಅರುಣ್ ಪ್ರಸಾದ್ ಹೇಳಿದ್ದಾರೆ.

ಲ್ಯಾಪರೊಸ್ಕೋಪಿ ಅಥವಾ ರೋಬೋಟ್ ನೆರವಿನ ವಿಧಾನಗಳ ಮೂಲಕ ಉಪಕರಣಗಳನ್ನು ಹೊಟ್ಟೆಯಲ್ಲಿ ಅಳವಡಿಸಲು ಸ್ಥಳವೇ ಇರಲಿಲ್ಲ. ಆದ್ದರಿಂದ ಸಾಂಪ್ರದಾಯಿಕ ಶಸ್ತ್ರ ಚಿಕಿತ್ಸಾವಿಧಾನಗಳನ್ನು ಆಶ್ರಯಿಸಬೇಕಾಯಿತು.

50 ಸತತ ಮೂರೂವರೆ ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಗೆಡ್ಡೆಯನ್ನು ಹೊರತೆಗೆಯಲಾಗಿದೆ ಎಂದು ವಿವರಿಸಿದ್ದಾರೆ. ಅದೃಷ್ಟವಶಾತ್, ರೋಗಿಗೆ ಯಾವುದೇ ಕೊಮೊರ್ಬಿಡಿಟಿಗಳಿಲ್ಲ, ಇದು ವೇಗವಾಗಿ ಚೇತರಿಸಿಕೊಳ್ಳಲು ಅನುವು ಮಾಡಿಕೊಟ್ಟಿತು. ಶಸ್ತ್ರಚಿಕಿತ್ಸೆಯ ನಂತರದ ಆಕೆಯ ತೂಕ 56 ಕೆಜಿಗೆ ಇಳಿದಿದೆ ಎಂದು ಶಸ್ತ್ರಚಿಕಿತ್ಸಕ ಡಾ. ಅಭಿಷೇಕ್ ತಿವಾರಿ ಹೇಳಿದ್ದಾರೆ.

Facebook Comments

Sri Raghav

Admin