51ನೇ ಬರ್ತ್ ಡೇ ಸಂಭ್ರಮದಲ್ಲಿ ಬಾಲಿವುಡ್ ಬಾದ್‍ಶಾ

ಈ ಸುದ್ದಿಯನ್ನು ಶೇರ್ ಮಾಡಿ

Sharukh-khan

ಮುಂಬೈ, ನ.2-ಬಾಲಿವುಡ್ ಬಾದ್‍ಶಾ ಶಾರುಖ್ ಖಾನ್‍ಗೆ ಇಂದು ಜನ್ಮದಿನದ ಸಡಗರ-ಸಂಭ್ರಮ. ಹಿಂದಿ ಚಿತ್ರರಂಗದ ಗಣ್ಯರು ಮತ್ತು ಅಸಂಖ್ಯಾತ ಅಭಿಮಾನಿಗಳು ಎಸ್‍ಆರ್‍ಕೆಗೆ 51ನೇ ಹುಟ್ಟು ಹಬ್ಬದ ಶುಭ ಕೋರಿದ್ದಾರೆ.  ಕಿರುತೆರೆ ನಟನಾಗಿ ನಂತರ ಬಾಝಿಗರ್ ಚಿತ್ರದ ಮೂಲಕ ಹಿರಿತೆರೆ ಪ್ರವೇಶಿಸಿದರು. ಶಾರುಖ್ ಹಿಂದಿ ಚಿತ್ರರಂಗದಲ್ಲಿ ಹಂತ ಹಂತವಾಗಿ ಬೆಳೆದ ಪರಿ ಬೆರುಗು ಮೂಡಿಸುವಂಥದ್ದು. ಖಳನಾಯಕನಾಗಿ ಎಂಟ್ರಿ ಕೊಟ್ಟು ಕಿಂಗ್ ಆಫ್ ರೋಮಾನ್ಸ್ ಎಂಬ ಪಟ್ಟಕ್ಕೇರಿರುವ ಖಾನ್ ಅತ್ಯಧಿಕ ಸಂಭಾವನೆ ಪಡೆಯುವ 20 ಜಗದ್ವಿಖ್ಯಾತ ನಟರಲ್ಲಿ ಸ್ಥಾನ ಪಡೆದಿದ್ದಾರೆ. ಖಾನ್‍ತ್ರಯರಲ್ಲೇ ಅಗ್ರಗಣ್ಯ ಎಂದೇ ಪರಿಗಣಿತವಾದ ಎಸ್‍ಆರ್‍ಕೆ ಅದ್ಭುತ ನಟ.

ಶಾರುಖ್ ನಟಿಸಿರುವ ರಾಯೀಸ್, ಡಿಯರ್ ಜಿಂದಗಿ ಸಿನಿಮಾಗಳು ಸದ್ಯದಲ್ಲೇ ತೆರೆಕಾಣಲಿವೆ. ರೆಡ್ ಚಿಲ್ಲೀಸ್ ಎಂಟರ್‍ಟೈನ್‍ಮೆಂಟ್ಸ್ ಎಂಬ ಪ್ರೊಡಕ್ಷನ್ ಹೌಸ್ ಒಡೆಯರೂ ಆಗಿರುವ ಖಾನ್ ವಿವಾದರಹಿತ ನಟ ಎಂಬುದು ಇನ್ನೊಂದು ಹೆಗ್ಗಳಿಕೆ. ಕಳೆದ ವಾರವಷ್ಟೇ ತಮ್ಮ ಮತ್ತು ಗೌರಿ ದಾಂಪತ್ಯದ ರಜತ ವಿವಾಹ ಮಹೋತ್ಸವ ಆಚರಿಸಿಕೊಂಡ ಶಾರುಕ್ ಈಗ ಜನ್ಮದಿನದ ಖುಷಿಯಲ್ಲಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin