51 ಹೈಕೋರ್ಟ್ ನ್ಯಾಯಾಧೀಶರ ನೇಮಕಕ್ಕೆ ಕೊಲಿಜಿಯಂ ಶಿಫಾರಸು

ಈ ಸುದ್ದಿಯನ್ನು ಶೇರ್ ಮಾಡಿ

Supreme-Court--01

ನವದೆಹಲಿ, ಏ.16- ದೇಶದ 10 ಹೈಕೋರ್ಟ್‍ಗಳಿಗೆ 51 ನ್ಯಾಯಾಧೀಶರ ಹೆಸರುಗಳನ್ನು ಶಿಫಾರಸು ಮಾಡುವ ಮೂಲಕ ಮುಖ್ಯ ನ್ಯಾಯಾಮೂರ್ತಿ ಜೆ.ಎಸ್.ಖೇಹರ್ ನೇತೃತ್ವದ ಸುಪ್ರೀಂಕೋರ್ಟ್ ಕೊಲಿಜಿಯಂ(ನ್ಯಾಯಾಧೀಶರುಗಳ ಮಂಡಳಿ) ಹೊಸ ದಾಖಲೆ ನಿರ್ಮಿಸಲು ಸಜ್ಜಾಗಿದೆ. ಸಂವಿಧಾನಿಕ ನ್ಯಾಯಾಲಯಗಳಲ್ಲಿ ನ್ಯಾಯಮೂರ್ತಿಗಳ ನೇಮಕಕ್ಕಾಗಿ ಒಪ್ಪಂದ ವಿಧಾನವನ್ನು ಅಂತಿಮಗೊಳಿಸಿದ ಬಳಿಕ ಕೊಲಿಜಿಯಂ ಗರಿಷ್ಠ ಸಂಖ್ಯೆಯ ನ್ಯಾಯಾಧೀಶರ ನೇಮಕಾತಿಗೆ ಶಿಫಾರಸು ಮಾಡಿದೆ. ಇದು ನ್ಯಾಯಾಂಗ ಇತಿಹಾಸದಲ್ಲೇ ಒಂದು ದಾಖಲೆ ಎನಿಸಿದೆ.ದೇಶದ 24 ಹೈಕೋರ್ಟ್‍ಗಳಲ್ಲಿ ಶೇ.41ಕ್ಕಿಂತಲೂ ಹೆಚ್ಚು ನ್ಯಾಯಾಧೀಶರ ಹುದ್ದೆಗಳು ಖಾಲಿ ಇವೆ. ಈ ಹಿಂದೆ ಶಿಫಾರಸು ಮಾಡಲಾದ 1079 ಹುದ್ದೆಗಳಲ್ಲಿ ನೇಮಕವಾಗಿರುವ ನ್ಯಾಯಾಧೀಶರುಗಳ ಸಂಖ್ಯೆ ಕೇವಲ ೬೩೨. ಈ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ಖೇಹರ್ ಹಾಗೂ ನ್ಯಾಯಾಧೀಶರುಗಳಾದ ದೀಪಕ್ ಮಿಶ್ರ ಮತ್ತು ಚಮಲೇಶ್ವರ್ ಅವರನ್ನೊಳಗೊಂಡ ಕೊಲಿಜಿಯಂ ಈಗ 51 ನ್ಯಾಯಾಧೀಶರ ನೇಮಕಕ್ಕೆ ಶಿಫಾರಸು ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin