51,000ಕೋಟಿ ವೆಚ್ಚದ 1,500km ಉದ್ದದ ಗ್ಯಾಸ್ ಪೈಪ್‍ಲೈನ್ ಯೋಜನೆಗೆ ನಾಳೆ ಪ್ರಧಾನಿ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

PM-Modi

ವಾರಣಾಸಿ, ಅ.23-ಪ್ರಧಾನಿ ನರೇಂದ್ರ ಮೋದಿ ನಾಳೆ ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಗೆ ಭೈೀಟಿ ನೀಡಲಿದ್ದು, 51,000 ಕೋಟಿ ರೂ. ವೆಚ್ಚದ 1,500 ಕಿ.ಮೀ.ಉದ್ದದ ಅನಿಲ ಕೊಳವೆಮಾರ್ಗ ಸೇರಿದಂತೆ ಕೆಲವು ಮಹತ್ವಾಕಾಂಕ್ಷಿ ಯೇಜನೆಗಳಿಗೆ ಚಾಲನೆ ನೀಡಲಿದ್ದಾರೆ.  ಪ್ರಧಾನಿಯಾದ ಬಳಿಕ ವಾರಣಾಸಿಗೆ ಎಂಟನೇ ಬಾರಿ ಭೈೀಟಿ ನೀಡಲಿರುವ ಮೋದಿ, ಎರಡು ವರ್ಷಗಳ ಒಳಗೆ ವಾರಣಾಸಿಯ ನಿವಾಸಿಗಳಿಗೆ ಕೊಳವೆ ಮಾರ್ಗದ ಮೂಲಕ ಅಡುಗೆ ಅನಿಲ ಪೂರೈಸುವ ಮಹತ್ವದ ಊರ್ಜಾ ಗಂಗಾ ಯೋಜನೆಗೆ ಚಾಲನೆ ನೀಡಲಿದ್ದಾರೆ.

ಅಲಹಾಬಾದ್-ವಾರಣಾಸಿ ವಿಭಾಗಗಳ ನಡುವೆ ರೈಲು ಹಳಿಗಳ ಡಬಲಿಂಗ್ ಹಾಗೂ ಡೀಸೆಲ್ ಲೋಕೊಮೋಟಿವ್ ವಕ್ರ್ಸ್ (ಡಿಎಲ್‍ಡಬ್ಲ್ಯು) ವಿಸ್ತರಣೆಗೆ ಪ್ರಧಾನಿ ಹರಿಸು ನಿಶಾನೆ ತೋರಲಿದ್ದಾರೆ. ಅಲ್ಲದೇ ಸಂಪೂರ್ಣ ಹವಾನಿಯಂತ್ರಿತ ಶೈತಾಗಾರ ಸರಕು ಸಂರಕ್ಷಣೆ ಕೇಂದ್ರಕ್ಕೆ ಅವರು ಶಿಲಾನ್ಯಾಸ ನೆರವೇರಿಸುವರು.

► Follow us on –  Facebook / Twitter  / Google+

Facebook Comments

Sri Raghav

Admin