ಮಹಾರಾಷ್ಟ್ರದಲ್ಲಿ ಬ್ಲಾಕ್ ಫಂಗಸ್‍ಗೆ 52 ಮಂದಿ ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ಮೇ.14-ಮಹಾರಾಷ್ಟ್ರದಲ್ಲಿ ಕೊರೊನಾ ಕಾಣಿಸಿಕೊಂಡ ನಂತರ ಇಲ್ಲಿಯವರೆಗೆ 52 ಮಂದಿಯನ್ನು ಬ್ಲಾಕ್ ಫಂಗಸ್ ಬಲಿ ಪಡೆದುಕೊಂಡಿದೆ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.

ಕೊರೊನಾ ಸೋಂಕಿಗೆ ಗುರಿಯಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಮನೆಗೆ ಮರಳಿದ ನೂರಾರು ಮಂದಿಯನ್ನು ಈ ಫಂಗಸ್ ಕಾಡುತ್ತಿದ್ದು ಈಗಾಗಲೇ 52 ಜೀವಗಳು ಬಲಿಯಾಗಿದ್ದಾರೆ ಎನ್ನಲಾಗಿದೆ.ಕೊರೊನಾ ಎರಡನೆ ಅಲೆಗೆ ತರಗೆಲೆಯಾಗಿರುವ ಮಹಾರಾಷ್ಟ್ರಕ್ಕೆ ಬ್ಲಾಕ್ ಫಂಗಸ್ ಶನಿಯಾಗಿ ಪರಿಣಮಿಸಿದೆ.

ಸೋಂಕು ತಡೆಗಟ್ಟುವುದರ ಜೊತೆಗೆ ಫಂಗಸ್‍ನಿಂದ ಉಂಟಾಗುತ್ತಿರುವ ಸಾವು-ನೋವನ್ನು ತಡೆಗಟ್ಟಲು ಮಹಾರಾಷ್ಟ್ರ ಸರ್ಕಾರ ಹೆಣಗಾಡುತ್ತಿದೆ. ಎರಡನೆ ಅಲೆ ಕಾಣಿಸಿಕೊಂಡ ನಂತರ ಮಹಾರಾಷ್ಟ್ರದಲ್ಲಿ 1500ಕ್ಕೂ ಹೆಚ್ಚು ಮಂದಿಯಲ್ಲಿ ಬ್ಲಾಕ್ ಫಂಗಸ್ ಕಾಣಿಸಿಕೊಂಡಿದೆ ಎಂದು ಆರೋಗ್ಯ ಸಚಿವ ರಾಜೇಶ್ ತೋಪೆ ಇತ್ತಿಚೆಗೆ ತಿಳಿಸಿದರು.

ಇದುವರೆಗೂ ಫಂಗಸ್‍ಗೆ ಬಲಿಯಾದವರ ಸಂಖ್ಯೆಯನ್ನು ಬಹಿರಂಗಪಡಿಸದ ಮಹಾರಾಷ್ಟ್ರ ಇದೇ ಮೊದಲ ಭಾರಿಗೆ 52 ಮಂದಿಯನ್ನು ಫಂಗಸ್ ಬಲಿ ತೆಗೆದುಕೊಂಡಿದೆ ಎಂದು ಅಧಿಕೃತವಾಗಿ ಹೇಳಿಕೆ ನೀಡಿದೆ.

Facebook Comments

Sri Raghav

Admin