ಕರ್ನಾಟಕದಲ್ಲಿ ಕೊರೋನಾ ರಣಕೇಕೆ..! ಇಂದು 53 ಮಂದಿಗೆ ಪಾಸಿಟಿವ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 10- ಕೊರೊನಾ ಮಹಾಮಾರಿ ಅಕ್ಷರಶಃ ರಾಜ್ಯದಲ್ಲಿ ರುದ್ರತಾಂಡವ ಪ್ರದರ್ಶಿಸಿದ್ದು, ಇಂದು ಒಂದೇ ದಿನ 53 ಹೊಸ ಪ್ರಕರಣಗಳು ಪತ್ತೆಯಾಗಿ ಅಕ್ಷರಶಃ ಕರುನಾಡು ಬೆಚ್ಚಿ ಬೀಳಿಸಿದೆ.ರಾಜ್ಯದಲ್ಲಿ ಪತ್ತೆಯಾದ ಅತಿ ಹೆಚ್ಚು ಪ್ರಕರಣಗಳು ಇದಾಗಿದ್ದು, ಒಟ್ಟು ಈವರೆಗೂ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ 847ಕ್ಕೆ ಏರಿಕೆಯಾಗಿದೆ. ಕೊರೊನಾ ಸೋಂಕಿನಿಂದ ಒಬ್ಬರು ಮೃತಪಟ್ಟಿದ್ದಾರೆ.

ಆತಂಕಕಾರಿ ವಿಷಯವೆಂದರೆ ಈವರೆಗೂ ಹಸಿರು ವಲಯದಲ್ಲಿದ್ದ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಒಂದೇ ದಿನ 8 ಪ್ರಕರಣಗಳು ಪತ್ತೆಯಾಗಿವೆ.
ಗಡಿ ಜಿಲ್ಲೆ ಕುಂದಾನಗರಿ ಬೆಳಗಾವಿ ಸಹ ಅಕ್ಷರಶಃ ನಡುಗುವಂತಾಗಿದ್ದು, 22 ಸೋಂಕು ಪ್ರಕರಣಗಳು ದೃಢಪಟ್ಟಿವೆ. ರಾಜ್ಯದಲ್ಲಿ ಹಸಿರು ವಲಯದಲ್ಲಿದ್ದ ಜಿಲ್ಲೆಗಳಿಗೂ ಸೋಂಕು ಹಬ್ಬುತ್ತಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿಯಂತೆ ಬೆಳಗಾವಿ 22, ಶಿವಮೊಗ್ಗ 8, ಬಾಗಲಕೋಟೆ 8, ಉತ್ತರ ಕನ್ನಡ 7, ಬೆಂಗಳೂರು ನಗರ 3, ಕಲಬುರಗಿ 3, ದಾವಣಗೆರೆ 1 ಹಾಗೂ ಚಿಕ್ಕಬಳ್ಳಾಪುರದಲ್ಲಿ 1 ಪ್ರಕರಣಗಳು ದೃಢಪಟ್ಟಿವೆ.ಇಂದು ಪತ್ತೆಯಾಗಿರುವ ಬಹುತೇಕ ಪ್ರಕರಣಗಳಲ್ಲಿ ತಬ್ಲಿಘೀಗಳ ಜತೆ ಸಂಪರ್ಕ ಹೊಂದಿರುವುದು ಕಂಡುಬಂದಿದೆ.

ತತ್ತರಿಸಿದ ಮಲೆನಾಡು: ರಾಜ್ಯದಲ್ಲಿ ಕೊರೊನಾ ವೈರಸ್ ಅಧಿಕೃತವಾಗಿ ಕಾಲಿಟ್ಟ ನಂತರ ಈವರೆಗೂ ಒಂದೇ ಒಂದು ಸೋಂಕು ಪತ್ತೆಯಾಗದೆ ಹಸಿರು ವಲಯದಲ್ಲಿದ್ದ ಶಿವಮೊಗ್ಗದಲ್ಲಿ ಒಂದೇ ಬಾರಿಗೆ 8 ಪ್ರಕರಣಗಳು ಕಂಡುಬಂದಿರುವುದು ಜಿಲ್ಲೆಯ ಜನತೆಯನ್ನು ಬೆಚ್ಚಿ ಬೀಳಿಸಿದೆ.

ಶಿವಮೊಗ್ಗದ ಶಿಕಾರಿಪುರದಲ್ಲಿ 7 ಹಾಗೂ ತೀರ್ಥಹಳ್ಳಿಯಲ್ಲಿ 1 ಪ್ರಕರಣ ಪತ್ತೆಯಾಗಿದೆ. ವಿಶೇಷವೆಂದರೆ ಇವರೆಲ್ಲರೂ ಗುಜರಾತ್‍ನ ಅಹಮದಾಬಾದ್‍ಗೆ ತೆರಳಿದ್ದರು.ಶಿಕಾರಿಪುರದಲ್ಲಿ 18, 20, 25, 27, 33, 65, 46 ವರ್ಷದ ಪುರುಷರು ಹಾಗೂ 50 ವರ್ಷದ ಮಹಿಳೆಯಲ್ಲಿ ಸೋಂಕು ಆವರಿಸಿಕೊಂಡಿದೆ. ಇವರೆಲ್ಲರನ್ನೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ.

ಏಕಕಾಲಕ್ಕೆ 8 ಪ್ರಕರಣಗಳು ಪತ್ತೆಯಾಗಿರುವುದರಿಂದ ಜಿಲ್ಲೆಯ ಜನತೆ ಆತಂಕಕ್ಕೆ ಒಳಗಾಗಿದ್ದಾರೆ.ಕೊರೊನಾದಿಂದ ತತ್ತರಿಸಿದ್ದ ಕುಂದಾನಗರಿ ಬೆಳಗಾವಿಯಲ್ಲಿ ಇಂದು 22 ಪ್ರಕರಣಗಳು ಪತ್ತೆಯಾಗಿರುವುದು ಕೊರೊನಾ ಆರ್ಭಟಕ್ಕೆ ಸಾರ್ವಜನಿಕರು ತಲ್ಲಣಗೊಂಡಿದ್ದಾರೆ.

ಬೆಳಗಾವಿ ಜಿಲ್ಲೆಯ 38, 10, 63, 20, 29, 22 ಪುರುಷರು ಹಾಗೂ 12, 14, 3, 6 ಮಕ್ಕಳಿಗೆ ಸೋಂಕು ಕಾಣಿಸಿಕೊಂಡಿದೆ. ಇದೇ ರೀತಿ 50, 17, 60, 14, 40, 56, 60, 25, 46, 50, 27 ವರ್ಷದ ಮಹಿಳೆಯರು ಹಾಗೂ 3, 8 ವರ್ಷದ ಮಕ್ಕಳಿಗೂ ಸೋಂಕು ಆವರಿಸಿದೆ. ಇವರೆಲ್ಲರೂ ರಾಜಸ್ತಾನದ ಅಜ್ಮೀರ್‍ಗೆ ತೆರಳಿದ್ದರಿಂದ ಸೋಂಕು ತಗುಲಿದೆ ಎಂಬ ಅನುಮಾನ ವ್ಯಕ್ತವಾಗಿದೆ.

ಬಾಗಲಕೋಟೆಯಲ್ಲಿ ಇಂದು 8 ಕೊರೊನಾ ಸೋಂಕು ಪ್ರಕರಣಗಳು ಕಂಡುಬಂದಿವೆ. 29, 30, 75 ಮಹಿಳೆಯರು ಹಾಗೂ 2, 8, 12 ವರ್ಷದ ಮಕ್ಕಳಿಗೆ ಕೊರೊನಾ ಕಾಣಿಸಿಕೊಂಡಿದೆ. ಉಳಿದಂತೆ 22, 33 ವರ್ಷದ ಪುರುಷರಿಗೆ ಸೋಂಕು ಆವರಿಸಿದೆ. ನಿನ್ನೆ 7 ಪ್ರಕರಣ ಕಂಡಿದ್ದ ಉತ್ತರ ಕನ್ನಡ ಜಿಲ್ಲೆ ಭಟ್ಕಳದಲ್ಲಿ ಇಂದು ಕೂಡ ಮತ್ತೆ 7 ಪ್ರಕರಣಗಳು ಹೊಸದಾಗಿ ಪತ್ತೆಯಾಗಿವೆ.

ವಿಶೇಷವೆಂದರೆ ಈ 7 ಮಂದಿಗೆ ಒಬ್ಬ ವ್ಯಕ್ತಿಯಿಂದಲೇ ಸೋಂಕು ಹಬ್ಬಿದೆ. ರೋಗಿ ಸಂಖ್ಯೆ 659 ರಿಂದ 50, 21 ವರ್ಷದ ಮಹಿಳೆಯರಿಗೂ ಕೊರೊನಾ ಕಾಣಿಸಿಕೊಂಡಿದೆ. 15, 16, 31, 60, 42 ವರ್ಷದ ಪುರುಷರಿಗೆ ಸೋಂಕು ದೃಢಪಟ್ಟಿದೆ.ಗುಲ್ಬರ್ಗದಲ್ಲಿ 3 ಪ್ರಕರಣಗಳು ಪತ್ತೆಯಾಗಿದ್ದು, ರೋಗಿ ಸಂಖ್ಯೆ 604ರ ಸಂಪರ್ಕದಿಂದಾಗಿ 72 ವರ್ಷದ ಹಿರಿಯರಲ್ಲೂ ಸಹ ಸೋಂಕು ಕಾಣಿಸಿಕೊಂಡಿದೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅಫ್ಜಲ್‍ಪುರದ 35 ವರ್ಷದ ಪುರುಷರಿಗೆ ಸೋಂಕು ಹಬ್ಬಿದೆ.

ಬೆಂಗಳೂರಿನಲ್ಲಿ ಬಿಬಿಎಂಪಿ ಕಂಟೋನ್ಮೆಂಟ್ ಝೋನ್‍ನ ವಾರ್ಡ್ ನಂ.135ರಲ್ಲಿ 29 ವರ್ಷದ ಪುರುಷ ಮತ್ತು 60 ವರ್ಷದ ಹಿರಿಯರಿಗೂ ಆವರಿಸಿದೆ.
ಉಸಿರಾಟದ ತೊಂದರೆಯಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 56 ವರ್ಷದ ಮಹಿಳೆ ಇಂದು ಕೊನೆಯುಸಿರೆಳೆದಿದ್ದಾರೆ.

ರಾಜಸ್ತಾನದ ಅಜ್ಮೀರ್‍ಗೆ ತೆರಳಿದ್ದ ದಾವಣಗೆರೆಯ 22 ವರ್ಷದ ಯುವಕನಿಗೆ ಸೋಂಕು ಹಬ್ಬಿದೆ.  ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ಓರ್ವ ವ್ಯಕ್ತಿಗೆ ಈ ಸೋಂಕು ಕಾಣಿಸಿಕೊಂಡಿದೆ. ರಾಜ್ಯದಲ್ಲಿ ಈವರೆಗೂ 31 ಜನ ಕೊರೊನಾದಿಂದ ಮೃತಪಟ್ಟು 405 ಜನ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

Facebook Comments

Sri Raghav

Admin