ಸೇನಾ ಶಿಬಿರದ ಮೇಲೆ ಉಗ್ರರ ದಾಳಿ, 53 ಯೋಧರ ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ಬಮಾಕೊ, ನ.2-ಮಾಲಿ ಗಣರಾಜ್ಯದಲ್ಲಿ ಭಯೋತ್ಪಾದಕರ ಅಟ್ಟಹಾಸ ತೀವ್ರಗೊಂಡಿದೆ. ದೇಶದ ಈಶಾನ್ಯ ಭಾಗದ ಸೇನಾ ನೆಲೆ ಮೇಲೆ ಉಗ್ರಗಾಮಿಗಳು ನಡೆಸಿದ ದಾಳಿಯಲ್ಲಿ ಕನಿಷ್ಟ 53 ಯೋಧರು ಹತರಾಗಿದ್ದು, ಅನೇಕರು ತೀವ್ರ ಗಾಯಗೊಂಡಿದ್ದಾರೆ.  ಮುಸ್ಲಿಂ ಉಗ್ರಗಾಮಿಗಳಿಂದ ಮಾಲಿ ಮಿಲಿಟರಿ ವಿರುದ್ಧ ಇತ್ತೀಚಿನ ದಿನಗಳಲ್ಲಿ ನಡೆದ ಅತ್ಯಂತ ಭೀಕರ ದಾಳಿ ಮತ್ತು ಹಿಂಸಾಚಾರ ಇದಾಗಿದೆ.

ನೈಗರ್ ದೇಶದ ಗಡಿ ಬಳಿ ಇರುವ ಮನೆಕಾ ಪ್ರಾಂತ್ಯದ ಇಂಡೆಲಿಮನ್‍ನ ಮಿಲಿಟರಿ ಪೋಸ್ಟನಲ್ಲಿ ನಡೆದ ಉಗ್ರರ ಭಾರೀ ವಿಧ್ವಂಸಕ ದಾಳಿಯಲ್ಲಿ ಕೆಲ ನಾಗರಿಕರೂ ಸಹ ಹತರಾಗಿದ್ದಾರೆ ಎಂದು ಸಂಪರ್ಕ ಖಾತೆ ಸಚಿವ ಯವಾ ಸಂಗರೆ ತಿಳಿಸಿದ್ದಾರೆ.

ಗಾಯಗೊಂಡ ಹತ್ತಕ್ಕೂ ಹೆಚ್ಚು ಯೋಧರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಕೆಲವರ ಸ್ಥಿತಿ ಶೋಚನೀಯವಾಗಿದೆ ಎಂದು ಅವರು ಹೇಳಿದ್ದಾರೆ.  ಭೀಕರ ಹತ್ಯಾಕಾಂಡ ನಡೆಸಿ ಪರಾರಿಯಾಗಿರುವ ಉಗ್ರರಿಗಾಗಿ ತೀವ್ರ ಶೋಧ ಮುಂದುವರಿದಿದೆ.

Facebook Comments