54 ಡಿಗ್ರಿ ಸೆಲ್ಷಿಯಸ್ ಉಷ್ಣತೆಯೊಂದಿಗೆ ಜಾಗತಿಕ ದಾಖಲೆ ಸರಿಗಟ್ಟಿದ ಇರಾನ್ನ ಆಹ್ವಾಜ್
ಅಹ್ವಾಜ್, ಜು.1-ಇರಾನ್ನ ಆಹ್ವಾಜ್ ನಗರವು 54 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶದಿಂದ ಬೆಂದು ಬಸವಳಿಯುತ್ತಿದ್ದು. ಗರಿಷ್ಠ ತಾಪಮಾನದ ಜಾಗತಿಕ ದಾಖಲೆಯನ್ನು ಸರಿಗಟ್ಟಿದೆ. ಆಹ್ವಾಜ್ ಪಟ್ಟಣದಲ್ಲಿ ಗುರುವಾರ 54 ಡಿಗ್ರಿ ಸೆಲ್ಷಿಯಸ್ ಉಷ್ಣತೆ ದಾಖಲಾಗಿದೆ. ಇದು ಈವರೆಗೆ ಭೂಮಿಯ ಮೇಲೆ ದಾಖಲಾದ ಗರಿಷ್ಠ ಉಷ್ಣಾಂಶವನ್ನು ಸರಿಗಟ್ಟಿದೆ ಎಂದು ವಾಷಿಂಗ್ಟನ್ ಪೋಸ್ಟ್ನ ವರದಿಯೊಂದು ಹೇಳಿದೆ. ಅಮೆರಿಕದ ಕ್ಯಾಲಿ ಫೋರ್ನಿಯಾದ ಡೆತ್ ವ್ಯಾಲಿಯಲ್ಲಿ(ಮೃತ್ಯು ಕಣಿವೆ) 30ನೇ ಜೂನ್ 2013 ಹಾಗೂ ಕುವೈತ್ನ ಮಿಟ್ರಿಬಾಹ್ನಲ್ಲಿ 21ನೇ ಜುಲೈ 2016ರಲ್ಲಿ ಇಷ್ಟೇ ಪ್ರಮಾಣದ ತಾಪಮಾನ ದಾಖಲಾಗಿತ್ತು.
ಡೆತ್ ವ್ಯಾಲಿಯಲ್ಲಿ ಜುಲೈ 13, 1913ರಲ್ಲಿ ದಾಖಲಾದ 57 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶವು ಭೂಮಂಡಲದ ಅತ್ಯಂತ ಗರಿಷ್ಠ ಉಷ್ಣತೆ ಎಂದು ಅಧಿಕೃತವಾಗಿ ಪರಿಗಣಿಸಲಾಗಿದೆ. ಅಮೆರಿಕದ ಹವಾಮಾನ ಮುನ್ನೆಚ್ಚರಿಕೆ ಸಂಸ್ಥೆ ವೆದರ್ ಅಂಡರ್ಗ್ರೌಂಡ್ನ ಅಂಕಿಅಂಶಗಳು ಇರಾನ್ನ ಅಹ್ವಾಜ್ನ 54 ಡಿಗ್ರಿ ಸೆಲ್ಷಿಯನ್ ಉಷ್ಣಾಂಶವನ್ನು ದೃಢಪಡಿಸಿದೆ. ಭಾರತದಲ್ಲಿ ದಾಖಲಾದ ಗರಿಷ್ಠ ಉಷ್ಣತೆ 51 ಡಿಗ್ರಿ ಸೆಲ್ಷಿಯಸ್ ಎಂದು ಅಂಕಿ ಅಂಶಗಳು ತಿಳಿಸಿವೆ. 19ನೇ ಮೇ, 2016ರಲ್ಲಿ ಮರುಭೂಮಿ ರಾಜ್ಯ ರಾಜಸ್ತಾನದ ಫಲೋಡಿಯಲ್ಲಿ ಇಷ್ಟು ತಾಪಮಾನ ದಾಖಲಾಗಿತ್ತು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS