5,400 ಕೋಟಿ ರೂ. ಗೌಪ್ಯ ಆದಾಯ ಪತ್ತೆ : ಅರುಣ್ ಜೇಟ್ಲಿ

ಈ ಸುದ್ದಿಯನ್ನು ಶೇರ್ ಮಾಡಿ

Arun

ನವದೆಹಲಿ, ಏ.12-ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿದ ತಕ್ಷಣ ಆದಾಯ ತೆರಿಗೆ ಅಧಿಕಾರಿಗಳು 1,100ಕ್ಕೂ ಹೆಚ್ಚು ಸ್ಥಳಗಳ ಮೇಲೆ ಶೋಧ ಕಾರ್ಯಾಚರಣೆ ನಡೆಸಿ 5,400 ಕೋಟಿ ರೂ. ಗೌಪ್ಯ ವರಮಾನ ಪತ್ತೆ ಮಾಡಿದ್ದಾರೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.
ಈ ಸಂಬಂಧ ಮುಂದುವರಿದ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ನೋಟು ರದ್ದತಿ ಅವಧಿಯಲ್ಲಿ ಠೇವಣಿ ಇರಿಸಲಾದ 18 ಲಕ್ಷಕ್ಕೂ ಹೆಚ್ಚು ಜನರನ್ನು ತೆರಿಗೆ ವಿವರಗಳನ್ನು ಪರಿಶೀಲಿಸಲಾಗಿದೆ. ಇವುಗಳಲ್ಲಿ ಅನೇಕರು ನಿಯಮಗಳನ್ನು ಪಾಲಿಸದಿರುವುದು ಪತ್ತೆಯಾಗಿದೆ ಎಂದು ಜೇಟ್ಲಿ ರಾಜ್ಯ ಸಭೆಯಲ್ಲಿ ತಿಳಿಸಿದರು.

ಯಾವುದೇ ಸರ್ಕಾರ ಕಾಳಧನದ ವಿರುದ್ಧ ಕೈಗೊಳ್ಳದಂಥ ಕಠಿಣ ಕ್ರಮಗಳನ್ನು ನಾವು ಕೈಗೊಂಡಿದ್ದೇವೆ ಎಂದು ಸಮರ್ಥಿಸಿಕೊಂಡ ವಿತ್ತ ಸಚಿವರು, ಕಪ್ಪು ಹಣ ಮತ್ತು ಭ್ರಷ್ಟಾಚಾರ ನಿಗ್ರಹ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin