ಭಾರತದಲ್ಲಿ ಕೊರೊನಾ ಬಿಗ್‍ಜಂಪ್, ಒಂದೇ ದಿನ 5,611 ಪಾಸಿಟಿವ್ ಕೇಸ್, 140 ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ಮೇ 20- ಭಾರತದಲ್ಲಿ ವಿನಾಶಕಾರಿ ಕೊರೊನಾ ಆಕ್ರಮಣದ ತೀವ್ರತೆಯಲ್ಲಿ ಮಹಾಸೋಟ ಕಂಡು ಬಂದಿದೆ. ಹೆಮ್ಮಾರಿ ನಿಗ್ರಹಕ್ಕಾಗಿ ಕೆಲವು ನಿರ್ಬಂಧಗಳ ಸಡಿಲಿಕೆಯೊಂದಿಗೆ ನಾಲ್ಕನೇ ಹಂತದ ಲಾಕ್‍ಡೌನ್ ಜಾರಿಯಲ್ಲಿದ್ದು, ಇದರ ಬೆನ್ನಲ್ಲೇ ಆತಂಕ ಕಾರಿ ವಾತಾವರಣವೂ ನಿರ್ಮಾಣವಾಗಿದೆ.

ನಿನ್ನೆ ಒಂದೇ ದಿನ ದೇಶದಲ್ಲಿ 5,611 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇದು ಹೊಸ ದಾಖಲೆಯಾಗಿದ್ದು, ಮತ್ತಷ್ಟು ಭಯಭೀತಿಗೆ ಕಾರಣವಾಗಿದೆ. ಕಿಲ್ಲರ್ ವೈರಸ್ ಆರ್ಭಟ ಲಾಕ್‍ಡೌನ್ ಸಡಿಲಿಕೆ ನಂತರದಿನೇ ದಿನೇ ವ್ಯಾಪಕವಾಗುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ. ಭಾರತದಲ್ಲಿ ಸಾವಿನ ಸಂಖ್ಯೆ 3,300ದಾಟಿದ್ದು. ಸೋಂಕು ಪೀಡಿತರ ಸಂಖ್ಯೆ 1,06,750ಕ್ಕೇರಿದೆ.

ದೇಶಾದ್ಯಂತ ಕಳೆದ 24 ತಾಸುಗಳಲ್ಲಿ 140 ಸಾವುಗಳು ಮತ್ತುದಾಖಲೆ ಪ್ರಮಾಣದ 5,611 ಪ್ರಕರಣಗಳು ದೃಢಪಟ್ಟಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಇದು ಸರಾಸರಿ 5,000 ಪಾಸಿಟಿವ್ ಕೇಸ್ ದಾಖಲಾದ ಸತತ ನಾಲ್ಕನೇ ದಿನ.

ಮೇ 1ರಿಂದಲೂ ಅತಿ ಹೆಚ್ಚು ಸೋಂಕು ಪ್ರಕರಣಗಳು ದೇಶದ ವಿವಿಧ ರಾಜ್ಯಗಳಲ್ಲಿ ವರದಿಯಾಗುತ್ತಲೇ ಇವೆ. .ಕಳೆದ 15 ದಿನಗಳಲ್ಲಿ ಸೋಂಕಿತರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿರುವುದೂ ಕೂಡ ಆತಂಕದ ಸಂಗತಿ.

ನಿನ್ನೆ ಬೆಳಗ್ಗೆ 8 ಗಂಟೆಯಿಂದ24 ಗಂಟೆಗಳ ಅವಯಲ್ಲಿದೇಶದ ವಿವಿಧ ರಾಜ್ಯಗಳಲ್ಲಿ 140 ಮಂದಿಯನ್ನು ಕಿಲ್ಲರ್ ಕೊರೊನಾ ಬಲಿ ತೆಗೆದುಕೊಂಡಿದೆ. ಮಹಾರಾಷ್ಟ್ರದಲ್ಲಿ76,ಗುಜರಾತ್‍ನಲ್ಲಿ 25,ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶತಲಾ 6, ರಾಜಸ್ತಾನ ಮತ್ತುಉತ್ತರ ಪ್ರದೇಶತಲಾ 5, 14, ದೆಹಲಿ 8, ರಾಜಸ್ತಾನ 7, ಪಶ್ಚಿಮ ಬಂಗಾಳ 6, ಮಧ್ಯಪ್ರದೇಶ4, ತಮಿಳುನಾಡು, ಕರ್ನಾಟಕ ಮತ್ತು ತೆಲಂಗಾಣತಲಾ3, ಆಂಧ್ರಪ್ರದೇಶ, ಅಸ್ಸಾಂ ಮತ್ತು ಜಮ್ಮು-ಕಾಶ್ಮೀರ ತಲಾ 2 ಹಾಗೂ ಒಡಿಶಾ ಮತ್ತು ಪಂಜಾಬ್ ತಲಾ ಒಂದು ಸಾವು ಪ್ರಕರಣ ವರದಿಯಾಗಿದೆ.

ನಿನ್ನೆ ಮಧ್ಯರಾತ್ರಿವರೆಗೆ ಲಭಿಸಿದ ಮಾಹಿತಿ ಪ್ರಕಾರ ದೇಶದಲ್ಲಿ ಡೆಡ್ಲಿ ಕೋವಿಡ್-19 ವೈರಸ್‍ಗೆ ಬಲಿಯಾದವರ ಸಂಖ್ಯೆ 3,303ಕ್ಕೇರಿದ್ದು, ಸಾಂಕ್ರಾಮಿಕ ರೋಗಿಗಳ ಸಂಖ್ಯೆ 1,06,750 ತಲುಪಿದೆ. ಇಂದುಮಧ್ಯರಾತ್ರಿಯೊಳಗೆ ಸೋಂಕಿತರ ಪ್ರಮಾಣ1.10 ಲಕ್ಷದಾಟುವ ಆತಂಕವೂ ಇದೆ.

ಲಾಕ್‍ಡೌನ್ ಸಡಿಲ ನಂತರದೇಶದ ವಿವಿಧ ರಾಜ್ಯಗಳಲ್ಲಿ ಕೊರೊನಾ ಮಹಾಸೋಟವಾಗಿದ್ದು, ಸಾವು-ಸೋಂಕು ವ್ಯಾಪಕವಾಗಿ ಉಲ್ಬಣಗೊಂಡಿದೆ. ಜೊತೆ ಸಮುದಾಯ ಸೋಂಕಿನ ಸಾಧ್ಯತೆಯ ಭಯವೂಕಾಡುತ್ತಿದೆ.ಒಂದೆಡೆಚೇತರಿಕೆ ಪ್ರಮಾಣದಲ್ಲಿ ಶೇ.39.62ರಷ್ಟು ಸುಧಾರಣೆ ಕಂಡು ಬಂದಿದ್ದರೂ, ಮತ್ತೊಂದೆಡೆ ದಿನನಿತ್ಯಮರಣ ಮತ್ತು ಸಾಂಕ್ರಾಮಿಕ ರೋಗ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ.

ಭಾರತದಲ್ಲಿ ಪ್ರತಿಒಂದು ಲಕ್ಷಜನಸಂಖ್ಯೆಯಲ್ಲಿ ಶೇ.7.1ರಷ್ಟು ಕೊರೊನಾ ಪ್ರಕರಣ ವರದಿಯಾಗುತ್ತಿದೆ. ವಿಶ್ವದಲ್ಲಿ ಇದರ ಪ್ರಮಾಣ ಶೇ.60ರಷ್ಟಿದೆ. ಸೋಂಕು ಮತ್ತು ಸಾವು ಪ್ರಕರಣಗಳಲ್ಲಿ ಬಾರತ ವಿಶ್ವದಲ್ಲಿ 11ನೇ ಸ್ಥಾನದಲ್ಲಿರುವುದು ಚಿಂತೆಗೀಡು ಮಾಡುವ ಸಂಗತಿ.

ಈವರೆಗೆ ಸಂಭವಿಸಿರುವ 3,303 ಸಾವು ಪ್ರಕರಣಗಳಲ್ಲಿ, ಮಹಾರಾಷ್ಟ್ರ ಎಂದಿನಂತೆ ಪ್ರಥಮ ಸ್ಥಾನದಲ್ಲಿಯೇ ಮುಂದುವರಿದಿದೆ. ಆ ರಾಜ್ಯದಲ್ಲಿಒಟ್ಟು1,325 ಸಾವುಗಳು ಸಂಭವಿಸಿವೆ. ಮೇ ತಿಂಗಳಿನಲ್ಲಿ ದೇಶದಲ್ಲಿ ಸಂಭವಿಸಿದ ಒಟ್ಟು ಸಾವುಗಳಲ್ಲಿ ಮಹಾರಾಷ್ಟ್ರದಲ್ಲೇ ಶೇ.57ರಷ್ಟು ಮರಣ ಪ್ರಮಾಣ ವರದಿಯಾಗಿದೆ. ಮಹಾರಾಷ್ಟ್ರದಲ್ಲಿ ಸುಮಾರು 37,137 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.

ಎರಡನೇ ಸ್ಥಾನದಲ್ಲಿರುವ ಗುಜರಾತ್‍ನಲ್ಲಿ 719 ಸಾವುಗಳು ಸಂಭವಿಸಿವೆ. ನಂತರದ ಸ್ಥಾನಗಳಲಿ ಮಧ್ಯಪ್ರದೇಶ (258), ಪಶ್ಚಿಮ ಬಂಗಾಳ (250), ದೆಹಲಿ (168). ರಾಜಸ್ತಾನ (143),ಉತ್ತರ ಪ್ರದೇಶ (123),ತಮಿಳುನಾಡು (84),ಆಂಧ್ರಪ್ರದೇಶ (52),ಕರ್ನಾಟಕ (40),ಪಂಜಾಬ್ ಮತ್ತು ತೆಲಂಗಾಣ(38) ರಾಜ್ಯಗಳಿವೆ.

ಜಮ್ಮು-ಕಾಶ್ಮೀರ17, ಹರಿಯಾಣ 14,ಬಿಹಾರಒಂಭತ್ತು,ಒಡಿಶಾಐದು, ಕೇರಳ ಮತ್ತು ಅಸ್ಸಾಂ ತಲಾ ನಾಲ್ಕು, ಜಾರ್ಖಂಡ್, ಚಂಡಿಗಢ, ಮತ್ತು ಹಿಮಾಚಲ ಪ್ರದೇಶತಲಾ ಮೂರು,ಹಾಗೂ ಪುದುಚೇರಿ, ಮೇಘಾಲಯ ಮತ್ತುಉತ್ತರಾಖಂಡ ರಾಜ್ಯಗಳಲ್ಲಿ ತಲಾಒಂದೊಂದು ಸಾವುಗಳು ವರದಿಯಾಗಿವೆ.

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ ಸಹ ಹೆಚ್ಚಾಗುತ್ತಿದ್ದು,61,149ರಷ್ಟಿದೆ. ಈ ಮಧ್ಯೆ, ಈವರೆಗೆ42,279(ಚೇತರಿಕೆ ಪ್ರಮಾಣ ಶೇ.39.62) ಮಂದಿ ಗುಣಮುಖರಾಗಿದ್ದಾರೆ.

ದೇಶದಲ್ಲಿ ವೈರಾಣು ಸೋಂಕಿನಿಂದಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿ ವೃದ್ದಿ ಕಂಡು ಬಂದಿರುವುದು ಸಮಾಧಾನಕರ ಸಂಗತಿಯಾದರೂ, ಮತ್ತೊಂದಡೆ ಸೋಂಕು ಮತ್ತು ಸಾವು ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ.

ಇಂದುಬೆಳಗ್ಗೆಯೂ ಕೆಲವು ರಾಜ್ಯಗಳಲ್ಲಿ ಸಾವು ಪ್ರಕರಣಗಳು ವರದಿಯಾಗಿದೆ. ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ರಾಜಸ್ತಾನ, ಪಶ್ಚಿಮ ಬಂಗಾಳ, ದೆಹಲಿ, ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಪಂಜಾಬ್,ಒಡಿಶಾಮತ್ತಿತರ ರಾಜ್ಯಗಳಲ್ಲಿ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ಈಗಾಗಲೇಜಾರಿಗೆ ಬಂದಿರುವ ಲಾಕ್‍ಡೌನ್-4 ಈ ತಿಂಗಳಾಂತ್ಯದವರೆಗೂ ವಿಸ್ತರಣೆಯಾಗಿದೆ. ಕೆಲವು ನಿರ್ಬಂಧಗಳನ್ನು ಸಡಿಲಗೊಳಿಸಿ ಆರ್ಥಿಕ ಪುನ:ಶ್ಚೇತನ ಮತ್ತು ಸಾರ್ವಜನರಿಗೆ ಅನುಕೂಲ ಕಲ್ಪಿಸಿದ್ದರೂ, ಕೊರೊನಾ ದಾಳಿ ಮತ್ತಷ್ಟು ತೀವ್ರವಾಗುವ ಆತಂಕವೂ ಎದುರಾಗಿದೆ. ಮುಂದೇನು ಎಂಬುದು ಈಗ ಸಾರ್ವತ್ರಿಕ ಪ್ರಶ್ನೆಯಾಗಿದೆ.

Facebook Comments

Sri Raghav

Admin