ಭಾರತಕ್ಕೆ ಅಗತ್ಯ ನೆರವು ನೀಡಲು ಅಮೆರಿಕಾ ಶಾಸಕರ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್,ಮೇ.13-ಕೊರೊನಾದಿಂದ ಕಂಗಲಾಗಿರುವ ಭಾರತಕ್ಕೆ ಅಮೆರಿಕಾ ಅಗತ್ಯ ಸಹಕಾರ ನೀಡಬೇಕು ಎಂದು 57 ಅಮೆರಿಕಾ ಕಾಂಗ್ರೆಸಿಗರು ಅಧ್ಯಕ್ಷ ಜೋ ಬೈಡೆನ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಕೊರೊನಾ ಸೋಂಕು ಭಾರತದ ಮೂಲೆ ಮೂಲೆಗಳಿಗೂ ಹರಡುತ್ತಿರುವುದರ ಜತೆಗೆ ಆಪಾರ ಸಾವು-ನೋವಿಗೆ ಕಾರಣವಾಗುತ್ತಿದೆ ಇಂತಹ ಸಂದರ್ಭದಲ್ಲಿ ನಾವು ನಮ್ಮ ಕೈಲಾದ ಸಹಾಯ ನೀಡುವುದು ಅವಶ್ಯಕ ಎಂದು ಅವರುಗಳು ಮನವಿ ಮಾಡಿಕೊಂಡಿದ್ದಾರೆ.

ಪ್ರತಿನಿತ್ಯ ಸಾವಿರಾರು ಮಂದಿ ಸೋಂಕಿಗೆ ಬಲಿಯಾಗುತ್ತಿರುವುದರಿಂದ ಭಾರತ ಕೊರೊನಾ ಕೇಂದ್ರಬಿಂದುವಾಗಿ ಪರಿವರ್ತನೆಯಾಗುತ್ತಿದೆ. ಹೀಗಾಗಿ ಆ ದೇಶದ ಕಷ್ಟಕ್ಕೆ ಸ್ಪಂದಿಸಲು ಇದು ಸೂಕ್ತ ಸಮಯ ಎಂದು ಕಾಂಗ್ರೆಸಿಗ ಬ್ರಾಡ್ ಶೆರ್ಮನ್ ಅಭಿಪ್ರಾಯಪಟ್ಟಿದ್ದಾರೆ.

ಭಾರತದಲ್ಲಿ ಕೊರೊನಾ ಮತ್ತಷ್ಟು ದಿನಗಳ ಕಾಲ ತನ್ನ ಅಟ್ಟಹಾಸ ಮೆರೆದರೆ ಅದು ಮತ್ತೊಂದು ರೂಪಾಂತರಕ್ಕೂ ಕಾರಣವಾಗಬಹುದು ಅದರಿಂದ ಅಮೆರಿಕಾಕ್ಕೂ ತೊಂದರೆ ಎದುರಾಗುವ ಸಾಧ್ಯತೆ ಇದೆ ಎಂದು ಅವರುಗಳು ಎಚ್ಚರಿಸಿದ್ದಾರೆ.

ಭಾರತಕ್ಕೆ ಅಗತ್ಯವಿರುವ ಆಕ್ಸಿಜನ್ ಸಿಲಿಂಡರ್‍ಗಳು, ಕಾನ್ಸ್‍ನ್‍ಟ್ರೆಟರ್‍ಗಳು, ಕ್ರಯೊಜನಿಕ್ ಟ್ಯಾಂಕರ್‍ಗಳು, ರೆಮಿಡಿಸಿವಿರ್, ಟೋಸಿಲ್‍ಜುಮಬ್‍ಗಳು, ಬೀಪ್‍ಆಪ್‍ಗಳು ಹಾಗೂ ವೆಂಟಿಲೆಟರ್ಸ್‍ಗಳನ್ನು ಸರಬರಾಜು ಮಾಡುವಂತೆ ಆಗ್ರಹಿಸಿದ್ದಾರೆ.

ಇದರ ಜೊತೆಗೆ ಎಲ್ಲ ಭಾರತಿಯರಿಗೂ ಲಸಿಕೆ ಸಿಗುವಂತೆ ನೋಡಿಕೊಳ್ಳುವ ಜವಬ್ದಾರಿಯೂ ಅಮೆರಿಕಾದ ಮೇಲಿದೆ ಎಂದು ಲಾ ಮೇಕರ್ಸ್‍ಗಳು ಒತ್ತಾಯಿಸಿದ್ದಾರೆ.

Facebook Comments

Sri Raghav

Admin