BREAKING : ಚೀನಾಗೆ ಬಿಗ್ ಶಾಕ್ ಕೊಟ್ಟ ಭಾರತ, ಟಿಕ್ ಟಾಕ್ ಸೇರಿ 59 ಆಪ್ ಬ್ಯಾನ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ : ಗಡಿಯಲ್ಲಿ ಕಾಲ್ಕೆರೆದು ಕಿರಿಕ್ ಮಾಡುತ್ತಿದ್ದ ನದಿ ಬುದ್ದಿಯ ಚೀನಾಗೆ ಪ್ರಧಾನಿ ನರೇಂದ್ರ ಮೋದಿ ಸೈಲೆಂಟಾಗಿ ಹೊಡೆತಕೊಟ್ಟಿದ್ದು ಟಿಕ್ ಟಾಕ್ ಸೇರಿ ಚೀನಾ ಮೂಲಕ 59 ಆಪ್ ಗಳನ್ನು ಭಾರದಲ್ಲಿ ಬ್ಯಾನ್ ಮಾಡಿದೆ.

ಲಡಾಖ್ ಗಡಿಯಲ್ಲಿ ಚೀನಾ ಯೋಧರಿಂದ ಸಂಘರ್ಷ ಉಂಟಾದ ನಂತರದಲ್ಲಿ ಚೀನಾಗೆ ಸರಿಯಾಗೇ ಬಿಸಿ ಮುಟ್ಟಿಸಲು ಮುಂದಾಗಿರುವ ಕೇಂದ್ರ ಸರ್ಕಾರ ಮತ್ತೊಂದು ಕ್ರಮ ಕೈಗೊಂಡಿದ್ದು, ಟಿಕ್ ಟಾಕ್ ಸೇರಿದಂತೆ 59 ಚೀನಾ ಅಪ್ ಗಳನ್ನು ಬ್ಯಾನ್ ಮಾಡಲಾಗಿದೆ.

ಜನಪ್ರಿಯವಾಗಿರುವ ಟಿಕ್‌ಟಾಕ್ ಭಾರತದಲ್ಲಿ ಗರಿಷ್ಠ ಸಂಖ್ಯೆಯ ಬಳಕೆದಾರರನ್ನು ಹೊಂದಿದ್ದು, ಚೀನಾ ಮತ್ತು ಯುಎಸ್ ನಂತರದ ಸ್ಥಾನದಲ್ಲಿದೆ. 2020 ರ ಮೊದಲ ತ್ರೈಮಾಸಿಕದಲ್ಲಿ 1.5 ಬಿಲಿಯನ್ ಗಡಿ ದಾಟಿದ ಕೂಡಲೇ ಟಿಕ್‌ಟಾಕ್ 2 ಬಿಲಿಯನ್ ಗಡಿ ದಾಟಿದೆ. 2 ಬಿಲಿಯನ್‌ಗಳಲ್ಲಿ, ಭಾರತವು 611 ಮಿಲಿಯನ್‌ಗಿಂತಲೂ ಹೆಚ್ಚು ಡೌನ್‌ಲೋಡ್‌ಗಳನ್ನು ಹೊಂದಿರುವ ಅತಿದೊಡ್ಡ ಹಿಂಬಾಲಕರನ್ನು ಹೊಂದಿದೆ.

ಕಳೆದ ಕೆಲದಿನಗಳಿಂದ ಭಾರತದಲ್ಲಿ ಚೀನಾ ಪ್ರಾಡಕ್ಟ್‌ಗಳನ್ನ ಬಹಿಷ್ಕರಿಸಿ, ಚೀನಿ ಆಪ್‌ಗಳನ್ನ ಆನ್‌ಇನ್‌ಸ್ಟಾಲ್‌ ಮಾಡಿ ಅಭಿಯಾನ ಜೊರಾಗಿಯೇ ನಡೆಯುತ್ತಿದೆ. ಇದರ ಪರಿಣಾಮವಾಗಿ ಈಗಾಗಲೇ ಹಲವು ಆಪ್‌ಗಳು, ಹಲವು ಪ್ರಾಡಕ್ಟ್‌ಗಳನ್ನ ಬಾಯ್ಕಾಟ್‌ ಮಾಡಲಾಗುತ್ತಿದೆ. ಅದರಲ್ಲೂ ಸ್ಮಾರ್ಟ್‌ಫೋನ್‌ಗಳಲ್ಲಿರುವ ಚೀನಿ ಆಪ್‌ಗಳನ್ನ ಅನ್‌ಇನ್‌ಸ್ಟಾಲ್‌ ಮಾಡುತ್ತಿರುವುದರ ಬಗ್ಗೆ ಸೋಷಿಯಲ್‌ ಮಿಡಿಯಾದಲ್ಲಿ ಟ್ರೆಂಡ್‌ ಸೃಷ್ಟಿಯಾಗಿದೆ.

# ಕೇಂದ್ರ ಸರ್ಕಾರ ನಿಷೇಧಿಸಿದ ಅಪ್ಲಿಕೇಶನ್‌ಗಳ ಪಟ್ಟಿ ಇಲ್ಲಿದೆ:

Facebook Comments

Sri Raghav

Admin