6 ತಿಂಗಳಲ್ಲಿ 67 ಹುಲಿಗಳ ಸಾವು, ಕರ್ನಾಟಕದಲ್ಲೇ 14 ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

tiger

ನವದೆಹಲಿ, ಜೂ.27-ದೇಶದ ವಿವಿಧೆಡೆ ಈ ವರ್ಷದ ಮೊದಲ ಆರು ತಿಂಗಳ ಅವಧಿಯಲ್ಲಿ 67 ಹುಲಿಗಳು ಮೃತಪಟ್ಟಿರುವ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಅಂದರೆ 14 ವ್ಯಾಘ್ರಗಳು ಸತ್ತಿರುವುದು ಪರಿಸರವಾದಿಗಳಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಅವಧಿಯಲ್ಲಿ ಮೃತಪಟ್ಟ ಹುಲಿಗಳಲ್ಲಿ 36 ಹುಲಿಧಾಮಗಳ ಹೊರಗೆ ಹಾಗೂ 31 ಒಳಗೆ ಮೃತಪಟ್ಟಿವೆ. ಕಳೆದ ವರ್ಷ 122 ಮತ್ತು 2015ರಲ್ಲಿ 80 ಹುಲಿಗಳು ಪಾಣ ತೆತ್ತಿವೆ.
2017ರ ಪ್ರಥಮ ಆರು ತಿಂಗಳಲ್ಲಿ ಪ್ರತಿ ಮಾಸಕ್ಕೆ 11 ಹುಲಿಗಳಂತೆ ಅಸುನೀಗುತ್ತಿವೆ.

ದೇಶದಲ್ಲಿ ಮೂರು ದಿನಕ್ಕೊಂದು ವ್ಯಾಘ್ರ ಮೃತಪಡುತ್ತಿವೆ. ಆದರೂ ಸಾವಿನ ನಿಖರ ಕಾರಣಗಳನ್ನು ಪತ್ತೆ ಮಾಡಲು ಅರಣ್ಯಾಧಿಕಾರಿಗಳಿಗೆ ಸಾಧ್ಯವಾಗಿಲ್ಲ. ವ್ಯಾಘ್ರಗಳ ಸಾವಿನ ಬಗ್ಗೆ ಮೊದಲ ಆರು ತಿಂಗಳ ಅಂಕಿ-ಅಂಶಗಳು ಬಿಡುಗಡೆಯಾಗಿದ್ದು, 58 ಹುಲಿಗಳು ಜೀವಕಳೆದುಕೊಂಡಿವೆ. ಇತರ 9 ಪ್ರಕರಣಗಳಲ್ಲಿ ಹುಲಿಗಳ ಮೃತದೇಹದ ಭಾಗಗಳೂ ಮಾತ್ರ ಪತ್ತೆಯಾಗಿವೆ.

ವ್ಯಾಘ್ರಗಳ ಸಾವಿನ ಪ್ರಕರಣಗಳಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ (14). ಮಧ್ಯಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಕ್ರಮವಾಗಿ 13 ಮತ್ತು 9 ವ್ಯಾಘ್ರಗಳು ಸಾವಿಗೀಡಾಗಿವೆ. ವಿಶ್ವದ ಒಟ್ಟು ಹುಲಿಗಳ ಸಂಖ್ಯೆ ಶೇ.60ರಷ್ಟು ಭಾರತದಲ್ಲಿದೆ. 2014ರ ಗಣತಿ ಪ್ರಕಾರ 2,226 ವ್ಯಾಘ್ರಗಳು ದೇಶದಲ್ಲಿವೆ. 2010ರಲ್ಲಿ 1,706 ಮತ್ತು 2006ರಲ್ಲಿ 1,411 ಹುಲಿಗಳು ಇದ್ದವು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin