6 ಮುಸ್ಲಿಂ ದೇಶಗಳ ವೀಸಾ ಅರ್ಜಿದಾರರಿಗಾಗಿ ಹೊಸ ಮಾನದಂಡ ನಿಗದಿಪಡಿಸಿದ ಅಮೆರಿಕ

ಈ ಸುದ್ದಿಯನ್ನು ಶೇರ್ ಮಾಡಿ

Trump-a00-21

ವಾಷಿಂಗ್ಟನ್ ಜೂ.29-ಆರು ಪ್ರಮುಖ ಮುಸ್ಲಿಂ ದೇಶಗಳು ಮತ್ತು ಎಲ್ಲ ನಿರಾಶ್ರಿತ ವೀಸಾ ಅರ್ಜಿದಾರರಿಗಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಹೊಸ ಮಾನದಂಡ ನಿಗದಿಯಾಗಿದೆ ವೀಸಾ ಪಡೆಯಲು ಅಮೆರಿಕದಲ್ಲಿರುವ ತಮ್ಮ ನಿಕಟ ಕೌಟುಂಬಿಕ ಅಥವಾ ವಾಣಿಜ್ಯ ಸಂಬಂಧವನ್ನು ಸಾಬೀತುಗೊಳಿಸುವುದನ್ನು ಕಡ್ಡಾಯಗೊಳಿಸಲಾಗಿದೆ.  ಮುಸ್ಲಿಂ ಬಾಹುಳ್ಯವಿರುವ ಆರು ದೇಶಗಳ ಜನರಿಗೆ ಅಮೆರಿಕ ಪ್ರವೇಶ ನಿರ್ಬಂಧ ವಿಧಿಸಿ ಟ್ರಂಪ್ ಈ ಹಿಂದೆ ಹೊರಡಿಸಿದ್ದ ಆದೇಶಕ್ಕೆ ಭಾರೀ ಟೀಕೆಗಳು ವ್ಯಕ್ತವಾಗಿತ್ತು. ನಂತರ ಅಧ್ಯಕ್ಷರ ಕಾರ್ಯಕಾರಿ ಆದೇಶವನ್ನು ಸುಪ್ರೀಂಕೋರ್ಟ್ ಭಾಗಶ: ಜಾರಿಗೊಳಿಸಿದ ನಂತರ ಈ ಬೆಳವಣಿಗೆ ಕಂಡುಬಂದಿದೆ.

ಈ ಸಂಬಂಧ ಆರು ದೇಶಗಳಲ್ಲಿರುವ ಅಮೆರಿಕದ ರಾಯಭಾರಿ ಕಚೇರಿಗಳು, ರಾಜತಾಂತ್ರಿಕ ಕಾರ್ಯಾಲಯಗಳು ಮತ್ತು ಕಾನ್ಸುಲೇಟ್ ಕೇಂದ್ರಗಳಿಗೆ ಹೊಸ ಮಾರ್ಗಸೂಚಿಗಳನ್ನು ನಿನ್ನೆ ರವಾನಿಸಲಾಗಿದೆ.   ಆರು ಮುಸ್ಲಿಂ ದೇಶಗಳು ಮತ್ತು ಎಲ್ಲ ನಿರಾಶ್ರಿತ ವೀಸಾ ಅರ್ಜಿದಾರರಿಗಾಗಿ ಅಮೆರಿಕದಲ್ಲಿರುವ ಪೋಷಕರು, ಹೆತ್ತವರು, ಸಂಗಾತಿ(ಪತಿ/ಪತ್ನಿ), ಮಗು, ವಯಸ್ಕ ಪುತ್ರ ಅಥವಾ ಪುತ್ರಿ, ಅಳಿಯ, ಸೊಸೆ ಅಥವಾ ಸಹೋದರ-ಸಹೋದರಿ ಇವರೊಂದಿಗೆ ಹೊಂದಿರುವ ಸಂಬಂಧವನ್ನು ಸಾಬೀತು ಮಾಡಬೇಕೆಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಅಜ್ಜ-ಅಜ್ಜಿಯರು, ಮೊಮ್ಮಕ್ಕಳು, ಚಿಕ್ಕಮ್ಮ, ಸೋದರ ಅತ್ತೆ, ಚಿಕ್ಕಪ್ಪ, ಸೋದರ ಮಾವ, ಸೋದರ ಸಂಬಂಧಿಗಳು, ಸೋದರ-ಸೋದರಿ ಪುತ್ರರು-ಪುತ್ರಿಯರು, ಬಾವ ಮೈದುನ, ಬಾವ ಮತ್ತು ಅತ್ತಿಗೆ, ನಾದಿನಿ, ಪ್ರಿಯಕರ-ಪ್ರಿಯತಮೆ ಅಥವಾ ಕುಟುಂಬದ ದೂರದ ಸಂಬಂಧಿಗಳನ್ನು ನಿಕಟ ಬಂಧುಗಳು ಎಂದು ಪರಿಗಣಿಸಲಾಗುವುದಿಲ್ಲ ಎಂದು ಮಾನದಂಡದಲ್ಲಿ ತಿಳಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin