6 ರಾಜ್ಯಗಳ ಉಪಚುನಾವಣೆ ಫಲಿತಾಂಶ ಪ್ರಕಟ

ಈ ಸುದ್ದಿಯನ್ನು ಶೇರ್ ಮಾಡಿ

Result

  • ಪುದುಚೇರಿ ಮುಖ್ಯಮಂತ್ರಿ ಗೆಲುವು  * ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಜಯಭೇರಿ  * ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಜಯ *ತ್ರಿಪುರದಲ್ಲಿ ಸಿಪಿಎಂ ಗೆಲುವು

ನವದೆಹಲಿ, ನ.22-ನೋಟು ರದ್ಧತಿ ಛಾಯೆಯ ನಡುವೆ ಆರು ರಾಜ್ಯಗಳಲ್ಲಿ ನಡೆದ ವಿವಿಧ ವಿಧಾನ ಸಭೆಗಳ ಉಪಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣ ಸ್ವಾಮಿ ನಲ್ಲಿತೋಪೆ ವಿಧಾನಸಭಾ ಕ್ಷೇತ್ರದಿಂದ ಜಯಗಳಿಸಿದ್ದಾರೆ. ಪಶ್ಚಿಮಬಂಗಾಳದ ಎಲ್ಲ ಮೂರು ಸ್ಥಾನಗಳಲ್ಲಿ ಆಡಳಿತರೂಢ ತೃಣಮೂಲ ಕಾಂಗ್ರೆಸ್ ವಿಜಯಿಯಾಗಿದೆ. ಮಧ್ಯಪ್ರದೇಶದಲ್ಲಿ ಬಿಜೆಪಿ ತನ್ನ ಒಂದು ಸ್ಥಾನ ಉಳಿಸಿಕೊಂಡಿದೆ.  ಪಶ್ಚಿಮಬಂಗಾಳ, ಅರುಣಾಚಲ ಪ್ರದೇಶ, ತ್ರಿಪುರ, ಮಧ್ಯಪ್ರದೇಶ, ತಮಿಳುನಾಡು ಮತ್ತು ಪುದುಚೇರಿ ರಾಜ್ಯಗಳ ಲೋಕಸಭೆ ಮತ್ತು ವಿಧಾನಸಭೆ ಉಪಚುನಾವಣೆ ಹಾಗೂ ಮಹಾರಾಷ್ಟ್ರ ವಿಧಾನ ಪರಿಷತ್‍ಗೆ ನ.19ರಂದು ಮತದಾನ ನಡೆದಿತ್ತು.

ವಿಧಾನಸಭೆಯಿಂದ ಆಯ್ಕೆಯಾಗದೇ ಪುದುಚೇರಿ ಮುಖ್ಯಮಂತ್ರಿಯಾಗಿರುವ ನಾರಾಯಣಸ್ವಾಮಿ ಆಯ್ಕೆಯನ್ನು ಸುಗಮಗೊಳಿಸಲು ನಲ್ಲಿತೋಪೆ ವಿಧಾನಸಭಾ ಕ್ಷೇತ್ರವನ್ನು ಜಾನ್ ಕುಮಾರ್ ಬಿಟ್ಟು ಕೊಟ್ಟಿದ್ದರು. ನಿರೀಕ್ಷೆಯಂತೆ ನಾರಾಯಣಸ್ವಾಮಿ ಗೆಲುವು ಸಾಧಿಸಿದ್ದಾರೆ.

ಪಶ್ಚಿಮ ಬಂಗಾಳ :

ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಎಲ್ಲ ಮೂರು ಕ್ಷೇತ್ರಗಳಲ್ಲೂ ಜಯಭೇರಿ ಬಾರಿಸಿದೆ. ಕೂಚ್‍ಬೆಹರ್ ಮತ್ತು ಟಮ್ಲುಕ್ ಲೋಕಸಭಾ ಕ್ಷೇತ್ರಗಳಲ್ಲಿ ಕ್ರಮವಾಗಿ ಪಾರ್ಥಪ್ರತಿಮ್ ರಾಯ್ ಮತ್ತು ದಿವ್ಯೇಂದು ಅಧಿಕಾರಿ ಪ್ರಚಂಡ ಗೆಲುವು ದಾಖಲಿಸಿದ್ದಾರೆ.

ಮಧ್ಯಪ್ರದೇಶ:
ನೇಪಾನಗರದಲ್ಲಿ ಬಿಜೆಪಿ ಅಭ್ಯರ್ಥಿ ಮಂಜುದಾದು 42,198 ಮತಗಳ ಭಾರೀ ಅಂತರದಿಂದ ಜಯಸಾಧಿಸಿದ್ದಾರೆ.

ತ್ರಿಪುರ:
ಈಶಾನ್ಯ ಭಾರತದ ತ್ರಿಪುರ ರಾಜ್ಯದ ಬಾಜರ್ಲ ಮತ್ತು ಖೋವೈ ಈ ಎರಡೂ ವಿಧಾನಸಭಾ ಕ್ಷೇತ್ರಗಳನ್ನು ಸಿಪಿಎಂ ಉಳಿಸಿಕೊಂಡಿದೆ. ಜುಮು ಸರ್ಕಾರ್ ಮತ್ತು ಬಿಸ್ವಜಿತ್ ದತ್ತಾ ಕ್ರಮವಾಗಿ ಈ ಕ್ಷೇತ್ರಗಳಲ್ಲಿ ಜಯಸಾಧಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin